AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್ ಉಲ್ಲಂಘಿಸಿದ ಪ್ರವಾಸಿಗರ ಮೇಲೆ ಮಡಿಕೇರಿ‌ಯಲ್ಲಿ ಎಫ್ಐಆರ್ ದಾಖಲು

ಮಹಾಮಾರಿ ಹಿನ್ನೆಲೆ ಲಾಕ್ಡೌನ್ ಹೇರಿದ್ದರೂ ನಿಯಮ ಉಲ್ಲಂಘಿಸಿ ಕೆಲ ಪ್ರವಾಸಿಗರು ಮಡಿಕೇರಿ ಪ್ರವೇಶಿಸಿ ಝೂಮ್ ಹೋಂಸ್ಟೇನಲ್ಲಿ ತಂಗಿದ್ದರು. ಮಾಹಿತಿ ತಿಳಿದ ಪೊಲೀಸರು ಹೋಂಸ್ಟೇ ಮೇಲೆ ದಾಳಿ ನಡೆಸಿದ್ದಾರೆ. ಹಾಗೂ 10 ಪ್ರವಾಸಿಗರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.

ಲಾಕ್​ಡೌನ್  ಉಲ್ಲಂಘಿಸಿದ ಪ್ರವಾಸಿಗರ ಮೇಲೆ ಮಡಿಕೇರಿ‌ಯಲ್ಲಿ ಎಫ್ಐಆರ್ ದಾಖಲು
ಲಾಕ್ಡೌನ್ ಉಲ್ಲಂಘಿಸಿದ ಪ್ರವಾಸಿಗರ ಮೇಲೆ ಮಡಿಕೇರಿ‌ಯಲ್ಲಿ ಎಫ್ಐಆರ್ ದಾಖಲು
Follow us
TV9 Web
| Updated By: ಆಯೇಷಾ ಬಾನು

Updated on:Jun 28, 2021 | 8:33 AM

ಮಡಿಕೇರಿ: ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಕೊಡಗು ಜಿಲ್ಲಾಡಳಿತ ಹರಸಾಹಸ ಪಡ್ತಿದೆ. ಈ ನಡುವೆ ಹೊರಗಿನಿಂದ ಜಿಲ್ಲೆಗೆ ಬರುವವರ ಸಂಖ್ಯೆ ಮಾತ್ರ ದಿನೇದಿನೆ ಹೆಚ್ಚಾಗ್ತಿದೆ. ಪ್ರವಾಸಿ ತಾಣಗಳು ಬಂದ್ ಆಗಿದ್ರೂ ಕೂಡಾ ಕೊಡಗಿನಲ್ಲಿ ಪ್ರವಾಸಿಗರ ಓಡಾಟ ಮಾತ್ರ ನಿಂತಿಲ್ಲ. ಇದು ಜಿಲ್ಲಾಡಳಿತಕ್ಕೆ ಮತ್ತಷ್ಟು ತಲೆನೋವು ತಂದಿದೆ. ಕೊರೊನಾ ಲಾಕ್ಡೌನ್ ಉಲ್ಲಂಘಿಸಿ ಬೆಂಗಳೂರಿನಿಂದ ಮಡಿಕೇರಿಗೆ ಮೋಜು ಮಸ್ತಿ ಮಾಡಲು ಬಂದಿದ್ದ ಪ್ರವಾಸಿಗರ ಮೇಲೆ ಎಫ್ಐಆರ್ ದಾಖಲಾಗಿದೆ. ಮಡಿಕೇರಿ‌ನಗರ ಪೊಲೀಸರು 10 ಪ್ರವಾಸಿಗರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಹಾಗೂ ಆಶ್ರಯ ನೀಡಿದ್ದ ಝೂಮ್ ಹೋಂಸ್ಟೇ ಸೀಲ್ ಡೌನ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಜುಲೈ 5ರವರೆಗೆ ಲಾಕ್‍ಡೌನ್ ಇದೆ. ಎಲ್ಲೂ ಕೂಡ ಪ್ರವಾಸಿ ತಾಣಗಳು ಓಪನ್ ಇಲ್ಲ. ಹೀಗಿದ್ರೂ ಬೇರೆ ಜಿಲ್ಲೆಗಳು ಅನ್‍ಲಾಕ್ ಆಗಿರುವ ಕಾರಣ ಕೊಡಗು ಜಿಲ್ಲೆ ಕೂಡಾ ಆಗಿರಬಹುದು ಅಂದುಕೊಂಡು ಕೊಡಗಿಗೆ ಪ್ರವಾಸಿಗರು ಬರುತ್ತಿದ್ದಾರೆ. ಮಹಾಮಾರಿ ಹಿನ್ನೆಲೆ ಲಾಕ್ಡೌನ್ ಹೇರಿದ್ದರೂ ನಿಯಮ ಉಲ್ಲಂಘಿಸಿ ಕೆಲ ಪ್ರವಾಸಿಗರು ಮಡಿಕೇರಿ ಪ್ರವೇಶಿಸಿ ಝೂಮ್ ಹೋಂಸ್ಟೇನಲ್ಲಿ ತಂಗಿದ್ದರು. ಮಾಹಿತಿ ತಿಳಿದ ಪೊಲೀಸರು ಹೋಂಸ್ಟೇ ಮೇಲೆ ದಾಳಿ ನಡೆಸಿದ್ದಾರೆ. ಹಾಗೂ 10 ಪ್ರವಾಸಿಗರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಜೊತೆಗೆ ಝೂಮ್ ಹೋಂ ಸ್ಟೇ ಮಾಲೀಕರ ವಿರುದ್ಧವೂ ಎಫ್ಐಆರ್ ದಾಖಲಾಗಿದ್ದು ಹೋಂ ಸ್ಟೇ ಸೀಲ್ ಡೌನ್ ಮಾಡಲಾಗಿದೆ.

