ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಭೂಕುಸಿತ: ಪ್ರಾಕೃತಿಕ ವಿಕೋಪ‌ ಸಂಭವಿಸದಂತೆ 18 ಗ್ರಾಮಸ್ಥರಿಂದ ದೇವರಿಗೆ ಮೊರೆ

| Updated By: ವಿವೇಕ ಬಿರಾದಾರ

Updated on: Jul 04, 2022 | 8:04 PM

ಮಡಿಕೇರಿ ತಾಲೂಕಿನ ತಾಳತ್ ಮನೆ ಗ್ರಾಮದ ಬಳಿಯ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ.

ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಭೂಕುಸಿತ: ಪ್ರಾಕೃತಿಕ ವಿಕೋಪ‌ ಸಂಭವಿಸದಂತೆ 18 ಗ್ರಾಮಸ್ಥರಿಂದ ದೇವರಿಗೆ ಮೊರೆ
ಮಡಿಕೇರಿ ಭೂಕುಸಿತ
Follow us on

ಕೊಡಗು: ಮಡಿಕೇರಿ (Madikeri) ತಾಲೂಕಿನ ತಾಳತ್ ಮನೆ ಗ್ರಾಮದ ಬಳಿಯ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ (National Highway) 275 ರಲ್ಲಿ ಮತ್ತೆ ಭೂಕುಸಿತ (Landslide) ಸಂಭವಿಸಿದೆ. ಗುತ್ತಿಗೆದಾರರು ಅವೈಜ್ಞಾನಿಕವಾಗಿ ರಸ್ತೆ ಬದಿ ಗುಡ್ಡ ಅಗೆದಿದ್ದ ಕಾರಣ ಭೂಕುಸಿತ ಸಂಭವಿಸಿದ್ದು, ಗುಡ್ಡದ ಮಣ್ಣು ರಸ್ತೆಗೆ ಕೊಚ್ಚಿ ಬಂದಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೆ ಅಡ್ಡಿಯಾಗಿದೆ.

ಇದನ್ನು ಓದಿ: ಕರ್ನಾಟಕ, ಕೇರಳ, ಉತ್ತರಾಖಂಡ್ ಸೇರಿ 4 ರಾಜ್ಯಗಳಲ್ಲಿ ಮುಂದಿನ 4 ದಿನ ಭಾರಿ ಮಳೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಜೋಯಿಡಾ ತಾಲೂಕಿನ ಗಡಿ ಭಾಗವಾದ ಗೋವಾ-ಅನಮೋಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಗುಡ್ಡ ಕುಸಿತ ಹಿನ್ನೆಲೆ ರಸ್ತೆಯಲ್ಲಿ ಸಂಚಾರ ತಾತ್ಕಾಲಿಕ ಸ್ಥಗಿತ ಹೊಂದಿದೆ. ಈ ಸಂಬಂಧ ಹೆದ್ದಾರಿಯಲ್ಲಿ ಬಿದ್ದಿರುವ ಮಣ್ಣನ್ನು ಸಿಬ್ಬಂದಿ ಜೆಸಿಬಿ ಮೂಲಕ ತೆರವುಗೊಳಿಸುತ್ತಿದ್ದಾರೆ.

ಇದನ್ನು ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಲ್ಲದ ಮಳೆ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾನದಿ

ಕೊಡಗು- ದ.ಕ ಗಡಿಯಲ್ಲಿ ಭೂ ಕಂಪನ ಹಿನ್ನೆಲೆ 18 ಗ್ರಾಮಸ್ಥರು ಪ್ರಾಕೃತಿಕ ವಿಕೋಪ‌ ಸಂಭವಿಸದಂತೆ ದೇವರ ಮೊರೆ ಹೋಗಿದ್ದಾರೆ. ಈ ಸಂಬಂಧ ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಪೂಜೆ ನೆರವೇರಿಸಿದ್ದಾರೆ. ದೇವರಲ್ಲಿ ಭೂಕಂಪನ, ಭೂ ಕುಸಿತ, ಪ್ರವಾಹ ದಂತಹ ವಿಕೋಪ ಸಂಭವಿದಂತೆ ಬೇಡಿಕೆ ಇಟ್ಟಿದ್ದಾರೆ.

ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸತತ ಭೂಕಂಪಿಸಿದ ಸ್ಥಳಗಳಿಗೆ ಈ ವಾರದಲ್ಲಿ ಕಂದಾಯ ಸಚಿವ ಸಚಿವ ಆರ್‌.ಅಶೋಕ್ ಭೇಟಿ ನೀಡಲಿದ್ದಾರೆ. ತಜ್ಞರ ಜೊತೆ ಭೇಟಿ ನೀಡಿ 1 ದಿನ ವಾಸ್ತವ್ಯ ಹೂಡಿ ಪರಿಶೀಲನೆ ಮಾಡಲಿದ್ದಾರೆ. ಸುಳ್ಯ, ಮಡಿಕೇರಿ ತಾಲೂಕುಗಳಲ್ಲಿ ಒಂದು ವಾರದಿಂದ ಭೂಮಿ ಕಂಪಿಸಿತ್ತು, ಹೀಗಾಗಿ ಒಂದು ವಾರ ಹೈದರಾಬಾದ್‌ನ ತಜ್ಞರ ತಂಡ ವಾಸ್ತವ್ಯ ಹೂಡಿ ಪರಿಶೀಲಿಸಲಿದ್ದಾರೆ.

Published On - 2:56 pm, Mon, 4 July 22