ಇಂಟರ್​ವ್ಯೂಗೆ ತೆರಳಿದ ವಿಮಾನ ಸಿಬ್ಬಂದಿ: ತಡವಾಗಿ ನಗರಗಳ ತಲುಪಿದ 900ಕ್ಕೂ ಹೆಚ್ಚು ಇಂಡಿಯೋ ವಿಮಾನಗಳು

ಇಂಡಿಗೋ ವಿಮಾನದ ಸಿಬ್ಬಂದಿ ಇಂಟರ್​ವ್ಯೂಗೆ ತೆರಳಿದ್ದ ಕಾರಣ 900 ವಿಮಾನಗಳು ಅನೇಕ ನಗರಗಳಿಗೆ ತಡವಾಗಿ ಹಾರಾಟ ನಡೆಸಿರುವ ಘಟನೆ ವರದಿಯಾಗಿದೆ. ಏರ್​ ಇಂಡಿಇಂಡಿಗೋ ವಿಮಾನದ ಸಿಬ್ಬಂದಿ ಇಂಟರ್​ವ್ಯೂಗೆ ತೆರಳಿದ್ದ ಕಾರಣ 900ಕ್ಕೂ ಅಧಿಕ ವಿಮಾನಗಳು ಅನೇಕ ನಗರಗಳಿಗೆ ತಡವಾಗಿ ಹಾರಾಟ ನಡೆಸಿರುವ ಘಟನೆ ವರದಿಯಾಗಿದೆ. ಏರ್​ ಇಂಡಿಯಾ ಕರೆದಿದ್ದ ಇಂಟರ್​ವ್ಯೂಗೆ ಇಂಡಿಯಾ ವಿಮಾನದ ಸಿಬ್ಬಂದಿಗಳು ತೆರಳಿದ್ದ ಕಾರಣ ವಿಮಾನ ಹಾರಾಟ ತಡವಾಗಿತ್ತು. ಯಾ ಕರೆದಿದ್ದ ಇಂಟರ್​ವ್ಯೂಗೆ ಇಂಡಿಯಾ ವಿಮಾನದ ಸಿಬ್ಬಂದಿಗಳು ತೆರಳಿದ್ದ ಕಾರಣ ವಿಮಾನ ಹಾರಾಟ ತಡವಾಗಿತ್ತು.

ಇಂಟರ್​ವ್ಯೂಗೆ ತೆರಳಿದ ವಿಮಾನ ಸಿಬ್ಬಂದಿ: ತಡವಾಗಿ ನಗರಗಳ ತಲುಪಿದ 900ಕ್ಕೂ ಹೆಚ್ಚು ಇಂಡಿಯೋ ವಿಮಾನಗಳು
Indigo Flight
TV9kannada Web Team

| Edited By: Nayana Rajeev

Jul 04, 2022 | 12:08 PM

ಇಂಡಿಗೋ ವಿಮಾನದ ಸಿಬ್ಬಂದಿ ಇಂಟರ್​ವ್ಯೂಗೆ ತೆರಳಿದ್ದ ಕಾರಣ 900ಕ್ಕೂ ಅಧಿಕ ವಿಮಾನಗಳು ಅನೇಕ ನಗರಗಳಿಗೆ ತಡವಾಗಿ ಹಾರಾಟ ನಡೆಸಿರುವ ಘಟನೆ ವರದಿಯಾಗಿದೆ. ಏರ್​ ಇಂಡಿಯಾ ಕರೆದಿದ್ದ ಇಂಟರ್​ವ್ಯೂಗೆ ಇಂಡಿಯಾ ವಿಮಾನದ ಸಿಬ್ಬಂದಿಗಳು ತೆರಳಿದ್ದ ಕಾರಣ ವಿಮಾನ ಹಾರಾಟ ತಡವಾಗಿತ್ತು.

ಶನಿವಾರ ಹಾಗೂ ಭಾನುವಾರ ವಿಮಾನಗಳು ತಡವಾಗಿ ಹಾರಾಟ ನಡೆಸಿದ್ದವು. ಏರ್​ ಇಂಡಿಯಾದ ಎರಡನೇ ಹಂತದ ನೇಮಕಾತಿ ಪ್ರಕ್ರಿಯೆಯು ಶನಿವಾರದಂದು ನಿಗದಿಯಾಗಿತ್ತು. ಮತ್ತು ಹೆಚ್ಚಿನ ಸಿಬ್ಬಂದಿ ರಜೆ ತೆಗೆದುಕೊಂಡಿದ್ದರು. ಜುಲೈ 7ರಂದು ಬೆಂಗಳೂರಿನಲ್ಲಿ ವಾಕ್​ಇನ್ ಇಂಟರ್​ವ್ಯೂ ನಿಗದಿಪಡಿಸಲಾಗಿದೆ.

“ಏರ್ ಇಂಡಿಯಾ ಶನಿವಾರ ಯಾವುದೇ ಸಿಬ್ಬಂದಿ ಸಂದರ್ಶನವನ್ನು ನಡೆಸಲಿಲ್ಲ” ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ಎಎನ್​ಐಗೆ ತಿಳಿಸಿದ್ದಾರೆ.ಟಾಟಾ ಒಡೆತನದ ಏರ್ ಇಂಡಿಯಾ ಜೂನ್ 28 ಮತ್ತು ಜುಲೈ 1 ರಂದು ದೆಹಲಿ ಮತ್ತು ಮುಂಬೈನಲ್ಲಿ ನೇಮಕಾತಿ ನಡೆಸಿತ್ತು.

ಏತನ್ಮಧ್ಯೆ, ವಿಮಾನಯಾನ ನಿಗಾ ಸಂಸ್ಥೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈ ವಿಷಯದ ಬಗ್ಗೆ ಇಂಡಿಗೋದಿಂದ ವಿವರಣೆಯನ್ನು ಕೇಳಿದೆ.

ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ಇಂಡಿಗೋ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಕೋರಿದೆ ಮತ್ತು ರಾಷ್ಟ್ರವ್ಯಾಪಿ ವಿಮಾನ ವಿಳಂಬದ ಹಿಂದೆ ಸ್ಪಷ್ಟೀಕರಣವನ್ನು ನೀಡುವಂತೆ ತಿಳಿಸಿದೆ.

ನಾಗರಿಕ ವಿಮಾನಯಾನ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಇಂಡಿಗೋ ವಿಮಾನಗಳಲ್ಲಿ ಶೇಕಡಾ 45 ರಷ್ಟು ಮಾತ್ರ ಶನಿವಾರದಂದು ನಿಗದಿತ ನಿರ್ಗಮನ ಸಮಯದ 15 ನಿಮಿಷಗಳ ಒಳಗೆ ಸಮಯಕ್ಕೆ ಕಾರ್ಯಕ್ಷಮತೆಯನ್ನು ನಿರ್ವಹಿಸಲು ಸಾಧ್ಯವಾಯಿತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada