AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು: ಭೂಕುಸಿತ ಸಂಭವಿಸಿ ಸರ್ಕಾರಿ ಶಾಲೆಗೆ ಹಾನಿ: ವರ್ಷ ಕಳೆದರು ಶಾಲೆಗಿಲ್ಲ ದುರಸ್ತಿ ಭಾಗ್ಯ

ಭೂ ಕುಸಿತದಿಂದ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕೊಯನಾಡು ಗ್ರಾಮದ ಏಕೈಕ ಸರ್ಕಾರಿ ಶಾಲೆ ದುರಸ್ತಿಯಾಗಿದ್ದು, ಎಷ್ಟೇ ದೂರು ನೀಡಿದರು ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳಿತಿದ್ದಾರೆ.

ಕೊಡಗು: ಭೂಕುಸಿತ ಸಂಭವಿಸಿ ಸರ್ಕಾರಿ ಶಾಲೆಗೆ ಹಾನಿ: ವರ್ಷ ಕಳೆದರು ಶಾಲೆಗಿಲ್ಲ ದುರಸ್ತಿ ಭಾಗ್ಯ
ಸರ್ಕಾರಿ ಶಾಲೆ ಕುಸಿತ
TV9 Web
| Updated By: ವಿವೇಕ ಬಿರಾದಾರ|

Updated on: Jan 22, 2023 | 4:23 PM

Share

ಆ ಊರಿನಲ್ಲಿ ಇರೋದು ಅದೊಂದೇ ಶಾಲೆ. ಆದರೆ ಪ್ರಾಕೃತಿಕ ವಿಕೋಪದಲ್ಲಿ ಶಾಲೆಗೆ ಗಂಭೀರ ಹಾನಿಯಾಗಿದೆ. ಇವತ್ತಿಗೂ ಮಕ್ಕಳು ಪ್ರಾಣ ಭಯದಲ್ಲೇ ಪಾಠ ಕೇಳುವ ಪರಿಸ್ಥಿತಿ. ಇಂತಹ ಶಾಲೆಯನ್ನು ಸುಧಾರಿಸಿಕೊಡಿ ಅಂತ ಪೋಷಕರು ಎಷ್ಟೇ ಮನವಿ ಮಾಡಿದರು ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಅಲ್ಲಲ್ಲಿ ಬಿರುಕು ಬಿಟ್ಟು ಕುಸಿಯಲು ಸಿದ್ಧವಾಗಿ ನಿಂತಿರೋ ಶಾಲಾ ಕಟ್ಟಡ. ಅದೇ ಕಟ್ಟಡದ ಮತ್ತೊಂದು ಪಾರ್ಶ್ವ ಭೂ ಕುಸಿತದಲ್ಲಿ ಮುಕ್ಕಾಲು ಭಾಗ ಮುಚ್ಚೇ ಹೋಗಿದೆ. ಮತ್ತೊಂದಡೆ ಶಾಲಾ ಕಟ್ಟದ ಹಿಂಬದಿ ಭೂ ಕುಸಿತದಲ್ಲಿ ಮಣ್ಣಿನ ರಾಶಿ ಕೊಚ್ಚಿ ಬಂದಿದೆ. ಇದು ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕೊಯನಾಡು ಗ್ರಾಮದ ಏಕೈಕ ಸರ್ಕಾರಿ ಶಾಲೆಯ ದುಸ್ಥಿತಿ. ಹೌದು 2022ರಲ್ಲಿ ಇಲ್ಲಿ ಭೂ ಕುಸಿತ ಸಂಭವಿಸಿ ಶಾಲಾ ಕಟ್ಟಡಕ್ಕೆ ಭಾರೀ ಹಾನಿಯಾಗಿದೆ. ಆ ಸಮಯದಲ್ಲಿ ಶಾಲೆಯನ್ನು ಮೂರು ತಿಂಗಳು ಕಾಲ ಬೇರೆ ಸ್ಥಳದಲ್ಲಿ ನಡೆಸಲಾಗಿತ್ತು.

