ಎರಡೂ ಡೋಸ್​ ಲಸಿಕೆ ಪಡೆದಿದ್ದ ಮಹಿಳೆಯಲ್ಲಿ ಡೆಲ್ಟಾ ಪ್ಲಸ್​ ಪಾಸಿಟಿವ್​: ಚಂಡೀಗಢ್​​ನಲ್ಲೂ ಮೊದಲ ಕೇಸ್​ ದಾಖಲು

ಜೈಪುರ: ಎರಡೂ ಡೋಸ್​ ಲಸಿಕೆ ಪಡೆದ 65 ವರ್ಷದ ಮಹಿಳೆಯೊಬ್ಬರಲ್ಲಿ ಡೆಲ್ಟಾ ಪ್ಲಸ್​ ವೈರಸ್ ಕಾಣಿಸಿಕೊಂಡಿತ್ತು. ರಾಜಸ್ಥಾನದ ಬಿಕಾನರ್​​ನಲ್ಲಿ ಹೀಗೊಂದು ಪ್ರಕರಣ ಪತ್ತೆಯಾಗಿದ್ದು, ಇದು ರಾಜಸ್ಥಾನದಲ್ಲಿ ಮೊದಲ ಡೆಲ್ಟಾ ಪ್ಲಸ್​ ವೈರಸ್​ ಕೇಸ್ ಆಗಿದೆ. ಕೊರೊನಾದ ಉಳಿದೆಲ್ಲ ರೂಪಾಂತರಿ ವೈರಾಣುಗಿಂತ ಡೆಲ್ಟಾ ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತಿದ್ದರೂ ಈ ಮಹಿಳೆಗೆ ಹೆಚ್ಚೇನೂ ಸಮಸ್ಯೆಯಾಗಿಲ್ಲ. ಎರಡೂ ಡೋಸ್ ಲಸಿಕೆ ಪಡೆದಿದ್ದಕ್ಕೋ ಏನೋ, ಇವರು ಆಸ್ಪತ್ರೆಗೆ ಸಹ ದಾಖಲಾಗುವ ಅವಶ್ಯಕತೆ ಕಂಡಿಲ್ಲ. ಮನೆಯಲ್ಲೇ ಇದ್ದು, ಡೆಲ್ಟಾ ಪ್ಲಸ್​​ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. […]

ಎರಡೂ ಡೋಸ್​ ಲಸಿಕೆ ಪಡೆದಿದ್ದ ಮಹಿಳೆಯಲ್ಲಿ ಡೆಲ್ಟಾ ಪ್ಲಸ್​ ಪಾಸಿಟಿವ್​: ಚಂಡೀಗಢ್​​ನಲ್ಲೂ ಮೊದಲ ಕೇಸ್​ ದಾಖಲು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jun 27, 2021 | 1:30 PM

ಜೈಪುರ: ಎರಡೂ ಡೋಸ್​ ಲಸಿಕೆ ಪಡೆದ 65 ವರ್ಷದ ಮಹಿಳೆಯೊಬ್ಬರಲ್ಲಿ ಡೆಲ್ಟಾ ಪ್ಲಸ್​ ವೈರಸ್ ಕಾಣಿಸಿಕೊಂಡಿತ್ತು. ರಾಜಸ್ಥಾನದ ಬಿಕಾನರ್​​ನಲ್ಲಿ ಹೀಗೊಂದು ಪ್ರಕರಣ ಪತ್ತೆಯಾಗಿದ್ದು, ಇದು ರಾಜಸ್ಥಾನದಲ್ಲಿ ಮೊದಲ ಡೆಲ್ಟಾ ಪ್ಲಸ್​ ವೈರಸ್​ ಕೇಸ್ ಆಗಿದೆ. ಕೊರೊನಾದ ಉಳಿದೆಲ್ಲ ರೂಪಾಂತರಿ ವೈರಾಣುಗಿಂತ ಡೆಲ್ಟಾ ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತಿದ್ದರೂ ಈ ಮಹಿಳೆಗೆ ಹೆಚ್ಚೇನೂ ಸಮಸ್ಯೆಯಾಗಿಲ್ಲ. ಎರಡೂ ಡೋಸ್ ಲಸಿಕೆ ಪಡೆದಿದ್ದಕ್ಕೋ ಏನೋ, ಇವರು ಆಸ್ಪತ್ರೆಗೆ ಸಹ ದಾಖಲಾಗುವ ಅವಶ್ಯಕತೆ ಕಂಡಿಲ್ಲ. ಮನೆಯಲ್ಲೇ ಇದ್ದು, ಡೆಲ್ಟಾ ಪ್ಲಸ್​​ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಮಹಿಳೆ ಕೊವ್ಯಾಕ್ಸಿನ್​ ಎರಡೂ ಡೋಸ್​ ಪಡೆದಿದ್ದರು.

