AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರಂಗಿ ಜಲಕ್ರೀಡಾ ಕೇಂದ್ರದಲ್ಲಿ ದುರಂತ: ಬೋಟ್ ಪಲ್ಟಿಯಾಗಿ ದಂಪತಿ ಸಾವು; ಇಬ್ಬರು ಮಕ್ಕಳ ರಕ್ಷಣೆ

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲ ಕ್ರೀಡಾ ಕೇಂದ್ರದಲ್ಲಿ ಬೋಟ್ ದುರಂತ ಸಂಭವಿಸಿದೆ. ಪ್ರವಾಸಕ್ಕೆ ಬಂದಿದ್ದ ಗುಜರಾತ್ ಮೂಲದ ದಂಪತಿ ಬೋಟ್ ಪಲ್ಟಿಯಾಗಿ ಸಾವನ್ನಪ್ಪಿದ್ದು, ಅವರ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಹಾರಂಗಿ ಜಲಕ್ರೀಡಾ ಕೇಂದ್ರದಲ್ಲಿ ದುರಂತ: ಬೋಟ್ ಪಲ್ಟಿಯಾಗಿ ದಂಪತಿ ಸಾವು; ಇಬ್ಬರು ಮಕ್ಕಳ ರಕ್ಷಣೆ
ಬೋಟ್ ಪಲ್ಟಿ
ಗೋಪಾಲ್​ ಸೋಮಯ್ಯ
| Edited By: |

Updated on: Nov 13, 2026 | 8:51 PM

Share

ಮುಖ್ಯಾಂಶಗಳು

  • ಬೋಟ್ ಪಲ್ಟಿಯಾಗಿ ಪ್ರವಾಸಿ ದಂಪತಿ ಸಾವು
  • ಹಾರಂಗಿ ಜಲಕ್ರೀಡಾ ಕೇಂದ್ರದಲ್ಲಿ ದುರಂತ
  • ಕೊಡಗು ಪ್ರವಾಸಕ್ಕೆ ಬಂದಿದ್ದ ಗುಜರಾತ್ ಮೂಲದ ಕುಟುಂಬ

ಕೊಡಗು, ನವೆಂಬರ್​ 13: ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಕ್ರೀಡಾ ಕೇಂದ್ರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಹಾರಂಗಿ ಹಿನ್ನೀರಿನಲ್ಲಿ ಪ್ರವಾಸಿಗರಿದ್ದ ಬೋಟ್ ಪಲ್ಟಿಯಾಗಿ ಗುಜರಾತ್ ಮೂಲದ ದಂಪತಿ ಮೃತಪಟ್ಟಿದ್ದಾರೆ. ಪ್ರವಾಸಕ್ಕೆ ಬಂದಿದ್ದ ಕುಟುಂಬ ಹಿನ್ನೀರಿನಲ್ಲಿ ಬೋಟ್‌ನಲ್ಲಿ ವಿಹಾರ ಮಾಡುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು? 

ಗುಜರಾತ್​ ಮೂಲದ ದಂಪತಿ ಸೇರಿದಂತೆ ಇಬ್ಬರು ಮಕ್ಕಳು ಪ್ರವಾಸಕ್ಕೆ ಬಂದಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಹಿನ್ನೀರಿನಲ್ಲಿ ಬೋಟ್ ವೇಗವಾಗಿ ತಿರುವು ಪಡೆಯುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಮಗುಚಿದೆ. ಬೋಟ್‌ನಲ್ಲಿದ್ದ ನಾಲ್ವರು ಪ್ರವಾಸಿಗರು ಲೈಫ್ ಜಾಕೆಟ್ ಧರಿಸಿದ್ದರು. ಆದರೂ ದಂಪತಿ ಬೋಟ್‌ನ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಮೃತರ ಹೆಸರು, ಗುರುತು ಪತ್ತೆ ಆಗಿಲ್ಲ.

ಇಬ್ಬರು ಮಕ್ಕಳ ರಕ್ಷಣೆ

ಇನ್ನು ಬೋಟ್ ಪಲ್ಟಿಯಾದ ಬಳಿಕ ನೀರಿನಲ್ಲಿ ತೇಲುತ್ತಿದ್ದ ದಂಪತಿಯ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

LIVE TV

ಪರೀಕ್ಷೆಯಲ್ಲಿ ಫೇಲ್​ ಆಗುವ ಆತಂಕ: ವಿದ್ಯಾರ್ಥಿ ಆತ್ಮಹತ್ಯೆ

ಪರೀಕ್ಷೆಯಲ್ಲಿ ಫೇಲ್​ ಆಗುವ ಆತಂಕ ಹಿನ್ನೆಲೆ ಬಿಎಸ್​ಸಿ ನರ್ಸಿಗ್ ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಹೊರವಲಯದ ನಿರ್ಜನ ಪ್ರದೇಶದಲ್ಲಿ ನಡೆದಿದೆ. ರಕ್ಷಿತ್(19) ಆತ್ಮಹತ್ಯೆಗೆ ಶರಣಾಗಿರುವ ಬಿಎಸ್​ಸಿ ನರ್ಸಿಗ್ ವಿದ್ಯಾರ್ಥಿ.

