AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುಡಕಟ್ಟು ಜನಾಂಗದವರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಅಲ್ಲೂರಿ ಸೀತಾರಾಮ ರಾಜು ಯಾರು?,ಇಲ್ಲಿದೆ ಮಹಾನ್ ವ್ಯಕ್ತಿತ್ವದ ಪರಿಚಯ

Alluri Sitarama Raju ಜುಲೈ 4, 1897 ರಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅಲ್ಲೂರಿ, ಬಾಲಕನಾಗಿದ್ದಾಗ  ಬ್ರಿಟಿಷರ ಆಳ್ವಿಕೆಯಲ್ಲಿ ದೇಶವಾಸಿಗಳು ಅನುಭವಿಸುತ್ತಿರುವ ನೋವುಗಳ ಬಗ್ಗೆ ಕೇಳಿ ಮರುಕಪಟ್ಟಿದ್ದರು.

ಬುಡಕಟ್ಟು ಜನಾಂಗದವರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಅಲ್ಲೂರಿ ಸೀತಾರಾಮ ರಾಜು ಯಾರು?,ಇಲ್ಲಿದೆ ಮಹಾನ್ ವ್ಯಕ್ತಿತ್ವದ  ಪರಿಚಯ
ಅಲ್ಲೂರಿ ಸೀತಾರಾಮ ರಾಜು ಅವರ ಪ್ರತಿಮೆ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jul 04, 2022 | 3:28 PM

Share

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ ಭೀಮಾವರಂ (ಆಂಧ್ರಪ್ರದೇಶ)ದಲ್ಲಿ ಅಲ್ಲೂರಿ ಸೀತಾರಾಮ ರಾಜು (Alluri Sitarama Raju) ಅವರ 30 ಅಡಿ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದವರು ಅಲ್ಲೂರಿ ಸೀತಾರಾಮ ರಾಜು. ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಮೋದಿಯವರು ಆಂಧ್ರ ಪ್ರದೇಶಕ್ಕೆ (Andhra pradesh) ಭೇಟಿ ನೀಡಿದ್ದು, ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸಿದ್ದಾರೆ. ಭಾರತೀಯ ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಆಜಾದಿ ಕಾ ಅಮೃತ್ ಮಹೋತ್ಸವ್ ಉಪಕ್ರಮವು ದೇಶದ ಸ್ವಾತಂತ್ರ್ಯಹೋರಾಗಾರರು ನೀಡಿರುವ ಕೊಡುಗೆಗಳ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ಹೊಂದಿದೆ. ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮ ದಿನಾಚರಣೆ ಮತ್ತು ರಾಂಪಾ ದಂಗೆಯ 100ನೇ ವರ್ಷ ಈಗ ಆಚರಿಸಲಾಗುತ್ತಿದೆ. ಎರಡು ತೆಲುಗು ರಾಜ್ಯಗಳಲ್ಲಿ ಮನೆ ಮಾತಾಗಿರುವ ಅಲ್ಲೂರಿ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ.

ಅಲ್ಲೂರಿ ಸೀತಾರಾಮ ರಾಜು ಅವರ ಪರಿಚಯ ಜುಲೈ 4, 1897 ರಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅಲ್ಲೂರಿ, ಬಾಲಕನಾಗಿದ್ದಾಗ  ಬ್ರಿಟಿಷರ ಆಳ್ವಿಕೆಯಲ್ಲಿ ದೇಶವಾಸಿಗಳು ಅನುಭವಿಸುತ್ತಿರುವ ನೋವುಗಳ ಬಗ್ಗೆ ಕೇಳಿ ಮರುಕಪಟ್ಟಿದ್ದರು. ಬ್ರಿಟಿಷರ ವಿರುದ್ಧ ಆಂಧ್ರಪ್ರದೇಶದ ಪೂರ್ವ ಘಟ್ಟಗಳಲ್ಲಿ ರಾಂಪಾ ದಂಗೆಗೆ ಹೆಸರುವಾಸಿಯಾದ ಅಲ್ಲೂರಿ ಅವರನ್ನು , ಮಾನ್ಯಂ ವೀರುಡು (ಜಂಗಲ್ ವಾರಿಯರ್) ಎಂದೂ ಕರೆಯುತ್ತಾರೆ, ಅವರು ಸಾವಿರಾರು ಬಡ ಆದಿವಾಸಿಗಳನ್ನು ಒಟ್ಟುಗೂಡಿಸಿ ಅವರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿಸಿದ್ದರು.

