ವಿದ್ಯಾರ್ಥಿನಿಯರ ಅಂಗಾಂಗಗಳನ್ನು ಮುಟ್ಟಿ ವಿಕೃತಿ ಮೆರೆಯುತ್ತಿದ್ದ ಶಾಲಾ ಮಾಲೀಕ ಅರೆಸ್ಟ್

ನೆಲಮಂಗಲದ ಕಿತ್ತನಹಳ್ಳಿಯ ವಿಭಾ ಇಂಟರ್​ನ್ಯಾಷನಲ್ ಶಾಲೆ ಮಾಲೀಕ ಈರತ್ತಯ್ಯನ ಬಗೆದಷ್ಟು ಕಾಮಚೇಷ್ಠ ಹೊರಬರುತ್ತಿವೆ. ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ನಡೆದುಕೊಂಡು ತೃಪ್ತಿಪಡುತ್ತಿದ್ದ ಶಾಲೆ ಮಾಲೀಕ ಈರತ್ತಯ್ಯ ವಿರುದ್ದ ಪೋಕ್ಸೋ ಆಕ್ಟ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ವಿದ್ಯಾರ್ಥಿನಿಯರ ಅಂಗಾಂಗಗಳನ್ನು ಮುಟ್ಟಿ ವಿಕೃತಿ ಮೆರೆಯುತ್ತಿದ್ದ ಶಾಲಾ ಮಾಲೀಕ ಅರೆಸ್ಟ್
ಈರತ್ತಯ್ಯ
Follow us
ಬಿ ಮೂರ್ತಿ, ನೆಲಮಂಗಲ
| Updated By: ರಮೇಶ್ ಬಿ. ಜವಳಗೇರಾ

Updated on:Nov 15, 2024 | 8:30 PM

ಬೆಂಗಳೂರು, (ನವೆಂಬರ್ 15): ನೆಲಮಂಗಲದ ಕಿತ್ತನಹಳ್ಳಿಯ ವಿಭಾ ಇಂಟರ್​ನ್ಯಾಷನಲ್​ ​ ಶಾಲಾ ಮಾಲೀಕ ಈರತ್ತಯ್ಯನ ಕಾಮಚೇಷ್ಠೆ ಬಟಾಬಯಲಾಗಿದೆ. ವಿದ್ಯಾರ್ಥಿನಿಯರನ್ನು ತನ್ನ ಕ್ಯಾಬಿನ್​ಗೆ ಕರೆಯಿಸಿಕೊಂಡು ಅವರ ಅಂಗಾಂಗಗಳನ್ನು ಮುಟ್ಟಿ, ವರ್ಣಿಸಿ ವಿಕೃತಿ ಮೆರೆಯುತ್ತಿದ್ದ ಎಂದು ಆರೋಪಿಸಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಹೆಣ್ಣು ಮಕ್ಕಳ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ನಡೆಸುತ್ತಲೇ ಇದ್ದ ಎಂದು ನೊಂದ ವಿದ್ಯಾರ್ಥಿ ದೂರು ದಾಖಲಿಸಿದ್ದು, ದೂರಿನಲ್ಲಿ ಈತನ ಕಾಮಚೇಷ್ಠೆಯ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ. ಸದ್ಯ ಈ ದೂರಿನ ಮೇರೆಗೆ ಮಾದನಾಯಕನಹಳ್ಳಿಯ ಪೊಲೀಸರು. ಶಾಲಾ ಮಾಲೀಕ ಈರತ್ತಯ್ಯನನ್ನು ಪೋಕ್ಸೋ ಆಕ್ಟ್ ಅಡಿಯಲ್ಲಿ ‌ಬಂಧಿಸಿ ಜೈಲಿಗಟ್ಟಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ವಿದ್ಯಾರ್ಥಿನಿಯರ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ತನ್ನ ಕ್ಯಾಬಿನ್ ಗೆ ವಿದ್ಯಾರ್ಥಿನಿಯರನ್ನು ಕರೆಯಿಸಿಕೊಂಡು ಅವರ ಅಂಗಾಂಗಗಳನ್ನು ಮುಟ್ಟಿ ವಿಕೃತ ಆನಂದಪಡುತ್ತಿದ್ದ. ಸಾಲದಕ್ಕೆ ಅವರ ಅಂಗಾಂಗಗಳನ್ನು ಹಣ್ಣುಗಳಿಗೆ ಹೋಲಿಕೆ ಮಾಡಿ ವರ್ಣನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಇನ್ನು ವಿದ್ಯಾರ್ಥಿನಿಯರು ಸಹ ತಮಗಾದ ಕಿರುಕುಳ ಬಗ್ಗೆ ಎಫ್​ಐಆರ್​ನಲ್ಲಿ ವಿವರಿಸಿದ್ದಾರೆ.

