ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದ ಬಸ್; ಅದೃಷ್ಟವಷಾತ್ ಪ್ರಯಾಣಿಕರು ಅಪಾಯದಿಂದ ಪಾರು

| Updated By: ganapathi bhat

Updated on: Aug 01, 2021 | 10:42 PM

Bus Accident in Madikeri: ಆದರೆ, ದಿಬ್ಬಕ್ಕೆ ಮಗುಚಿಕೊಂಡ ಹಿನ್ನೆಲೆ ಬಸ್​ನ ಬಾಗಿಲುಗಳು ಜಾಮ್ ಆಗಿದ್ದವು. ಹೀಗಾಗಿ, ಪ್ರಯಾಣಿಕರು ತುರ್ತು ದ್ವಾರದ ಮೂಲಕ ಹೊರ ಬಂದಿದ್ದಾರೆ. ಮೈಸೂರು-ಮಡಿಕೇರಿ‌ ಮಧ್ಯೆ ಸಂಚರಿಸುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದ ಬಸ್; ಅದೃಷ್ಟವಷಾತ್ ಪ್ರಯಾಣಿಕರು ಅಪಾಯದಿಂದ ಪಾರು
ಬಸ್ ಅಪಘಾತ ಸಂಭವಿಸಿರುವುದು
Follow us on

ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಒಂದು ಕಂದಕಕ್ಕೆ ಉರುಳಿಬಿದ್ದ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಬೋಯಿಕೇರಿ ಗ್ರಾಮದಲ್ಲಿ ಇಂದು (ಆಗಸ್ಟ್ 1) ನಡೆದಿದೆ. ಅದೃಷ್ಟವಷಾತ್, ಸರ್ಕಾರಿ ಬಸ್​ನಲ್ಲಿ ತೆರಳುತ್ತಿದ್ದ 30 ಪ್ರಯಾಣಿಕರು ಕೂಡ ಸುರಕ್ಷಿತವಾಗಿದ್ದಾರೆ. ಮೈಸೂರು-ಮಡಿಕೇರಿ ನಡುವೆ ಸಂಚರಿಸುವ ಸರ್ಕಾರಿ ಬಸ್​ ಇದಾಗಿದ್ದು ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಬೋಯಿಕೇರಿ ಬಳಿ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಘಟನೆ ನಡೆದಿದೆ.

ಆದರೆ, ದಿಬ್ಬಕ್ಕೆ ಮಗುಚಿಕೊಂಡ ಹಿನ್ನೆಲೆ ಬಸ್​ನ ಬಾಗಿಲುಗಳು ಜಾಮ್ ಆಗಿದ್ದವು. ಹೀಗಾಗಿ, ಪ್ರಯಾಣಿಕರು ತುರ್ತು ದ್ವಾರದ ಮೂಲಕ ಹೊರ ಬಂದಿದ್ದಾರೆ. ಮೈಸೂರು-ಮಡಿಕೇರಿ‌ ಮಧ್ಯೆ ಸಂಚರಿಸುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

ಸಾರಿಗೆ ಇಲಾಖೆಯ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ
ಸಾರಿಗೆ ಇಲಾಖೆಯ ನೌಕರರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಸಾರಿಗೆ ಇಲಾಖೆಯ 4 ನಿಗಮಗಳ ನೌಕರರ ತುಟ್ಟಿ ಭತ್ಯೆ ಹೆಚ್ಚಿಸಿದೆ. ಜುಲೈ 1 ರಿಂದ ಅನ್ವಯವಾಗುವಂತೆ ಶೇಕಡಾ 11.25 ರಿಂದ ಶೇ. 21.50 ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿ ಜುಲೈ 27 ರಂದು ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಅನ್ವಯ ನೌಕರರ ವೇತನಕ್ಕೆ ತುಟ್ಟಿ ಭತ್ಯೆ ಹೆಚ್ಚಳದ ಮೊತ್ತ ಸೇರ್ಪಡೆಯಾಗಲಿದೆ.

ಕರ್ನಾಟಕ ಸರ್ಕಾರವು ಉದ್ಯೋಗಿಗಳಿಗೆ ಶೇ 11ರಷ್ಟು ತುಟ್ಟಿಭತ್ಯೆ ನೀಡಲು ನಿರ್ಧರಿಸಿರುವ ವಿಷಯವನ್ನು ಜುಲೈ 21ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬಹಿರಂಗಪಡಿಸಿತ್ತು.

ಇದನ್ನೂ ಓದಿ: ಮಡಿಕೇರಿ: ಭೂಕುಸಿತ ಸಂತ್ರಸ್ತರ ಗೋಳಾಟ ಕೇಳೋರೇ ಇಲ್ಲ; ಸಿಡಿದೆದ್ದ ಗ್ರಾಮ ಪಂಚಾಯಿತಿ ಸದಸ್ಯರು

ಲಾಕ್​ಡೌನ್ ಉಲ್ಲಂಘಿಸಿದ ಪ್ರವಾಸಿಗರ ಮೇಲೆ ಮಡಿಕೇರಿ‌ಯಲ್ಲಿ ಎಫ್ಐಆರ್ ದಾಖಲು

(Govt Bus fell down near Madikeri Boyikeri Mysuru Kodagu route bus 30 passengers are safe)

Published On - 10:34 pm, Sun, 1 August 21