ಈ ಬಗ್ಗೆ ಮಾಹಿತಿ ನೀಡಿದ ಬಿಕಾನೆರ್​ ಮುಖ್ಯ ಆರೋಗ್ಯ ಅಧಿಕಾರಿ ಒಪಿ ಚಾಹರ್​, ಮಹಿಳೆಯರ ಸ್ಯಾಂಪಲ್​​ನ್ನು ಪುಣೆಯ ವೈರಾಲಜಿ ಇನ್​ಸ್ಟಿಟ್ಯೂಟ್​ಗೆ ತಪಾಸಣೆಗೆಂದು ಕಳಿಸಲಾಗಿತ್ತು. ರಿಪೋರ್ಟ್​​ನಲ್ಲಿ ಡೆಲ್ಟಾ ಪ್ಲಸ್​ ಇರುವುದು ದೃಢಪಟ್ಟಿದೆ. ಆದರೆ ಈ ವರದಿ ಬರುವಷ್ಟರಲ್ಲಿ ಆಕೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರು. ಇನ್ನು ಡೆಲ್ಟಾ ಪ್ಲಸ್​ನ ಯಾವುದೇ ಲಕ್ಷಣಗಳೂ ಆಕೆಯಲ್ಲಿ ಇರಲಿಲ್ಲ ಎಂದಿದ್ದಾರೆ. ಈ ಮಹಿಳೆ ಮತ್ತು ಆಕೆಯ ಕುಟುಂಬದ ಮತ್ತೆ ಮೂವರು ಹಿಂದೆಯೇ ಕೊವಿಡ್​ 19 ಸೋಂಕಿಗೆ ಒಳಗಾಗಿದ್ದರು. ಆಗ ಕೂಡ ಆಸ್ಪತ್ರೆಗೆ ದಾಖಲಾಗದೆ, ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಚಂಡೀಗಢ್​​​​ನಲ್ಲಿ ಡೆಲ್ಟಾ ಮೊದಲ ಕೇಸ್​ ರಾಜಸ್ಥಾನದಲ್ಲಿ ಮೊದಲ ಡೆಲ್ಟಾ ಪ್ಲಸ್​ ಕೊವಿಡ್​ ರೂಪಾಂತರಿ ವೈರಾಣು ಪತ್ತೆಯಾದ ಬೆನ್ನಲ್ಲೇ ಚಂಡೀಗಢ್​​​ನಲ್ಲೂ ಮೊದಲ ಡೆಲ್ಟಾ ಪ್ಲಸ್​ ವೈರಾಣು ಕಾಣಿಸಿಕೊಂಡಿದೆ. ಇಲ್ಲಿ ಒಂದು ಡೆಲ್ಟಾ ಪ್ಲಸ್​ ಕೇಸ್​ ಹಾಗೂ 33 ಡೆಲ್ಟಾ ವೈರಸ್​ ಪ್ರಕರಣ ಪತ್ತೆಯಾಗಿದೆ.

ವಿಕಾಸನಗರ ನಿವಾಸಿ, 35 ವರ್ಷದ ವ್ಯಕ್ತಿಯಲ್ಲಿ ಡೆಲ್ಟಾ ಪ್ಲಸ್​ ವೈರಾಣು ಕಾಣಿಸಿಕೊಂಡಿದ್ದು, ಇವರಲ್ಲಿ ಮೇ 22ರಂದು ಕೊರೊನಾ ಪಾಸಿಟಿವ್​ ಆಗಿತ್ತು. ಇವರ ಕುಟುಂಬದಲ್ಲಿ ಸಣ್ಣ ಮಗು ಸೇರಿ, ಎಲ್ಲರಿಗೂ ಸಣ್ಣ ಲಕ್ಷಣಗಳು ಗೋಚರಿಸುತ್ತಿವೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್​ಗಳು ಅತ್ಯಂತ ವೇಗವಾಗಿ ಹರಡುತ್ತವೆ ಎಂದು ತಜ್ಞರು ಹೇಳಿದ್ದಾರೆ. ಹಾಗೇ, ಭಾರತದಲ್ಲಿ ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶಗಳಿಂದ ಹೆಚ್ಚಿನ ಕೇಸ್​ಗಳು ದಾಖಲಾಗುತ್ತಿವೆ. ಹೀಗೆ, ಒಂದೊಂದೇ ರಾಜ್ಯವಾಗಿ ಎಲ್ಲಕಡೆಗೂ ಡೆಲ್ಟಾ ಹರಡುತ್ತಿದೆ.

ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಅಸ್ತ್ರ.. ಇಂದು ದೆಹಲಿಗೆ ತೆರಳಲಿರುವ ಬಿ.ಕೆ.ಹರಿಪ್ರಸಾದ್

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