ಶಾಲಾ ಮಾಲೀಕನ ಕಾಮಚೇಷ್ಠೆ ವಿವರಿಸಿದ ವಿದ್ಯಾರ್ಥಿನಿ

ನಮ್ಮ ಗ್ರಾಮದಲ್ಲಿರುವ ವಿಭಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿರುತ್ತೇನೆ. ಈಗ್ಗೆ ಕಳೆದ 4 ತಿಂಗಳಿನಿಂದ ನಮ್ಮ ಶಾಲೆಯ ಸೆಕ್ರೆಟರಿಯಾದ ಈರತ್ತಯ್ಯರವರು ನನ್ನನ್ನು ಒಬ್ಬಳನ್ನೇ ಅವರ ಕ್ಯಾಬಿನ್ ಗೆ ಕರೆಸಿಕೊಂಡು ನನ್ನ ತುಟಿಗೆ ಮುತ್ತನ್ನು ಕೊಟ್ಟರು, ಅವರು ನನ್ನ ಬಳಿ ಪೀರಿಯಡ್ಸ್ ಮತ್ತು ನನ್ನ ದೇಹದ ಅಂಗಾಂಗಗಳ ಬಗ್ಗೆ ಅಸಹ್ಯವಾಗಿ ಮಾತನಾಡಿದರು. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ಹೆದರಿಸಿದ್ದರಿಂದ ಎಲ್ಲವನ್ನು ಸಹಿಸಿಕೊಂಡಿದ್ದೆ ಎಂದಿದ್ದಾಳೆ.

ಸುಮಾರು 2 ತಿಂಗಳ ಹಿಂದೆ ನನ್ನನ್ನು ಅವರ ಕ್ಯಾಬಿನ್ ಗೆ ಕರೆಸಿಕೊಂಡು ನಿನಗೊಂದು ಉದಾಹರಣೆ ಕೂಡಲೇ ಎಂದು ಕೇಳಿದರು. ನಾನು ಹೇಳಿ ಎಂದೆ, ಅದಕ್ಕೆ ಈರತ್ತಯ್ಯರವರು ನನಗೆ ಆಸೆಯಾಗಿ ನಿನ್ನ ಕರೆದರೆ ಬರುತ್ತೀಯಾ ಎಂದು ಕೇಳಿದರು. ಅಷ್ಟೇ ಅಲ್ಲದೇ ನಿನಗೆ ಅಪ್ಪನ ಪ್ರೀತಿ ಬೇಕಾ ಇಲ್ಲ ನನ್ನ ಪ್ರೀತಿ ಬೇಕಾ ಎಂದು ಕೇಳಿದ್ದಾರೆ. ಆಗ ನಾನು ಭಯಪಟ್ಟು ಏನನ್ನೂ ಹೇಳದೇ ಮಾನಸಿಕವಾಗಿ ಕುಗ್ಗಿ ಹೋದೆ. ಆಗಾಗ ಸ್ಪೆಷಲ್ ಕ್ಲಾಸ್ ಭಾನುವಾರದ ವೇಳೆ ಕ್ಯಾಬಿನ್ ಗೆ ಕರೆದು ಮತ್ತು ಬಸ್ ನಲ್ಲಿ ಹೋಗುವಾಗ ಎಲ್ಲಾ ಮಕ್ಕಳು ಇಳಿದ ಮೇಲೆ ನನ್ನನ್ನು ಲಾಸ್ಟ್ ಸೀಟಿಗೆ ಕರೆದುಕೊಂಡು ಹೋಗಿ ಮುತ್ತು ಕೊಡುವುದು ಮತ್ತು ಅಂಗಾಂಗಗಳನ್ನು ಅಸಭ್ಯವಾಗಿ ಮುಟ್ಟುವುದು ಮಾಡುತ್ತಿದ್ದ. ಇವರು ನಮ್ಮ ಶಾಲೆಯ ಮಾಲೀಕರು ಎಂದು ಅವರಿಗೆ ಭಯಪಟ್ಟು ಸುಮ್ಮನಾಗಿದ್ದೆ. ಈ ರೀತಿ ಕಿರುಕುಳ ಸಹಿಸಿಕೊಂಡು ಸಾಕಾಗಿತ್ತು ಎಂದು ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಾಳೆ.

ಇಷ್ಟೇ ಅಲ್ಲದೆ ಈರಯ್ಯ ಹೆಣ್ಣು ಮಕ್ಕಳ ಎದೆ ಭಾಗ ಮುಟ್ಟಿ ಹಣ್ಣುಗಳಿಗೆ ಹೋಲಿಕೆ ಮಾಡಿ ವರ್ಣನೆ ಮಾಡುತ್ತಿದ್ದನಂತೆ. ಅಸಭ್ಯ ವರ್ತನೆ ಬಗ್ಗೆ ಶಿಕ್ಷಕರು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಕೂಡಲೇ ಮಾದನಾಯಕನಹಳ್ಳಿಯ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಾಥಮಿಕ ಹಂತದ ತನಿಖೆ ನಡೆಸಿ ಅರೋಪಿಯನ್ನ ಜೈಲಿಗೆ ಕಳುಹಿಸಿದ್ದಾರೆ.

ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು. ಈ ಹಕ್ಕನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಶಾಲೆಯವರು ಹೆಣ್ಣು ಮಕ್ಕಳ ಜೊತೆ ಅಸಭ್ಯ ವರ್ತನೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಒಂದು ಕಡೆ ಲಕ್ಷ ಲಕ್ಷ ಹಣ ಪೀಕುತವುದರ ಜೊತೆಗೆ ಮಕ್ಕಳೊಂದಿಗೆ ಅಸಭ್ಯ ವರ್ತನೆ. ಇದಕ್ಕೆಲ್ಲ ಬ್ರೇಕ್ ಬೀಳಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:23 pm, Fri, 15 November 24

ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