ಮಡಿಕೇರಿ: ಭೂಕುಸಿತ ಸಂತ್ರಸ್ತರ ಗೋಳಾಟ ಕೇಳೋರೇ ಇಲ್ಲ; ಸಿಡಿದೆದ್ದ ಗ್ರಾಮ ಪಂಚಾಯಿತಿ ಸದಸ್ಯರು

ಈ ಪ್ರದೇಶ ವಾಸಿಸಲು ಯೋಗ್ಯವಾಗಿಲ್ಲ ಅಂತ ತಜ್ಞರು ವರದಿ ನೀಡಿದ್ದಾರೆ. ಆದರೂ ಇಲ್ಲಿನ ನಿವಾಸಿಗಳಿಗೆ ಸರ್ಕಾರ ಮನೆ ನೀಡಿಲ್ಲ. ಹಾಗಾಗಿ ಆ ಮನೆಗಳಲ್ಲೇ ಏಳು ಕುಟುಂಬಗಳು ವಾಸವಿದೆ. ಮಳೆ ಬಂದಾಗ ಮನೆಯ ಪಕ್ಕದಲ್ಲೇ ಬೆಟ್ಟಗಳು ಜರೆಯುತ್ತಿವೆ.

ಮಡಿಕೇರಿ: ಭೂಕುಸಿತ ಸಂತ್ರಸ್ತರ ಗೋಳಾಟ ಕೇಳೋರೇ ಇಲ್ಲ; ಸಿಡಿದೆದ್ದ ಗ್ರಾಮ ಪಂಚಾಯಿತಿ ಸದಸ್ಯರು
ಅಪಾಯದ ಸ್ಥಿತಿಯಲ್ಲಿರುವ ಮನೆಗಳು
Follow us
TV9 Web
| Updated By: sandhya thejappa

Updated on: Aug 01, 2021 | 12:01 PM

ಮಡಿಕೇರಿ: 2018ರಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಮಡಿಕೇರಿ ತಾಲೂಕಿನ ಉದಯಗಿರಿ ಮತ್ತು ಜಾಂಗೀರ್ ಪೈಸಾರಿ ಗ್ರಾಮಗಳು ತತ್ತರಿಸಿ ಹೋಗಿದ್ದವು. ಭೂಕುಸಿತದಲ್ಲಿ ಸುಮಾರು 10ಕ್ಕೂ ಅಧಿಕ ಮನೆಗಳು ಕೊಚ್ಚಿ ಹೋಗಿದ್ದವು. ಈ ಗ್ರಾಮಗಳಲ್ಲಿ ಸುಮಾರು 21 ಕುಟುಂಬಗಳಿದ್ದು, ಬೆಟ್ಟದ ಆಳ ಪ್ರಪಾತದಲ್ಲಿ ವಾಸಿಸುತ್ತಿವೆ. ತೀರಾ ಅಪಾಯಕಾರಿ ಪರಿಸ್ಥಿತಿಯಲ್ಲೇ ವಾಸಿಸುತ್ತಿವೆ. ಕಡಿದಾದ ಬೆಟ್ಟದ ಅಂಚಿನಲ್ಲೇ ಹಲವು ಮನೆಗಳು ಇವೆ. ಆದರೂ ಸಂತ್ರಸ್ತರ ಗೋಳಾಟ ಕೇಳೋರು ಯಾರು ಇಲ್ಲದಂತಾಗಿದೆ.

ಈ ಪ್ರದೇಶ ವಾಸಿಸಲು ಯೋಗ್ಯವಾಗಿಲ್ಲ ಅಂತ ತಜ್ಞರು ವರದಿ ನೀಡಿದ್ದಾರೆ. ಆದರೂ ಇಲ್ಲಿನ ನಿವಾಸಿಗಳಿಗೆ ಸರ್ಕಾರ ಮನೆ ನೀಡಿಲ್ಲ. ಹಾಗಾಗಿ ಆ ಮನೆಗಳಲ್ಲೇ ಏಳು ಕುಟುಂಬಗಳು ವಾಸವಿದೆ. ಮಳೆ ಬಂದಾಗ ಮನೆಯ ಪಕ್ಕದಲ್ಲೇ ಬೆಟ್ಟಗಳು ಜರೆಯುತ್ತಿವೆ. ಈ ಮಳೆಗಾಲದಲ್ಲೂ ಎರಡು ಮನೆಗಳ ಮೇಲೆ ಗುಡ್ಡ ಕುಸಿದಿದೆ. ಇಲ್ಲಿ ವಾಸಿಸುವರು ಪ್ರತಿ ವರ್ಷ ಜೀವ ಭಯದಲ್ಲೇ ಇರುತ್ತಾರೆ.