ಸ್ನೇಹಿತರೊಬ್ಬರು ಕಿಂಗ್ ಜಾರ್ಜ್ ಅವರ ಚಿತ್ರವಿರುವ ಬ್ಯಾಡ್ಜ್‌ಗಳನ್ನು ನೀಡಿದಾಗ ಅಲ್ಲೂರಿ ಅದನ್ನು ತಮ್ಮ ಅಂಗಿಯ ಮೇಲೆ ಧರಿಸಿ, ಇದು ದಾಸ್ಯವನ್ನು ತೋರಿಸುತ್ತದೆ. ವಿದೇಶಿ ಆಡಳಿತಗಾರನು ನಮ್ಮ ಜೀವನವನ್ನು ಪುಡಿಮಾಡುತ್ತಿದ್ದಾನೆ ಎಂಬುದನ್ನು ನಿಮ್ಮೆಲ್ಲರಿಗೂ ನೆನಪಿಸಲು ನಾನು ಅದನ್ನು ನನ್ನ ಹೃದಯದ ಬಳಿ ನನ್ನ ಅಂಗಿಯ ಮೇಲೆ ಪಿನ್ ಮಾಡಿದ್ದೇನೆ ಎಂದು ಹೇಳಿದ್ದರು.

ಇದನ್ನೂ ಓದಿ
Image
ಆಂಧ್ರಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಪ್ರತಿಮೆ ಅನಾವರಣ ಮಾಡಿದ ಮೋದಿ
Image
ಇಂಟರ್​ವ್ಯೂಗೆ ತೆರಳಿದ ವಿಮಾನ ಸಿಬ್ಬಂದಿ: ತಡವಾಗಿ ನಗರಗಳ ತಲುಪಿದ 900ಕ್ಕೂ ಹೆಚ್ಚು ಇಂಡಿಯೋ ವಿಮಾನಗಳು
Image
Maharashtra Floor Test Result 2022: ವಿಶ್ವಾಸಮತಯಾಚನೆಯಲ್ಲಿ ಗೆದ್ದು ಬೀಗಿದ ಏಕನಾಥ್ ಶಿಂಧೆ; ಸಿಎಂಗೆ 164 ಶಾಸಕರ ಬೆಂಬಲ

ದೇಶದಾದ್ಯಂತ ಸುತ್ತಾಡಿ ಅವರು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಟ ಮಾಡಿದರು. ಬಿಲ್ಲು ಬಾಣದಂತ ಸಾಂಪ್ರದಾಯಿಕ ಆಯುಧಗಳನ್ನು ಬಳಸಿ ಅವರು ಕೆಲವು ಯುದ್ಧಗಳನ್ನು ಗೆದ್ದರು. ಕೆಲವು ಪೊಲೀಸ್ ಠಾಣೆಗಳ ಮೇಲೂ ದಾಳಿ ನಡೆಸಿದರು. ಕಾಡಿನ ಬಗ್ಗೆ ನಿಖರವಾದ ತಿಳುವಳಿಕೆ ಮತ್ತು ಕಾಡಿನ ಜನರ ಬೆಂಬಲದಿಂದ ಅವರು ಬ್ರಿಟಿಷರ ವಿರುದ್ಧ ಹೋರಾಡಿದರು. ಹೆಚ್ಚಿನ ಇತಿಹಾಸಗಾರರು ಅವರ ಕೊಡುಗೆ ಬಗ್ಗೆ ಉಲ್ಲೇಖಿಸಿಲ್ಲ. ಇತಿಹಾಸಕಾರರಾದ ಸುಮಿತ್ ಸರ್ಕಾರ್ ಅವರು ಮಾತ್ರ ಅಲ್ಲೂರಿ ಅವರನ್ನು ಬುಡಕಟ್ಟು ಜನಾಂಗದದ ನಾಯಕ ಎಂದು ಬಿಂಬಿಸಿದ್ದರು.ಉತ್ತರ ಗೋದಾವರಿಯ ರಾಂಪಾ ಪ್ರದೇಶದಲ್ಲಿನ ಬುಡಕಟ್ಟು ಜನಾಂಗದವರು ಬ್ರಿಟಿಷರ ವಿರುದ್ಧ 1922 ಆಗಸ್ಟ್- ಮೇ 1924ರಲ್ಲಿ ನಡೆಸಿದ ಗೆರಿಲ್ಲಾ ಯುದ್ಧವನ್ನು ಸೀತಾರಾಮ ರಾಜು ಅವರು ಮುನ್ನಡಿಸಿದ್ದರು ಎಂದು ಇತಿಹಾಸಕಾರ ಸುಮಿತ್ ಸರ್ಕಾರ್ ಮಾಡರ್ನ್ ಇಂಡಿಯಾ 1885-1947ರಲ್ಲಿ ದಾಖಲಿಸಿದ್ದಾರೆ.

Published On - 3:20 pm, Mon, 4 July 22

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