ಇದನ್ನೂ ಓದಿ: ಸೂಟ್‌ಕೇಸ್ ಒಳಗೆ 8 ತಿಂಗಳ ಕಂದಮ್ಮ! ತಾಯಿಯ ಕೃತ್ಯಕ್ಕೆ ಬೆಚ್ಚಿಬಿದ್ದ ಕೊಡಗು

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ತರುವೆ ನಿವಾಸಿ ರಕ್ಷಿತ್, ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ B.Sc ನರ್ಸಿಗ್ ಓದುತ್ತಿದ್ದ. ನವೆಂಬರ್ 7ರಂದು ಬಾಲಕರ ನಿಲಯದಿಂದ ನಾಪತ್ತೆಯಾಗಿದ್ದ. ಈ ಕುರಿತಾಗಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು‌. ಇದೀಗ ಜಿಲ್ಲಾ ಪಂಚಾಯತ್ ಸಮೀಪದ ನಿರ್ಜನ ಪ್ರದೇಶದಲ್ಲಿ ರಕ್ಷಿತ್​ ಶವ ಪತ್ತೆ ಆಗಿದೆ. ಸ್ನೇಹಿತರ ಬಳಿ ಪರೀಕ್ಷೆಯಲ್ಲಿ ಫೇಲಾಗುತ್ತೇನೆ ಎಂದು ರಕ್ಷಿತ್ ಹೇಳಿದ್ದ. ಸದ್ಯ ಸ್ಥಳಕ್ಕೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಗೋಪಾಲ್​ ಸೋಮಯ್ಯ
ಗೋಪಾಲ್​ ಸೋಮಯ್ಯ
ಬಿಗ್ ಬಾಸ್ ಕನ್ನಡ: ಸ್ವಾಭಿಮಾನ ಬಿಟ್ಟು ನಾನು ಆಟ ಆಡಲ್ಲ; ಶಪಥ ಮಾಡಿದ ಗಾನವಿ
ಬಿಗ್ ಬಾಸ್ ಕನ್ನಡ: ಸ್ವಾಭಿಮಾನ ಬಿಟ್ಟು ನಾನು ಆಟ ಆಡಲ್ಲ; ಶಪಥ ಮಾಡಿದ ಗಾನವಿ
ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅನುಮತಿ ಕೋರಿದ ಸಿಎಂ ಡಿಕೆಶಿ
ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅನುಮತಿ ಕೋರಿದ ಸಿಎಂ ಡಿಕೆಶಿ
ವಿಶ್ವದ ಮೊದಲ 'ಟಿಲ್ಟೆಡ್ ಎಲ್‌ಇಡಿ ತಾರಾಲಯ' ಉದ್ಘಾಟಿಸಿದ ಪ್ರಧಾನಿ
ವಿಶ್ವದ ಮೊದಲ 'ಟಿಲ್ಟೆಡ್ ಎಲ್‌ಇಡಿ ತಾರಾಲಯ' ಉದ್ಘಾಟಿಸಿದ ಪ್ರಧಾನಿ
ವಿಶ್ವದ ಮೊದಲ ಟಿಲ್ಟೆಡ್ ಎಲ್​ಇಡಿ ತಾರಾಲಯ 'ಕಾಸ್ಮೋಸ್' ಉದ್ಘಾಟಿಸಿದ ಮೋದಿ
ವಿಶ್ವದ ಮೊದಲ ಟಿಲ್ಟೆಡ್ ಎಲ್​ಇಡಿ ತಾರಾಲಯ 'ಕಾಸ್ಮೋಸ್' ಉದ್ಘಾಟಿಸಿದ ಮೋದಿ
ಪ್ರಧಾನಿ ಮೋದಿ ಎದುರು ಸಾಲು ಸಾಲು ಬೇಡಿಕೆಯಿಟ್ಟ ಸಿಎಂ ಡಿ.ಕೆ. ಶಿವಕುಮಾರ್
ಪ್ರಧಾನಿ ಮೋದಿ ಎದುರು ಸಾಲು ಸಾಲು ಬೇಡಿಕೆಯಿಟ್ಟ ಸಿಎಂ ಡಿ.ಕೆ. ಶಿವಕುಮಾರ್
ಹೆಚ್​ಡಿ ದೇವೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಹೆಚ್​​ಡಿ ಕುಮಾರಸ್ವಾಮಿ
ಹೆಚ್​ಡಿ ದೇವೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಹೆಚ್​​ಡಿ ಕುಮಾರಸ್ವಾಮಿ
ಡಿಕೆ ಶಿವಕುಮಾರ್ ಕೈ ಹಿಡಿದು ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಿದ ಮೋದಿ
ಡಿಕೆ ಶಿವಕುಮಾರ್ ಕೈ ಹಿಡಿದು ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಿದ ಮೋದಿ
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್​​ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್
ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್​​ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್