ಮಳೆಗಾಲದಲ್ಲಿ ಗ್ರಾಮಗಳಲ್ಲಿ ಇರಲಾಗದೆ, ಹೊರಗೂ ಹೋಗಲಾಗದೆ ಪರಿಸ್ಥಿತಿ ಹದಗೆಟ್ಟಿದೆ. ಕೇವಲ ಮೂರು ತಿಂಗಳಿಗಾಗಿ ಯಾರೂ ಬಾಡಿಗೆ ಮನೆ ಕೊಡುವುದಿಲ್ಲ. ಕಾಳಜಿ ಕೇಂದ್ರಕ್ಕೆ ಹೋಗಲು ಕೊರೊನಾ ಭಯವಿದೆ. ಮನೆ ಖಾಲಿ ಮಾಡಿ ಅಂತ ಜಿಲ್ಲಾಡಳಿತ ತಿಳಿಸಿದೆ. ಕಳೆದ ಮೂರು ವರ್ಷಗಳಿಂದ ಪರ್ಯಾಯ ಸೂರಿಗಾಗಿ ಅಲೆದಾಟ ನಡೆಸುತ್ತಿದ್ದೇವೆ. ಸಂತ್ರಸ್ತರು ಕಣ್ಣೀರಿಟ್ಟು ಗೋಳಾಡಿದ್ರೂ ಅಧಿಕಾರಿಗಳ ಮನಸ್ಸು ಕರಗುತ್ತಿಲ್ಲ ಅಂತ ಅಧಿಕಾರಿಗಳ ವಿರುದ್ಧ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಸಿಡಿದೆದ್ದಿದ್ದಾರೆ.

ಇನ್ಫೋಸಿಸ್ನವರು ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ. 250 ಮನೆಗಳನ್ನು ಅವರು ಕೊಡುವವರೆಗೆ ಕಾಯಲೇಬೇಕು ಅಂತ ಟಿವಿ9ಗೆ ಮಡಿಕೇರಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ಮಳೆಗಾಲ ಬಂದಾಗ ಮಾತ್ರ ಸಮಸ್ಯೆ ಆಗುತ್ತಿರುವುದು. ಮಳೆಗಾಲ ಬಂದಾಗ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡುತ್ತಿದ್ದೇವೆ. ಮನೆಗಳ ಬಗ್ಗೆ ಉಸ್ತುವಾರಿ ಸಚಿವರ ಬಳಿಯೂ ಹೇಳಿದ್ದೇನೆ ಎಂದು ಅಪ್ಪಚ್ಚು ರಂಜನ್ ಹೇಳಿದರು.

ಇದನ್ನೂ ಓದಿ

ದೇಗುಲಗಳಲ್ಲಿ ಹೆಚ್ಚಿನ ಜನ ಸೇರ್ತಿದ್ದಾರೆ, ನೀವೇನು ಮಾಡುತ್ತಿದ್ದೀರಿ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಮಹಾಂತೇಶ ಬೀಳಗಿ

ಹಿರಣ್ಯಕೇಶಿ ನದಿ ಪ್ರವಾಹದಲ್ಲಿ ಪುಸ್ತಕ, ಆಟ ಸಾಮಾಗ್ರಿಗಳು ಕೊಚ್ಚಿ ಹೋಗಿವೆ; ಟಿವಿ9 ಕ್ಯಾಮೆರಾ ಮುಂದೆ ಬಿಕ್ಕಿ ಬಿಕ್ಕಿ ಅತ್ತ 8 ವರ್ಷದ ಬಾಲಕಿ

(Landslide victims are struggling during the rainy season from 2018 at Madikeri)

2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್