ಇನ್ನು ಮೂರು ವಾಹನಗಳಲ್ಲಿ 13 ಪ್ರವಾಸಿಗರು ಮಾಂದಲಪಟ್ಟಿಗೆ ತೆರಳುತ್ತಿದ್ದರು ಈ ವೇಳೆ ಪ್ರವಾಸಿಗರಿಗೆ ಮಡಿಕೇರಿ ಗ್ರಾಮಾಂತರ ಠಾಣೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಳಿಕ ಪ್ರವಾಸಿಗರನ್ನ ಠಾಣೆಗೆ ಕರೆ ತಂದಿದ್ದಾರೆ. ಮಹಾಮಾರಿ ಕೊರೊನಾ ಎರಡನೇ ಅಲೆ ಹೆಚ್ಚಿನ ಅನಾಹುತ ತಂದೊಡ್ಡಿದೆ. ಹೆಚ್ಚಿನ ಸಾವು-ನೋವುಗಳು ಕೂಡ ಸಂಭವಿಸಿದೆ. ಇಂತಹ ಸಮಯದಲ್ಲಿ ಪ್ರವಾಸಿಗರು ಈ ರೀತಿ ನಿಯಮ ಉಲ್ಲಂಘನೆ ಮಾಡುತ್ತಿರುವುದು ಪೊಲೀಸರಿಗೆ ತಲೆ ನೋವಾಗಿದೆ.

ಮುಖ್ಯವಾಗಿ ಕೊಡಗಿಗೆ ಪ್ರವಾಸಿಗರು, ಹೊರ ಭಾಗದ ಜನ ಆರಾಮಾಗಿ ಎಂಟ್ರಿ ಕೊಡೋದಕ್ಕೆ ಕಾರಣ ಚೆಕ್‍ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ತಪಾಸಣೆ ಇಲ್ಲದಿರೋದು. ಸಂಪಾಜೆ ಹಾಗೂ ಕುಶಾಲನಗರದ ಕೊಪ್ಪ ಚೆಕ್‍ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ತಪಾಸಣೆ ಆಗುತ್ತಿಲ್ಲ. ಹೀಗಾಗಿ ಹೊರ ಜಿಲ್ಲೆ, ಹೊರ ರಾಜ್ಯದ ಜನ ಜಿಲ್ಲೆಯೊಳಗೆ ಎಂಟ್ರಿಕೊಟ್ಟ ಬಳಿಕ ಪೇಚಿಗೆ ಸಿಲುಕುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಕೂಡ ಕಡಿಮೆಯಾಗ್ತಿಲ್ಲ. ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ಕೂಡ ಶೇ.9, ಶೇ10 ಹೀಗೆ ಇದೆ. ಹೀಗಾಗಿ ಕೊಡಗನ್ನ ಅನ್‍ಲಾಕ್ ಮಾಡೋದಕ್ಕೆ ಆಗ್ತಿಲ್ಲ. ಹೀಗಿರುವಾಗ ಹೊರ ಜಿಲ್ಲೆ, ಹೊರರಾಜ್ಯದಿಂದ ಜನ ಬಂದ್ರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ.

ಇದನ್ನೂ ಓದಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷ ಸೇರಿದ ಬಿಜೆಪಿ ಕೌನ್ಸಿಲರ್

Published On - 2:56 pm, Sun, 27 June 21

ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