ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷ ಸೇರಿದ ಬಿಜೆಪಿ ಕೌನ್ಸಿಲರ್

AAP: ಈ ಸಂದರ್ಭದಲ್ಲಿ ಮಾತನಾಡಿದ ಬಲ್ಲನ್ ಬಿಜೆಪಿಯಲ್ಲಿನ ರಾಜಕೀಯ ನಡೆಯಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ಅವರು ಕೇವಲ ಸೇಡು ತೀರಿಸಿಕೊಳ್ಳುತ್ತಾರೆ. ಅಲ್ಲಿ ಸರ್ವಾಧಿಕಾರ ನಡೆಯುತ್ತಿದೆ. ಹಾಗಾಗಿ ನಾನು ಆಮ್ ಆದ್ಮಿ ಪಕ್ಷಕ್ಕೆ ಸೇರಲು ನಿರ್ಧರಿಸಿದೆ ಎಂದಿದ್ದಾರೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷ ಸೇರಿದ ಬಿಜೆಪಿ ಕೌನ್ಸಿಲರ್
ಆಮ್ ಆದ್ಮಿ ಪಕ್ಷ ಸೇರಿದ ರಾಜ್ ಕುಮಾರ್ ಬಲ್ಲನ್

ದೆಹಲಿ: ಘೋಂಡಾ ವಿಧಾನಸಭಾ ಕ್ಷೇತ್ರದ ಬ್ರಹ್ಮಪುರಿ ವಾರ್ಡ್‌ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೌನ್ಸಿಲರ್ ರಾಜ್‌ಕುಮಾರ್ ಬಲ್ಲನ್ ಅವರು ಶನಿವಾರ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರಿದ್ದಾರೆ .ಕೌನ್ಸಿಲರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದದೆಹಲಿ ಪರಿಸರ ಸಚಿವ ಗೋಪಾಲ್ ರೈ ಅವರು ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಇನ್ನೂ ಹಲವಾರು ಮಂದಿ ಎಎಪಿಗೆ ಸೇರಲು ಸಿದ್ಧರಾಗಿದ್ದಾರೆ. ಇದು ಮುಂಬರುವ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಸಹಾಯವಾಗಲಿದೆ ಎಂದಿದ್ದಾರೆ.

“ನಾವೆಲ್ಲರೂ ಒಂದೇ ಗುರಿಯನ್ನು ಹೊಂದಿದ್ದೇವೆ. ಇದಲ್ಲದೆ, ದೆಹಲಿ ಸರ್ಕಾರದ ಬದಲಾವಣೆಯಿಂದಾಗಿ ಕೆಲಸದ ವೇಗ ಹೆಚ್ಚಾಗಿದೆ, ಎಂಸಿಡಿಯಲ್ಲೂ ಬದಲಾವಣೆ ಇರಬೇಕು ”ಎಂದು ರೈ ಹೇಳಿದರು. ದೆಹಲಿಯ ಮೂರು ಕಾರ್ಪೊರೇಷನ್ – ಉತ್ತರ, ಪೂರ್ವ ಮತ್ತು ದಕ್ಷಿಣ ಕಾರ್ಪೊರೇಷನ್ನಲ್ಲಿ ಮುಂದಿನ ವರ್ಷರಾಂಭದಲ್ಲಿ ಚುನಾವಣೆ ನಡೆಯಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಬಲ್ಲನ್ ಬಿಜೆಪಿಯಲ್ಲಿನ ರಾಜಕೀಯ ನಡೆಯಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ಅವರು ಕೇವಲ ಸೇಡು ತೀರಿಸಿಕೊಳ್ಳುತ್ತಾರೆ. ಅಲ್ಲಿ ಸರ್ವಾಧಿಕಾರ ನಡೆಯುತ್ತಿದೆ. ಹಾಗಾಗಿ ನಾನು ಆಮ್ ಆದ್ಮಿ ಪಕ್ಷಕ್ಕೆ ಸೇರಲು ನಿರ್ಧರಿಸಿದೆ ಎಂದಿದ್ದಾರೆ.

