ಚೆಂಬು ಗ್ರಾಮ ಪಂಚಾಯಿತಿ ಸದಸ್ಯೆ ನಾಪತ್ತೆ ಪ್ರಕರಣ: ಸದಸ್ಯೆ ಮತ್ತು ಆಕೆ ಸಂಬಂಧಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ
ಚೆಂಬು ಗ್ರಾಮ ಪಂಚಾಯಿತಿ ಸದಸ್ಯೆ ಕಮಲಾ ಮತ್ತು ಮುತ್ತು ಇಬ್ಬರು ಒಂದೇ ಮರದಲ್ಲಿ ನೇಣು ಹಾಕಿಕೊಂಡಿದ್ದಾರೆ. ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮುತ್ತು, ಕಮಲಾರ ಸಂಬಂಧಿಯಾಗಿದ್ದರು.
ಕೊಡಗು: ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಪಂಚಾಯಿತಿ ಸದಸ್ಯೆ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಚೆಂಬು ಗ್ರಾಮ ಪಂಚಾಯಿತಿ ಸದಸ್ಯೆ ಕಮಲಾ(35) ಹಾಗೂ ಕಮಲ ಜೊತೆ ನಾಪತ್ತೆಯಾಗಿದ್ದ ಮುತ್ತು(50) ಮೃತ ದೇಹಗಳು ಪತ್ತೆಯಾಗಿವೆ.
ಚೆಂಬು ಗ್ರಾಮ ಪಂಚಾಯಿತಿ ಸದಸ್ಯೆ ಕಮಲಾ ಮತ್ತು ಮುತ್ತು ಇಬ್ಬರು ಒಂದೇ ಮರದಲ್ಲಿ ನೇಣು ಹಾಕಿಕೊಂಡಿದ್ದಾರೆ. ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮುತ್ತು, ಕಮಲಾರ ಸಂಬಂಧಿಯಾಗಿದ್ದರು.
ನಿನ್ನೆ ಸಂಜೆಯಿಂದ ಇವರಿಬ್ಬರೂ ನಾಪತ್ತೆಯಾಗಿದ್ದರು. ಸದ್ಯ ಈಗ ಇಬ್ಬರ ಮೃತ ದೇಹ ಸಿಕ್ಕಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಜಯಪುರದಲ್ಲಿ 5 ಸಾವಿರ ರೂ.ಗೆ ಮಗು ಮಾರಾಟ: ಜಿಲ್ಲಾಸ್ಪತ್ರೆ ಸ್ಟಾಫ್ ನರ್ಸ್ ಅಮಾನತು, ಮಗು ಇನ್ನೂ ಪತ್ತೆಯಿಲ್ಲ
Published On - 12:36 pm, Thu, 16 September 21