ಲಾಕ್​ಡೌನ್​ ತೆರವುಗೊಂಡರು ಮೈಸೂರು ಮೃಗಾಲಯದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ

ರಾಜ್ಯದಲ್ಲಿ ಲಾಕ್​ಡೌನ್ ತೆರವಾಗಿ ಪ್ರವಾಸೋದ್ಯಮ ಚಟುವಟಿಕೆ ಪ್ರಾರಂಭವಾಗಿದ್ದು, ಸದ್ಯ ಗದಗ, ಹಂಪಿ, ಮೃಗಾಲಯಗಳು ಪ್ರವಾಸಿಗರಿಗಾಗಿ ತೆರೆದಿದೆ.‌ ಇನ್ನು ಮುಂದಿನ‌ವಾರದಿಂದ ಬನ್ನೇರುಘಟ್ಟ ಮೃಗಾಲಯ ಕೂಡ ಪ್ರವಾಸಿಗರಿಗೆ ತೆರೆದುಕೊಳ್ಳಲಿದ್ದು, ಇದಕ್ಕಾಗಿ ಮೃಗಾಲಯ ಪ್ರಾಧಿಕಾರ ವೀಡಿಯೋ ಸಹ ಬಿಡುಗಡೆ‌ಮಾಡಿದೆ.‌ ಆದರೆ ಮೈಸೂರಿನ‌ ಮೃಗಾಲಯ ಸದ್ಯಕ್ಕಂತು ಪ್ರವಾಸಿಗರ ದರ್ಶನಕ್ಕೆ ಅವಕಾಶ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಲಾಕ್​ಡೌನ್​ ತೆರವುಗೊಂಡರು ಮೈಸೂರು ಮೃಗಾಲಯದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ
ಚಾಮರಾಜೇಂದ್ರ ಮೃಗಾಲಯ

ಮೈಸೂರು: ಕೊರೊನಾದಿಂದ ತೀರ ಸಂಕಷ್ಟಕ್ಕೆ‌ ಸಿಲುಕಿದ್ದ ಮೃಗಾಲಯಕ್ಕೆ ಈ ಬಾರಿ ಆಸರೆಯಾಗಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್.‌ ನಟ ದರ್ಶನ್‌ ಅವರ ಅಭಿಯಾನಕ್ಕೆ‌ 3 ಕೋಟಿಗೂ ಅಧಿಕ ದೇಣಿಗೆ ಸಂಗ್ರವಾಗಿದ್ದು, ಪ್ರಾಣಿಗಳ ನೆರವಿಗೆ ಜನರು ಮುಂದೆ ಬಂದಿದ್ದಾರೆ.‌ ಈಗ ಕೊರೊನಾ ಸೋಂಕಿನ ತೀವ್ರತೆಯೂ ಕಡಿಮೆಯಾಗುತ್ತಿದ್ದು, ಲಾಕ್​ಡೌನ್​ ಸಡಿಲಗೊಂಡಿದೆ. ಹೀಗಾಗಿ 3 ಮೃಗಾಲಯಕ್ಕೆ ಪ್ರವಾಸಿಗರಿಗೆ ಅವಕಾಶ‌ ನೀಡಲಾಗಿದೆ. ಬನ್ನೇರುಘಟ್ಟ ಮೃಗಾಲಯ ಕೂಡ ಇನ್ನೊಂದು ವಾರದಲ್ಲಿ ತೆರೆಯಲಿದೆ. ಆದರೆ ಮೈಸೂರು ಮೃಗಾಲಯಕ್ಕೆ ಮಾತ್ರ ಪ್ರವಾಸಿಗರು ತೆರಳುವಂತಿಲ್ಲ. ಇದಕ್ಕೆ ಕಾರಣ ಸದ್ಯಕ್ಕೆ ಈ ಮೃಗಾಲಯದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