ಬಲ್ಲನ್ ಅವರು ಸತತ ನಾಲ್ಕು ಬಾರಿ ಭಾರತೀಯ ಜನತಾ ಪಕ್ಷದ ಕಿಸಾನ್ ಮೋರ್ಚಾ ರಾಜ್ಯ ಅಧ್ಯಕ್ಷರಾಗಿದ್ದಾರೆ ಎಂದು ಎಎಪಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಬಲ್ಲನ್ ಅವರು ಮಯೂರ್ ವಿಹಾರ್ ಜಿಲ್ಲೆಯ ಉಸ್ತುವಾರಿ, ಈಶಾನ್ಯ ಜಿಲ್ಲೆಯ ಅಧ್ಯಕ್ಷ ಮತ್ತು ಇಡಿಎಂಸಿ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ ಎರಡು ಬಾರಿ ಕಾರ್ಯನಿರ್ವಹಿಸಿದ್ದರು.


ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನ ಸೂರತ್ ಉದ್ಯಮಿ ಮಹೇಶ್ ಸವನಿ ಎಎಪಿಗೆ ಸೇರ್ಪಡೆ

ಸೂರತ್ ಮೂಲದ ಉದ್ಯಮಿ ಮತ್ತು ಸಮಾಜ ಸೇವಕ ಮಹೇಶ್ ಸವನಿ ಭಾನುವಾರ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರಿದ್ದಾರೆ.

ಗುಜರಾತ್‌ನಲ್ಲಿ ರಾಜ್ಯದ ಹೊಸ ಮತ್ತು ಆಧುನಿಕ ರಾಜಕಾರಣದ ಮನೆಯನ್ನು ನಿರ್ಮಿಸಬಹುದು. ಇದಕ್ಕೆ ಅಡಿಪಾಯ ಹಾಕಲು ನಾವು ಮಹೇಶ್ ಜಿ ಅವರನ್ನು ಆಮ್ ಆದ್ಮಿ ಪಕ್ಷಕ್ಕೆ ಸ್ವಾಗತಿಸುತ್ತೇವೆ “ಎಂದು ಹಿರಿಯ ಎಎಪಿ ನಾಯಕ ಮನೀಶ್ ಸಿಸೋಡಿಯಾ ಸೂರತ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.” ಗುಜರಾತ್‌ನಲ್ಲಿ ಎಎಪಿ ಹಗಲು-ರಾತ್ರಿ ಬೇಧವಿಲ್ಲ  ನಾಲ್ಕು ಪಟ್ಟು ವೇಗದಲ್ಲಿ ಬೆಳೆಯುತ್ತಿದೆ “ಎಂದು ದೆಹಲಿಯ ಉಪ ಮುಖ್ಯಮಂತ್ರಿ ಸಿಸೋಡಿಯಾ ಹೇಳಿದರು

ಫೆಬ್ರವರಿಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೂಲಕ ಆಯ್ಕೆಯಾದ ಎಎಪಿ ಕೌನ್ಸಿಲರ್‌ಗಳನ್ನು ಸಿಸೋಡಿಯಾ ಹೊಗಳಿದರು. “ಈಗ ಇದು ದೆಹಲಿಯ ಕೆಲಸ ಮಾತ್ರವಲ್ಲ, ಗುಜರಾತ್‌ನ ಕೆಲಸವೂ ಮಾತನಾಡಲು ಪ್ರಾರಂಭಿಸಿದೆ. ಕೌನ್ಸಿಲರ್‌ಗಳ ಕೆಲಸವು ಮಾತನಾಡಲು ಪ್ರಾರಂಭಿಸಿದೆ. ಎಲ್ಲದರಿಂದ ಪ್ರಭಾವಿತರಾದ ಮಹೇಶ್ ಭಾಯ್ ಅವರು ಎಎಪಿ ಕುಟುಂಬಕ್ಕೆ ಸೇರಲು ನಿರ್ಧರಿಸಿದರು

ಗುಜರಾತ್ ನಿವಾಸಿಗಳನ್ನುದ್ದೇಶಿಸಿ ಮಾತನಾಡಿದ ಸಿಸೋಡಿಯಾ, ಎಎಪಿಯ ಈ ಜನರು “ಹೊಸ ಮತ್ತು ಯಶಸ್ವಿ ರಾಜಕೀಯದ ಕನಸನ್ನು ನನಸಾಗಿಸುತ್ತಾರೆ” ಎಂದು ರಾಜ್ಯವು ಆಶಿಸುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ವರ್ಷಗಳಿಂದ ಭರವಸೆ ಮಾತ್ರ ನೀಡುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಂಜಾಬ್‌ನ ಸಿಎಂ ಅಭ್ಯರ್ಥಿಯಾಗಿ ಎಎಪಿಯಿಂದ ಸಿಖ್ ಸಮುದಾಯದವರೇ ಸ್ಪರ್ಧೆ: ಅರವಿಂದ್ ಕೇಜ್ರಿವಾಲ್