ಮಡಿಕೇರಿಯಲ್ಲಿ ಯುವತಿಯನ್ನ ಮಚ್ಚಿನಿಂದ ಕೊಚ್ಚಿ ಹತ್ಯೆಗೈದು ಕೆರೆಗೆ ಹಾರಿದ್ದ ಹಂತಕನ‌ ದೇಹ ಪತ್ತೆ

ಮಡಿಕೇರಿಯ ನಾಂಗಲ ಗ್ರಾಮದ ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪಿ ತಿಮ್ಮಯ್ಯ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಡಿಕೇರಿಯಲ್ಲಿ ಯುವತಿಯನ್ನ ಮಚ್ಚಿನಿಂದ ಕೊಚ್ಚಿ ಹತ್ಯೆಗೈದು ಕೆರೆಗೆ ಹಾರಿದ್ದ ಹಂತಕನ‌ ದೇಹ ಪತ್ತೆ
ಕೊಲೆಯಾದ ಆರತಿ, ಮೃತ ಆರೋಪಿ ತಿಮ್ಮಯ್ಯ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 18, 2023 | 7:43 AM

ಕೊಡಗು: ನಾಂಗಲ ಗ್ರಾಮದ ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪಿ ತಿಮ್ಮಯ್ಯ, ಯುವತಿ ಮನೆ ಬಳಿಯಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿ ಕೃತ್ಯ ನಡೆದ ದಿನ (ಜ.16) ರಂದು ಕೆರೆಗೆ ಹಾರಿದ್ದು, ಆರೋಪಿಗಾಗಿ ಮೂರು ದಿನಗಳಿಂದ ಶೋಧಕಾರ್ಯ ನಡೆಯುತ್ತಿತ್ತು. ಇಂದು (ಜ.18) ಮೂರು ದಿನಗಳ‌ ಬಳಿಕ ಕೆರೆಯ ಆಳದ ಗಿಡಗಂಟಿಗಳ‌ ಮಧ್ಯೆ ಸಿಲುಕಿದ್ದ ತಿಮ್ಮಯ್ಯನ ದೇಹ ಪತ್ತೆಯಾಗಿದೆ.

ಯುವತಿಯನ್ನ ಮಚ್ಚಿನಿಂದ ಕೊಚ್ಚಿ ಬರ್ಬರ ಕೊಲೆಗೈದಿದ್ದ ತಿಮ್ಮಯ್ಯ

ಜನವರಿ 16ರಂದು ರಾಜಪೇಟೆ ತಾಲ್ಲೂಕಿನ ನಾಂಗಲದಲ್ಲಿ ಬುಟ್ಟಿಯಂಡ ಆರತಿ(24) ಎಂಬ ಯುವತಿಯನ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪಕ್ಕದ ಊರಿನ ತಿಮ್ಮಯ್ಯ ಎಂಬಾತನೆ ಕೊಲೆ ಮಾಡಿದ್ದನು. ಕೃತ್ಯ ಬಳಿಕ ಯುವತಿ ಮನೆ ಬಳಿಯಿರುವ ಕೆರೆಗೆ ಹಾರಿದ್ದನು. ತಿಮ್ಮಯ್ಯನಿಗಾಗಿ ಪೊಲೀಸರು ಮೂರು ದಿನಗಳಿಂದ ಶೋಧಕಾರ್ಯ ನಡೆಸುತ್ತಿದ್ದರು. ಇಂದು ಶವ ಪತ್ತೆಯಾಗಿದೆ. ಇನ್ನು ಈ ಕುರಿತು ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಾಡಹಗಲೇ ಮನೆಗೆ ನುಗ್ಗಿ ಯುವತಿಯನ್ನು ಹತ್ಯೆಗೈದ ಆರೋಪಿ 24 ಗಂಟೆಯೊಳಗೆ ಸಿಕ್ಕ, ಪೊಲೀಸರ ಮುಂದೆ ಅಸಲಿ ಕಾರಣ ಬಾಯ್ಬಿಟ್ಟ

ಬೆಂಗಳೂರಲ್ಲಿ ದರೋಡೆಕೋರರ ಅಟ್ಟಹಾಸ: ಬೈಕ್​ನಲ್ಲಿ ಬಂದು ಹಣ ದೋಚಿ ಪರಾರಿ

ಬೆಂಗಳೂರು: ರಾಜಧಾನಿಯಲ್ಲಿ ಬೆಂಗಳೂರಿನಲ್ಲಿ ದರೋಡೆಕೋರರ ಅಟ್ಟಹಾಸ ಮುಂದುವರೆದಿದೆ. ಬೆಳಗಿನ ಜಾವ 4:30ರ ಸುಮರಿಗೆ ಬೈಕ್​ ಮೇಲೆ ಬಂದ ಇಬ್ಬರು ಆಟೋ ಪ್ರಯಾಣಿಕನಿಗೆ ಮಚ್ಚು ತೋರಿಸಿ 10,000 ರೂ. ದರೋಡೆ ಮಾಡಿದ್ದಾರೆ. ಪ್ರಯಾಣಿಗೆ ಮೆಜೆಸ್ಟಿಕ್​ನಿಂದ ಹೆಣ್ಣೂರು ಬಂಡೆಗೆ ಬರುತಿದ್ದರು. ಆಟೋವನ್ನು ಡಿಯೋ ಬೈಕ್​ನಲ್ಲಿ ಮುಸುಕು ಹಾಕಿಕೊಂಡು ಹಿಂಬಾಲಿಸಿಕೊಂಡು ಬಂದ ​ಸವಾರರು ಪ್ರಯಾಣಿಕನ ಬಳಿ ಇದ್ದ ಹಣ ದೋಚಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:43 am, Wed, 18 January 23

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