ಮಡಿಕೇರಿ: ಸಸ್ಪೆಂಡ್ ಆದ ಇಂಜಿನಿಯರ್ ಮರು ನೇಮಕಕ್ಕೆ 2.5 ಕೋಟಿ ಲಂಚ ಪಡೆಯಲಾಗಿದೆ ಎಂದು ವಿರಾಜಪೇಟೆ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ವಿರುದ್ಧ ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚಂಗಪ್ಪ ಆರೋಪ ಮಾಡಿದರು. ಭ್ರಷ್ಟಾಚಾರ ಆರೋಪದಡಿ ಸಸ್ಪೆಂಡ್ ಆಗಿದ್ದವ ಮತ್ತೆ ಜಿಲ್ಲೆಗೆ ಬಂದಿದ್ದು, ಇಂಜಿನಿಯರ್ ಶ್ರೀಕಂಠಯ್ಯ 18 ದಿನಗಳ ಕಾಲ ಜೈಲಲ್ಲಿ ಇದ್ದ ಅಧಿಕಾರಿ. ಶ್ರೀಕಂಠಯ್ಯ ಮರು ನೇಮಕಕ್ಕೆ ಸಚಿವರಾಗಿದ್ದಾಗ K.S.ಈಶ್ವರಪ್ಪಗೆ ಬೋಪಯ್ಯ ಪತ್ರ ಬರೆದಿದ್ದರು. ಗುತ್ತಿಗೆದಾರರಿಂದ ಶ್ರೀಕಂಠಯ್ಯ ಲಂಚ ಸ್ವೀಕರಿಸುವಾಗ ರೇಡ್ ಹ್ಯಾಂಡ್ ಆಗಿ ಸಿಕ್ಕಿಕೊಂಡಿದ್ದರು. ಎಸಿಬಿ ಅಧಿಕಾರಿಗಳ ದಾಳಿ ಬಳಿಕ ಶ್ರೀಕಂಠಯ್ಯ ಅಮಾನತು ಮಾಡಲಾಗಿತ್ತು. 2012ರ ಅಕ್ಟೊಬರ್18 ರಂದು ಎಸಿಬಿ ರೇಡ್ ನಡೆದಿದ್ದು, ಶ್ರೀಕಂಠಯ್ಯ, ಕೊಡಗು ಪಂಚಾಯತ್ ರಾಜ್ ಇಲಾಖೆ ಎಕ್ಸಿಕ್ಯುಟಿವ್ ಎಂಜಿನಿಯರ್ ಆಗಿದ್ದರು.
ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲೂ ಕಮಿಷನ್ ದಂಧೆ: ಶಾಸಕರ ವಿರುದ್ಧ ಗುತ್ತಿಗೆದಾರರ ಗಂಭೀರ ಆರೋಪ
ಇನ್ನೂ ಜಿಲ್ಲೆಯಲ್ಲಿ ಪ್ರತಿ ಕಾಮಗಾರಿಗೆ ಶೇ 40ರ ಕಮಿಷನ್ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಕಮಿಷನ್ ದಂದೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚಂಗಪ್ಪ ಗಂಭೀರ ಆರೋಪ ಈ ಹಿಂದೆ ಮಾಡಿದ್ದರು. ಶಾಸಕರು ಕಮಿಷನ್ ಇಲ್ಲದೆ ನಮಗೆ ರಾಜ್ಯ ಹಣಕಾಸು ಸಚಿವರಿಂದ ಬಾಕಿ ಹಣ ಬಿಡುಗಡೆ ಮಾಡಿಸಲಿ. ಜಿಲ್ಲೆಯಲ್ಲಿ ಕಮಿಷನ್ ನೀಡದ ಕಾರಣ ನಮಗೆ ಹಣ ಬಿಡುಗಡೆ ಆಗುತ್ತಿಲ್ಲ. ವಿವಿಧ ಹಂತಗಳಲ್ಲಿ ಭಾರಿ ಮೊತ್ತದ ಕಮಿಷನ್ ನೀಡಬೇಕಿದೆ.
ಪಂಚಾಯತ್ ರಾಜ್ ಇಲಾಖೆಯಿಂದ ₹49 ಕೋಟಿ ಬರಬೇಕು. ಸೋಮವಾರ ಬೆಳಗ್ಗೆ 11 ಗಂಟೆಗೆ ಶಾಸಕರು ಪಂಚಾಯತ್ ರಾಜ್ ಇಲಾಖೆಯ ಕಚೇರಿಗೆ ಬಂದು ಹಣ ಬಿಡುಗಡೆ ಮಾಡಿಸಲಿ, ನಮ್ಮ ಗುತ್ತಿಗೆದಾರರೂ ಅಲ್ಲಿಗೆ ಬಂದಿರುತ್ತಾರೆ. ಯಾವುದೇ ಕಮಿಷನ್ ಪಡೆಯದೇ ಬಾಕಿ ಮೊತ್ತ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.