ಉಜಿರೆ ಬಾಲಕನ ಅಪಹರಣ: 60 ಬಿಟ್ ಕಾಯಿನ್​ ಕೇಳ್ತಿದ್ದಾರೆ ಕಿಡ್ನಾಪರ್ಸ್.. ಯಾವ ಲೊಕೇಶನ್​ನಿಂದ?

|

Updated on: Dec 18, 2020 | 1:09 PM

ಉಜಿರೆಯಲ್ಲಿ 8 ವರ್ಷದ ಬಾಲಕ ಅನುಭವ್​ನನ್ನು ಕಿಡ್ನಾಪರ್ಸ್ ಅಪಹರಣ ಮಾಡಿ, ಆತನ ತಂದೆ ಬಿಜೋಯ್​ಗೆ 17 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಮತ್ತೊಂದು ಕಡೆ ಕಿಡ್ನಾಪರ್ಸ್​ಗೆ ಬಾಲಕನ ತಂದೆ ಕೇಸ್ ದಾಖಲಿಸಿರುವುದು ಕೋಪಗೊಳ್ಳುವಂತೆ ಮಾಡಿದೆಯಂತೆ! ಈ ಮಧ್ಯೆ, ಬಾಲಕನ ಪರಿಸ್ಥಿತಿಯೇನು? ಎಂದು ರಾಜ್ಯದ ಜನತೆ ಆತಂಕದಿಂದ  ಎದುರು ನೋಡುವಂತಾಗಿದೆ.

ಉಜಿರೆ ಬಾಲಕನ ಅಪಹರಣ: 60 ಬಿಟ್ ಕಾಯಿನ್​ ಕೇಳ್ತಿದ್ದಾರೆ ಕಿಡ್ನಾಪರ್ಸ್.. ಯಾವ ಲೊಕೇಶನ್​ನಿಂದ?
Follow us on

ಮಂಗಳೂರು: ಉಜಿರೆಯಲ್ಲಿ 8 ವರ್ಷದ ಬಾಲಕ ಅನುಭವ್​ನನ್ನು ಕಿಡ್ನಾಪರ್ಸ್ ಅಪಹರಣ ಮಾಡಿ, ಆತನ ತಂದೆ ಬಿಜೋಯ್​ಗೆ 17 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಸದ್ಯ ಪೊಲೀಸರು ಪ್ರಕರಣ ಸಂಬಂಧ ಭಾರೀ ಕಾರ್ಯಚರಣೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಕಿಡ್ನಾಪರ್ಸ್​ಗೆ ಬಾಲಕನ ತಂದೆ ಕೇಸ್ ದಾಖಲಿಸಿರುವುದು ಮತ್ತಷ್ಟು ಕೋಪಗೊಳ್ಳುವಂತೆ ಮಾಡಿದೆಯಂತೆ! ಈ ಮಧ್ಯೆ, ಬಾಲಕನ ಪರಿಸ್ಥಿತಿಯೇನು? ಎಂದು ರಾಜ್ಯದ ಜನತೆ ಆತಂಕದಿಂದ ಎದುರು ನೋಡುವಂತಾಗಿದೆ.

ಅಪಹರಣಕಾರರಿಂದ ಬಾಲಕನ ತಂದೆಗೆ ಮೆಸೇಜ್, ನೆಟ್‌ವರ್ಕ್ ಲೊಕೇಶನ್ ಹಾಸನ ಭಾಗದ್ದು:
ಪ್ರಕರಣ ಸಂಬಂಧ ಪೊಲೀಸರಿಗೆ ದೂರು ನೀಡದಂತೆ ಕಿಡ್ನಾಪರ್ಸ್ ಅನುಭವ್ ತಂದೆಗೆ ಮೆಸೇಜ್ ಮಾಡಿದ್ದಾರೆ. ದೂರು ನೀಡಿದರೆ ಅನುಭವಿಸುತ್ತೀರಿ ಎಂದು ಮೆಸೇಜ್ ಹಾಕಿದ್ದು ಹಾಸನ ಭಾಗದ ನೆಟ್‌ವರ್ಕ್ ಲೊಕೇಶನ್‌ನಿಂದ ಮೆಸೇಜ್ ಬಂದಿದೆ. ಅಪಹರಣವಾಗುತ್ತಿದ್ದಂತೆ.. ನಿನ್ನೆಯೇ 100 ಬಿಟ್ ಕಾಯಿನ್ ನೀಡುವಂತೆ ಒತ್ತಾಯಿಸಿದ್ದ ಕಿಡ್ನ್ಯಾಪರ್ಸ್ ಇಂದು 60 ಬಿಟ್ ಕಾಯಿನ್​ಗೆ ಇಳಿದಿದ್ದು.. ಒತ್ತೆ ಹಣಕ್ಕೆ ಭಾರೀ ಒತ್ತಡ ಹಾಕುತ್ತಿದ್ದಾರೆ. 60 ಬಿಟ್ ಕಾಯಿನ್ ಮೌಲ್ಯ 10 ಕೋಟಿ ರೂಪಾಯಿಯಷ್ಟಿದೆ.