ಮಳೆ ಕಡಿಮೆಯಾದ ಬಳಿಕ ಇದೀಗ ಮರಳಿ ಇಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ ಶಾಲೆಯ ಹಿಂಬದಿ ಭೂ ಕುಸಿತದಲ್ಲಿ ಕೊಚ್ಚಿ ಬಂದ ಮಣ್ಣಿ ರಾಶಿ ಮಾತ್ರ ಇನ್ನೂ ಹಾಗೇ ಉಳಿದಿದೆ. ಭೂ ಕುಸಿತವಾಗಿ ಆರು ತಿಂಗಳು ಕಳೆದರೂ ಮಣ್ಣನ್ನು ತೆರವು ಮಾಡಲು ಸರ್ಕಾರ ಮುಂದಾಗಿಲ್ಲ ಹೀಗಾಗಿ ಮಕ್ಕಳು ಇವತ್ತತಿಗೂ ಪ್ರಾಣ ಭಯದಲ್ಲೇ ಪಾಠಕೇಳುವಂತಾಗಿದೆ ಎಂಬುದು ಪೋಷಕರಲ್ಲಿ ಆತಂಕ ಮೂಡಿಸಿದೆ.

ಇನ್ನು ಶಾಲೆಯನ್ನ ಸುಧಾರಿಸುವಂತೆ ಶಾಲಾಭಿವೃದ್ಧಿ ಸಮಿತಿ ಈಗಾಗಲೇ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಗೆ ಬಹಳಷ್ಟು ಬಾರಿ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸಿರುವ ಶಿಕ್ಷಣ ಇಲಾಖೆ ಹೆಚ್ಚುವರಿಯಾಗಿ ಒಂದು ಕಟ್ಟಡ ಕಟ್ಟಿದೆ. ಮತ್ತೊಂದು ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಅನುಮತಿ ನೀಡಿದೆ. ಆದರೆ ಡ್ಯಾಮೇಜ್ ಆಗಿರುವ ಕಟ್ಟಡವನ್ನು ದುರಸ್ಥಿಮಾಡಿ, ಶಾಲೆಯ ಹಿಂಬದಿ ತಡೆ ಗೋಡೆ ಯಾಕೆ ಕಟ್ಟಿಲ್ಲ ಎಂಬುದು ಜನರ ಪ್ರಶ್ನೆಯಾಗಿದೆ. ಯಾಕೆಂದರೆ ಈಗ ತಡೆಗೋಡೆ ಕಟ್ಟಲಿಲ್ಲಾಂದರೆ ಮುಂದಿನ ಮಳೆಗಾಲದಲ್ಲಿ ಮತ್ತಷ್ಟು ಅನಾಹುತ ಕಟ್ಟಿಟ್ಟ ಬುತ್ತಿ ಎಂದು ಗ್ರಾಮಸ್ಥೆ ರಾಜೇಶ್ವರಿ, ಕೊಯನಾಡು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವಸ್ಥಳೀಯ ಶಾಸಕ ಕೆಜಿ ಬೋಪಯ್ಯ, ಶಾಲೆ ಸಧ್ಯದ ವಾತಾವರಣದಲ್ಲಿ ಸುರಕ್ಷಿತವಾಗಿಲ್ಲ. ಹಾಗಾಗಿ ಅಲ್ಲಿ ಶಾಲೆ ಮುಂದುವರಿಸುವುದು ಸೂಕ್ತ ಅಲ್ಲ. ಹಾಗಾಗಿ ಶಾಲೆ ದುರಸ್ಥಿ ಬದಲು ಹೊಸ ಕಟ್ಟಡ ಕಟ್ಟಲಾಗುವುದು ಎಂದು ಹೇಳಿದ್ದಾರೆ. ಒಟ್ಟಾರೆ ಇವರೆಲ್ಲರ ಭಿನ್ನಾಭಿಪ್ರಾಯದ ಮಧ್ಯೆ ಪಾಪ ಮಕ್ಕಳು ಮಾತ್ರ ಆತಂಕದಿಂದಲೇ ಪಾಠ ಕೇಳುವಂತಾಗಿದೆ.

ಗೋಪಾಲ್ ಸೋಮಯ್ಯ ಟಿವಿ9 ಕೊಡಗು