India Rain Updates: ಕರ್ನಾಟಕ, ಕೇರಳ, ಉತ್ತರಾಖಂಡ್ ಸೇರಿ 4 ರಾಜ್ಯಗಳಲ್ಲಿ ಮುಂದಿನ 4 ದಿನ ಭಾರಿ ಮಳೆ
ಕರ್ನಾಟಕ, ಕೇರಳ ಸೇರಿದಂತೆ ಒಟ್ಟು 4 ರಾಜ್ಯಗಳಲ್ಲಿ ಮುಂದಿನ 4 ದಿನ ಭಾರಿ ಮಳೆಯಾಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕ, ಕೇರಳ, ದೆಹಲಿ, ಉತ್ತರಾಖಂಡ್, ಬಿಹಾರ ಸೇರಿದಂತೆ ಒಟ್ಟು 4ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಧಿಕ ಮಳೆ ಸುರಿಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕರ್ನಾಟಕ, ಕೇರಳ ಸೇರಿದಂತೆ ಒಟ್ಟು 4 ರಾಜ್ಯಗಳಲ್ಲಿ ಮುಂದಿನ 4 ದಿನ ಭಾರಿ ಮಳೆಯಾಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕ, ಕೇರಳ, ದೆಹಲಿ, ಉತ್ತರಾಖಂಡ್, ಬಿಹಾರ ಸೇರಿದಂತೆ ಒಟ್ಟು 4ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಧಿಕ ಮಳೆ ಸುರಿಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಜುಲೈ 5 ರಿಂದ 8ರವರೆಗೆ ಅಧಿಕ ಮಳೆಯಾಗಲಿದೆ, ಜುಲೈ 5 ಹಾಗೂ 6 ರಂದು ಅತ್ಯಧಿಕ ಮಳೆ ಸುರಿಯಲಿದೆ ಎಂದು ಹೇಳಲಾಗಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಬಾಗಲಕೋಟೆ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ನಾಪೋಕ್ಲು, ಧರ್ಮಸ್ಥಳ, ಬೆಳ್ತಂಗಡಿ, ಕೊಪ್ಪ, ಲಿಂಗನಮಕ್ಕಿ, ಮಾಣಿ, ಪುತ್ತೂರು, ಸಿದ್ದಾಪುರ, ಭಾಗಮಂಡಲ, ಶೃಂಗೇರಿ, ಜಯಪುರ, ಕಾರ್ಕಳ, ಬಾಳೆಹೊನ್ನೂರು, ವಿರಾಜಪೇಟೆ, ಸೋಮವಾರಪೇಟೆ, ಕೊಲ್ಲೂರು, ಮುಲ್ಕಿ, ಶಿರಾಲಿ, ಕುಮಟಾ, ಕಾರವಾರ, ಹಳಿಯಾಳ, ಪಿರಿಯಾಪಟ್ಟಣ, ಗೋಕರ್ಣ, ತ್ಯಾಗರ್ತಿ, ಆನವಟ್ಟಿ, ಬೇಲೂರು, ಚಿಕ್ಕಮಗಳೂರಿನಲ್ಲಿ ಮಳೆಯಾಗಿದೆ.
ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ರಾಜ್ಯದಲ್ಲಿ ಜುಲೈ 8ರವರೆಗೂ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಮುಂಗಾರು ಮಾರುತಗಳು ಹೆಚ್ಚು ಸಕ್ರಿಯವಾಗಿದ್ದರಿಂದ ಹೆಚ್ಚು ಮಳೆಯಾಗಲಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜುಲೈ 8 ರವರೆಗೂ ಮತ್ತೆ ಮಳೆಯಾಗಲಿದೆ.
ಕೇರಳಕ್ಕೂ ಯೆಲ್ಲೋ ಅಲರ್ಟ್: ಕೇರಳದ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ 7ರಿಂದ 11 ಸೆಂ.ಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ತಿರುವನಂತಪುರಂ, ಪಟ್ಟಣಂತಿಟ್ಟ, ಕೊಲ್ಲಂನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಉತ್ತರಾಖಂಡದಲ್ಲಿ ಮಳೆ: ಉತ್ತರಾಖಂಡದಲ್ಲಿ ಮುಂದಿನ 4 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡೆಹ್ರಾಡೂನ್, ತೆಹ್ರಿ, ಪೌರಿ, ನೈನಿತಾಲ್, ಚಂಪಾವಟ್ ಜಿಲ್ಲೆಗಳಲ್ಲಿ ಜುಲೈ 5-6ರಂದು ಅಧಿಕ ಮಳೆಯಾಗಲಿದೆ ಎಂದು ಹೇಳಲಾಗಿದೆ.
ದೆಹಲಿಗೂ ಯೆಲ್ಲೋ ಅಲರ್ಟ್: ದೆಹಲಿಯಲ್ಲೂ ಭಾರಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಬುಧವಾರ ಆರೆಂಜ್ ಅಲರ್ಟ್ ನೀಡಲಾಗಿದೆ. ಭಾನುವಾರ ಬೆಳಗ್ಗೆ 8.30ರಿಂದ ಸಂಜೆ 5.30ರವರೆಗೆ 0.1 ಮಿ.ಮೀನಷ್ಟು ಮಳೆಯಾಗಿದೆ.