ಕೊಡವರಿಗೆ ಬಂದೂಕು ಲೈಸೆನ್ಸ್ ವಿನಾಯಿತಿ ನ್ಯಾಯಬದ್ಧವಾಗಿದೆ: ಹೈಕೋರ್ಟ್ ವಿಭಾಗೀಯ ಪೀಠ
ಕೊಡವರಿಗೆ ಬಂದೂಕು ಲೈಸೆನ್ಸ್ ವಿನಾಯಿತಿ ನ್ಯಾಯಬದ್ಧವಾಗಿದೆ: ಹೈಕೋರ್ಟ್ ವಿಭಾಗೀಯ ಪೀಠ
ಬೆಂಗಳೂರು: ಕೊಡವರಿಗೆ ಬಂದೂಕು ಲೈಸೆನ್ಸ್ನಿಂದ ವಿನಾಯಿತಿ ನೀಡಿರುವುದನ್ನ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿತ್ತು. ನಿವೃತ್ತ ಕ್ಯಾ. ವೈ.ಕೆ. ಚೇತನ್ ಪಿಐಎಲ್ ಸಲ್ಲಿಸಿದ್ದರು. ಅದನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾ ಗೊಳಿಸಿದ್ದು, ಕೊಡವರಿಗೆ ನೀಡಿರುವ ವಿನಾಯಿತಿ ನ್ಯಾಯಬದ್ಧವಾಗಿದೆ ಎಂದು ಆದೇಶ ನೀಡಿದೆ.
ಕೊಡವರಿಗೆ ಸ್ವಾತಂತ್ರ್ಯ ಪೂರ್ವದಿಂದಲೇ ಈ ರೀತಿ ರಿಯಾಯಿತಿ ಇದೆ. ಕೊಡವರು, ಜಮ್ಮಾ ಭೂಮಿ ಹೊಂದಿದವರಿಗೆ ಈ ರಿಯಾಯಿತಿ ಕಲ್ಪಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯಲ್ಲೇ ಬಂದೂಕು ಪರವಾನಗಿ ವಿನಾಯ್ತಿ ಇದೆ. ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲಿ ಮಧ್ಯ ಪ್ರವೇಶದ ಅಗತ್ಯವಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಪಿಐಎಲ್ ವಜಾ ಮಾಡುವಂತೆ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ, ಸಜನ್ ಪೂವಯ್ಯ, ಧ್ಯಾನ್ ಚಿನ್ನಪ್ಪ ಮತ್ತು ಎಂ.ಟಿ. ನಾಣಯ್ಯ ವಾದ ಮಂಡನೆ ಮಾಡಿದ್ದರು.
ಇದನ್ನೂ ಓದಿ: ಹಲಸಿನ ಹಣ್ಣಿನ ಇಡ್ಲಿ: ಕೊಡವರ ಸಾಂಪ್ರದಾಯಿಕ ತಿಂಡಿಯನ್ನು ಮಾಡಿ ಸವಿಯಿರಿ
ಇದನ್ನೂ ಓದಿ: ಕೊಡವರಿಗೆ ಬಂದೂಕು ಲೈಸೆನ್ಸ್ನಿಂದ ವಿನಾಯಿತಿ; ಹೈಕೋರ್ಟ್ನಲ್ಲಿ ನಡೆದ ವಿಚಾರಣೆಯ ವಿವರ ಇಲ್ಲಿದೆ
(license to use guns for kodavas is legal says high court divisional bench)
Published On - 11:21 am, Wed, 22 September 21