ಲಾಕ್‌ಡೌನ್‌ನಿಂದಾಗಿ ರಾಜ್ಯದ ಎಲ್ಲ 9 ಮೃಗಾಲಯಗಳೂ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿವೆ. ಲಾಕ್​ಡೌನ್​ನಿಂದ ಪ್ರಾಣಿಗಳ ಆಹಾರಕ್ಕೂ ಹಣವಿಲ್ಲದೆ ಪರದಾಡುತ್ತಿರುವ ಸ್ಥಿತಿ ಕರ್ನಾಟ ಮೃಗಾಲಯ ಪ್ರಾಧಿಕಾರಕ್ಕೆ ಬಂದೊದಗಿತ್ತು.
ಈ ವೇಳೆ ಮೃಗಾಲಯ ಸಂಕಷ್ಟಕ್ಕೆ ನೆರವಾಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್.‌ ಅರಣ್ಯ ಇಲಾಖೆಯ ರಾಯಭಾರಿಯು ಆಗಿರುವ ನಟ ದರ್ಶನ್ ವಿಡಿಯೋ ಮೂಲಕ ಮೃಗಾಲಯ ಸಂಕಷ್ಟಕ್ಕೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ಈ ಬೆನ್ನಲ್ಲೆ 3.25 ಕೋಟಿ ಹಣ ಸಂಗ್ರಹವಾಗಿದೆ. ಹಣ ಮೃಗಾಲಯ ಪ್ರಾಧಿಕಾರದ ಖಾತೆಗೆ ಸಂದಾಯವಾಗಿದ್ದು. ದರ್ಶನ್​ರ ಅಭಿಮಾನಿಗಳು ಹಾಗೂ ವನ್ಯಜೀವಿ ಪ್ರಿಯರು ಪ್ರಾಣಿಗಳನ್ನು ದತ್ತು ತೆಗೆದುಕೊಂಡು ನೆರವಿಗೆ ಮುಂದಾಗಿದ್ದಾರೆ. 50 ರೂಪಾಯಿಂದ ಒಂದೂವರೆ ಲಕ್ಷದವರೆಗೂ ಸಾಕಷ್ಟು ಜನರು ನೆರವನ್ನು ನೀಡಿದ್ದಾರೆ. ಈ‌ ಮೂಲಕ 3.25 ಕೋಟಿ ಹಣ ಸಂದಾಯವಾಗಿರುವುದಕ್ಕೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ನಟ ದರ್ಶನ್​ಗೆ ಧನ್ಯವಾದ ತಿಳಿಸಿದ್ದಾರೆ.

ಇನ್ನು ರಾಜ್ಯದಲ್ಲಿ ಲಾಕ್​ಡೌನ್ ತೆರವಾಗಿ ಪ್ರವಾಸೋದ್ಯಮ ಚಟುವಟಿಕೆ ಪ್ರಾರಂಭವಾಗಿದ್ದು, ಸದ್ಯ ಗದಗ, ಹಂಪಿ, ಮೃಗಾಲಯಗಳು ಪ್ರವಾಸಿಗರಿಗಾಗಿ ತೆರೆದಿದೆ.‌ ಇನ್ನು ಮುಂದಿನ‌ವಾರದಿಂದ ಬನ್ನೇರುಘಟ್ಟ ಮೃಗಾಲಯ ಕೂಡ ಪ್ರವಾಸಿಗರಿಗೆ ತೆರೆದುಕೊಳ್ಳಲಿದ್ದು, ಇದಕ್ಕಾಗಿ ಮೃಗಾಲಯ ಪ್ರಾಧಿಕಾರ ವೀಡಿಯೋ ಸಹ ಬಿಡುಗಡೆ‌ಮಾಡಿದೆ.‌ ಆದರೆ ಮೈಸೂರಿನ‌ ಮೃಗಾಲಯ ಸದ್ಯಕ್ಕಂತು ಪ್ರವಾಸಿಗರ ದರ್ಶನಕ್ಕೆ ಅವಕಾಶ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಂದಿನ ತಿಂಗಳು ಅಂದರೆ ಜುಲೈ 5 ನೇ ತಾರೀಖಿನ ನಂತರ ತೀರ್ಮಾಣ ಮಾಡುವ ಸಾಧ್ಯತೆ ಇದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ:

ನಟ ದರ್ಶನ್ ಮನವಿಗೆ ಓಗೊಟ್ಟ ಜನತೆ; ಒಂದೇ ವಾರದಲ್ಲಿ 1 ಕೋಟಿ ರೂಪಾಯಿ ಮೃಗಾಲಯ ಪ್ರಾಧಿಕಾರದ ಖಾತೆಗೆ ಸಂದಾಯ

ಪ್ರಾಣಿಗಳ ದಾಖಲೆಯ ಸಂತಾನಾಭಿವೃದ್ಧಿ; ಮಂಗಳೂರಿನ ಪಿಲಿಕುಳ ಮೃಗಾಲಯದಲ್ಲಿ ಸಂತಸದ ವಾತಾವರಣ