AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Christianity: ಕೊಡಗಿನಲ್ಲಿ ಮತಾಂತರಕ್ಕೆ ಯತ್ನಿಸುತ್ತಿದ್ದ ಕೇರಳ ಮೂಲದ ದಂಪತಿ ಬಂಧನ

ಪಣಿ ಎರವರ ಮುತ್ತ ಎಂಬುವರನ್ನ ಮತಾಂತರ ಮಾಡಲು ಯತ್ನ ನಡೆದಿದ್ದಾಗ ಭಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಪೊನ್ನಂಪೇಟೆ ತಾಲೂಕಿನ ಮಂಚಳ್ಳಿಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Christianity: ಕೊಡಗಿನಲ್ಲಿ ಮತಾಂತರಕ್ಕೆ ಯತ್ನಿಸುತ್ತಿದ್ದ ಕೇರಳ ಮೂಲದ ದಂಪತಿ ಬಂಧನ
ಆರೋಪಿ, ಕೇರಳ ಮೂಲದ ಮಾನಂದವಾಡಿಯ ಕುರಿಯಚ್ಚನ್
TV9 Web
| Edited By: ಸಾಧು ಶ್ರೀನಾಥ್​|

Updated on:May 18, 2022 | 3:02 PM

Share

ಮಡಿಕೇರಿ: ಕೊಡಗಿನಲ್ಲಿ ಮತಾಂತರಕ್ಕೆ ಯತ್ನಿಸುತ್ತಿದ್ದ ಕೇರಳ ಮೂಲದ ಮಾನಂದವಾಡಿಯ ಕುರಿಯಚ್ಚನ್ – ಸಲಿನಾಮ ಕ್ರೈಸ್ತ ದಂಪತಿಯನ್ನು ಮಂಚಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಪಣಿ ಎರವರ ಮುತ್ತ ಎಂಬುವರನ್ನ ಮತಾಂತರ ಮಾಡಲು ಯತ್ನ ನಡೆದಿದ್ದಾಗ (Conversion to christianity attempt) ಭಜರಂಗದಳದ ಕಾರ್ಯಕರ್ತರು (bajrang dal) ದಾಳಿ ನಡೆಸಿದ್ದಾರೆ. ಪೊನ್ನಂಪೇಟೆ ತಾಲೂಕಿನ ಮಂಚಳ್ಳಿಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮತಾಂತರಕ್ಕೆ ತುತ್ತಾಗುತ್ತಿದ್ದ ಪಣಿ ಎರವರ ಮುತ್ತ ಎಂಬುವವರು ನಂತರ, ಕುಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ (madikeri).

ಇದನ್ನೂ ಓದಿ:  ಶಾಸಕ ರಾಜುಗೌಡ ಹೆಸರಿನಲ್ಲಿ ಮಹಿಳೆಯಿಂದ ವಂಚನೆ: ಸುರಪುರ ಪೊಲೀಸರಿಂದ ಕೆ.ಆರ್. ಪುರಂನಲ್ಲಿ ಆರೋಪಿ ಮಹಿಳೆ ಅರೆಸ್ಟ್

ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆಗೆ ರಾಜ್ಯಪಾಲ ಗೆಹ್ಲೋಟ್‌ರಿಂದ ಅಂತಿಮ ಮುದ್ರೆ ಮತಾಂತರ ನಿಷೇಧ ಕಾಯ್ದೆ() ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಸುಗ್ರೀವಾಜ್ಞೆಗೆ ರಾಜ್ಯಪಾಲ ಗೆಹ್ಲೋಟ್‌ರಿಂದ ಅಂತಿಮ ಮುದ್ರೆ ಬಿದ್ದಿದೆ. ಮತಾಂತರ ನಿಷೇಧ ಕಾಯ್ದೆಯನ್ನು ವಿಧಾನಸಭೆ ಅಂಗೀಕರಿಸಿತ್ತು. ವಿಧಾನಪರಿಷತ್‌ನಲ್ಲಿ ಅಂಗೀಕಾರ ಸಿಗದಿದ್ದಕ್ಕೆ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಿತ್ತು. ಕಾಯ್ದೆ ಸುಗ್ರೀವಾಜ್ಞೆಗೆ ರಾಜ್ಯಪಾಲರು ಮಂಗಳವಾರವಷ್ಟೇ ಅಂಕಿತ ಹಾಕಿದ್ದಾರೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತಾಂತರ ವಿರೋಧಿ ಸುಗ್ರೀವಾಜ್ಞೆಗೆ ಮಂಗಳವಾರ ಒಪ್ಪಿಗೆ ನೀಡಿದ್ದಾರೆ. ಸುಗ್ರೀವಾಜ್ಞೆಯನ್ನು ಪ್ರಕಟಿಸುವ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅಂದರೆ ರಾಜ್ಯದಲ್ಲಿ ಈಗ ಕಾನೂನು ಜಾರಿಯಲ್ಲಿರುತ್ತದೆ. ಈ ಮೂಲಕ ಮತಾಂತರ ತಡೆ ಕಾನೂನನ್ನು ಜಾರಿಗೊಳಿಸಿದ 9ನೇ ರಾಜ್ಯ ಕರ್ನಾಟಕವಾಗಿದೆ. ಈ ಕಾನೂನು ವಂಚನೆ, ಅನಗತ್ಯ ಪ್ರಭಾವ, ಬಲಾತ್ಕಾರ, ಆಮಿಷ ಅಥವಾ ಮದುವೆಯ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳುವುದನ್ನು ನಿಷೇಧಿಸುತ್ತದೆ. ಬಲವಂತದ ಮತಾಂತರಕ್ಕೆ 25,000 ರೂ ದಂಡದೊಂದಿಗೆ 3-5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:00 pm, Wed, 18 May 22

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