AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಬಂಧಿಕರ ಮನೆಗೆ ಹೋಗಿದ್ದ ಕೊಡಗಿನ 9 ವರ್ಷದ ಬಾಲಕ ವಯನಾಡ್ ಗುಡ್ಡ ಕುಸಿತದಲ್ಲಿ ದುರಂತ ಸಾವು

ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ 200 ದಾಟಿದೆ. ದುರಾದೃಷ್ಟ ಎಂಬಂತೆ ಸಂಬಂಧಿಕರ ಮನೆಗೆ ಹೋಗಿದ್ದ ಕರ್ನಾಟಕದ ಕೊಡಗಿನ 9 ವರ್ಷದ ಬಾಲಕ ವಯನಾಡ್ ಗುಡ್ಡ ಕುಸಿತದಲ್ಲಿ ದುರಂತ ಅಂತ್ಯ ಕಂಡಿದ್ದಾನೆ. ಮೃತನ ತಾಯಿ ಕವಿತಾ ಎಂಬುವವರ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದ್ದು, ಸದ್ಯ ಕೇರಳದ ವಯನಾಡಿಗೆ ಕವಿತಾ ಪತಿ ರವಿ ತೆರಳಿದ್ದಾರೆ.

ಸಂಬಂಧಿಕರ ಮನೆಗೆ ಹೋಗಿದ್ದ ಕೊಡಗಿನ 9 ವರ್ಷದ ಬಾಲಕ ವಯನಾಡ್ ಗುಡ್ಡ ಕುಸಿತದಲ್ಲಿ ದುರಂತ ಸಾವು
ಕೊಡಗಿನ 9 ವರ್ಷದ ಬಾಲಕ ವಯನಾಡ್ ಗುಡ್ಡ ಕುಸಿತದಲ್ಲಿ ದುರಂತ ಸಾವು
Follow us
Gopal AS
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 31, 2024 | 7:21 PM

ಕೊಡಗು, ಜು.31: ದೇವರನಾಡು ಕೇರಳದಲ್ಲಿ ನಡೆದ ಗುಡ್ಢ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವು ನೋವು ಸಂಭವಿಸಿದೆ. ಅದರಂತೆ ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮಿಪದ ಗುಹ್ಯ ಗ್ರಾಮದ ಬಾಲಕನೋರ್ವ ಈ ದುರಂತದಲ್ಲಿ ಕೊನೆಯುಸಿರೆಳೆದಿದ್ದಾನೆ. ರೋಹಿತ್(9) ಮೃತ ಬಾಲಕ. ಇತ ತಾಯಿಯ ಜೊತೆ ವಯನಾಡಿಗೆ ಸಂಬಂಧಿಕರ‌ ಮನೆಗೆ ತೆರಳಿದ್ದ. ಇನ್ನು ಮೃತ ರೋಹಿತ್ ತಾಯಿ ಕವಿತಾ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದ್ದು, ಸದ್ಯ ಕೇರಳದ ವಯನಾಡಿಗೆ ಕವಿತಾ ಪತಿ ರವಿ ತೆರಳಿದ್ದಾರೆ.

ಶಾಲೆಗೆ ರಜೆ ಹಿನ್ನಲೆ ಸಂಬಂಧಿಕರ ಮನೆಗೆ ತೆರಳಿದ್ದ ಅಮ್ಮ-ಮಗ

ಇನ್ನು ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗುಯ್ಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ರೋಹಿತ್‌, ಶಾಲೆಗೆ ರಜೆ ಹಿನ್ನಲೆ ಕೇರಳ ರಾಜ್ಯದ ಮೇಪಾಡಿಯದ ಸಂಬಂಧಿಕರ ಮನೆಗೆ ತಾಯಿಯ ಜೊತೆ ಹೋಗಿದ್ದ. ದುರಾದೃಷ್ಟ ಎಂಬಂತೆ ವಯನಾಡ್​ನಲ್ಲಿ ಭೀಕರ ಗುಡ್ಡ ಕುಸಿತ ಸಂಭವಿಸಿದೆ. ಕಾರ್ಯಾಚರಣೆ ವೇಳೆ ರೋಹಿತ್​ ಮೃತದೇಹ ಮಣ್ಣಿನ ಅಡಿಯಲ್ಲಿ ಪತ್ತೆಯಾಗಿದ್ದು, ತಾಯಿ ಕವಿತಾ ಎಂಬುವವರ ಮೊಬೈಲ್​ ಕೂಡ ಸ್ವಿಚ್ಚ ಆಫ್​ ಆಗಿದೆ.

ಇದನ್ನೂ ಓದಿ:ವಯನಾಡಿನಲ್ಲಿ ಗುಡ್ಡ ಕುಸಿತ ದುರಂತಕ್ಕೆ ಮುನ್ನ ಬದಲಾಗಿತ್ತು ನದಿ ನೀರಿನ ಬಣ್ಣ; ಇದಾಗಿತ್ತೇ ಅಪಾಯದ ಸೂಚನೆ?

ದುರಂತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 200 ಕ್ಕೆ ಏರಿಕೆ

ಈ ಭೀಕರ ದುರಂತದಲ್ಲಿ ಈವರೆಗೂ ಒಟ್ಟು 205 ಜನರ ದುರ್ಮರಣ ಹೊಂದಿದ್ದಾರೆ. ಅದರಲ್ಲಿ 103 ಮೃತದೇಹಗಳ ಗುರುತು ಮಾತ್ರ ಪತ್ತೆಯಾಗಿದೆ. ಜೊತೆಗೆ 200 ಜನರು ನಾಪತ್ತೆ ಆಗಿದ್ದಾರೆ ಎಂಬ ಮಾಹಿತಿ ಕೂಡ ಇದೆ. ಸಧ್ಯ ರಕ್ಷಣೆ ಮಾಡಿದ 128 ಜನರಿಗೆ ವಿವಿಧ ಕಡೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 3,478 ಜನರನ್ನು ರಕ್ಷಣಾ ಕ್ಯಾಂಪ್​ಗಳಿಗೆ ರವಾನೆ ಮಾಡಲಾಗಿದೆ. ಈ ಕುರಿತು ಕೇರಳ ಸರ್ಕಾರ ಮಾಹಿತಿ ನೀಡಿದೆ. ಇನ್ನು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