ಬಾಲಕನ ಮನೆಗೆ ದಕ್ಷಿಣ ಕನ್ನಡ ಎಸ್‌ಪಿ ಭೇಟಿ:
ಸದ್ಯ ಬಿಜೋಯ್​ಗೆ ಕಿಡ್ನ್ಯಾಪರ್ಸ್​ಗಳಿಂದ ಮೆಸೇಜ್ ಬಂದ ಹಿನ್ನೆಲೆಯಲ್ಲಿ ಉಜಿರೆಯ ರಥಬೀದಿಯಲ್ಲಿರುವ ಅನುಭವ್ ಮನೆಗೆ ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಭೇಟಿ ನೀಡಿ ಪೋಷಕರಿಂದ ಮಾಹಿತಿ ಪಡೆಯುತ್ತಿದ್ದಾರೆ.ಜೊತೆಗೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿದ್ದು ಮಾಜಿ ಸೈನಿಕನ ಶಿವನ್ ಪುತ್ರ ಬಿಜೋಯ್​ನ ಮಗನ ಅಪಹರಣಕ್ಕೆ ಹಣಕಾಸಿನ ವ್ಯವಹಾರ ಕಾರಣವಿರಬಹುದು ಎಂಬ ಶಂಕೆ ಇದೆ. ಮಾಜಿ ಸೈನಿಕ ಶಿವನ್ ಒಬ್ಬ ದೊಡ್ಡ ಉದ್ಯಮಿ.

ಪರಿಚಯಸ್ಥರೇ ಬಾಲಕನನ್ನು ಅಪಹರಿಸಿದ್ರ?
ಇನ್ನು ಕುಟುಂಬಸ್ಥರ ಭೇಟಿ ಬಳಿಕ ಮಾತನಾಡಿದ ಎಸ್​ಪಿ ಲಕ್ಷ್ಮೀಪ್ರಸಾದ್ ಪರಿಚಯಸ್ಥರೇ ಬಾಲಕನನ್ನು ಅಪಹರಿಸಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೂ ಪೋಷಕರ ದೂರಿನ ಆಧಾರದಲ್ಲಿ FIR ದಾಖಲು ಮಾಡಿದ್ದೇವೆ. ಅಪಹೃತ ಬಾಲಕನ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಅಪಹರಣಕಾರರು ಬಿಟ್ ಕಾಯಿನ್​ ಕಳಿಸಿ ಎಂದು ಕೇಳ್ತಿದ್ದಾರೆ. ಬಿಟ್​ ಕಾಯಿನ್ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅಪಹೃತ ಬಾಲಕ ಅನುಭವ್​ ಎಲ್ಲಿದ್ದಾನೆಂದು ಗೊತ್ತಾಗುತ್ತಿಲ್ಲ. ಬಂಟ್ವಾಳ ಡಿವೈಎಸ್​ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಪೊಲೀಸರ 4 ತಂಡಗಳನ್ನು ರಚಿಸಿ ತನಿಖೆ ಮಾಡುತ್ತಿದ್ದೇವೆ. ಬಾಲಕ ಅನುಭವ್​ ಮನೆಯವರಿಂದ ಮಾಹಿತಿ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ

ಉಜಿರೆಯಲ್ಲಿ 8ವರ್ಷದ ಬಾಲಕನ ಅಪಹರಣ, 17ಕೋಟಿಗೆ ಬೇಡಿಕೆ: ಚಾರ್ಮಾಡಿ ಘಾಟ್​ನಲ್ಲಿ ನಾಕಾಬಂದಿ

Published On - 12:28 pm, Fri, 18 December 20