ಪ್ರವಾಸಿಗರಿಗೆ ಆರ್​ಟಿಪಿಸಿಆರ್​ ವರದಿ ಕಡ್ಡಾಯವಿಲ್ಲ; ಹೊಸ ಆದೇಶ ಹೊರಡಿಸಿದ ಕೊಡಗು ಡಿಸಿ ಚಾರುಲತಾ

ಪ್ರವಾಸಿಗರಿಗೆ ಆರ್​ಟಿಪಿಸಿಆರ್​ ವರದಿ ಕಡ್ಡಾಯವಿಲ್ಲ; ಹೊಸ ಆದೇಶ ಹೊರಡಿಸಿದ ಕೊಡಗು ಡಿಸಿ ಚಾರುಲತಾ
ಸಂಗ್ರಹ ಚಿತ್ರ

ಪ್ರವಾಸ ಮಾಡಲಾಗದೆ ನಿರಾಶೆಯಿಂದ ಹಿಂದಿರುಗಿದ್ದ ಪ್ರವಾಸಿಗರಿಗೆ ಈಗ ಮತ್ತೆ ಕೊಡಗು ಜಿಲ್ಲಾಧಿಕಾರಿ ಶುಭ ಸುದ್ದಿ ನೀಡಿದ್ದಾರೆ. ಎರಡು ದಿನಗಳ ಬಳಿಕ ಆದೇಶ ಹಿಂಪಡೆದ ಡಿಸಿ ಚಾರುಲತಾ, ಎರಡು ವ್ಯಾಕ್ಸಿನ್ ಆಗಿದ್ದರೆ ಕೊಡಗು ಪ್ರವೇಶಕ್ಕೆ ಮುಕ್ತ ಅವಕಾಶ ಇದೆ ಎಂದು ತಿಳಿಸಿದ್ದಾರೆ.

TV9kannada Web Team

| Edited By: preethi shettigar

Aug 06, 2021 | 10:35 AM

ಕೊಡಗು: ಕೊರೊನಾ ಮೂರನೇ ಅಲೆಯ ಆತಂಕ ಇಡೀ ದೇಶವನ್ನೇ ಕಾಡುತ್ತಿರುವ ಈ ಕಾಲಘಟ್ಟದಲ್ಲಿ ಜನರು ಹೆಚ್ಚು ಜಾಗ್ರತೆ ವಹಿಸುವುದು ಅಗತ್ಯ. ಅದರಲ್ಲೂ ಕೊರೊನಾ ಎರಡನೇ ಅಲೆಯ ಲಾಕ್​ಡೌನ್​ ಮುಗಿದ ನಂತರದಲ್ಲಿ ಜನರು ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಮೂರನೇ ಅಲೆಯ ತೀವ್ರತೆಯ ಬಗ್ಗೆ ಎಚ್ಚರಿಸುವ ಪ್ರಯತ್ನ ನಡೆಯುತ್ತಿದೆ. ಹೀಗಿರುವಾಗಲೇ ಕೊಡಗು ಡಿಸಿ ಚಾರುಲತಾ ಹೊಸ ಆದೇಶ ಹೊರಡಿಸಿದ್ದಾರೆ.

ಈ ಮೊದಲು RTPCR ವರದಿ ಕಡ್ಡಾಯಗೊಳಿಸಿದ್ದ ಕೊಡಗು ಡಿಸಿ ಚಾರುಲತಾ ನೆಗೆಟಿವ್ ವರದಿ ಇದ್ದರೆ ಮಾತ್ರ ಕೊಡಗು ಜಿಲ್ಲೆಗೆ ಬರಲು ಪ್ರವಾಸಿಗರಿಗೆ ಅವಕಾಶ ಎಂದು ಸೂಚಿಸಿದ್ದರು. ಅಲ್ಲದೇ ಕೊವಿಡ್ ನೆಗೆಟಿವ್ ವರದಿ ಇಲ್ಲವಾದಲ್ಲಿ ವಾಸ್ತವ್ಯಕ್ಕೂ ಅವಕಾಶ ಇರಲಿಲ್ಲ. ಹೀಗಾಗಿ ಪ್ರವಾಸಿಗರು ಇನ್ನಿಲ್ಲದಂತೆ ಪರದಾಡಿದ್ದರು.

ಪ್ರವಾಸ ಮಾಡಲಾಗದೆ ನಿರಾಶೆಯಿಂದ ಹಿಂದಿರುಗಿದ್ದ ಪ್ರವಾಸಿಗರಿಗೆ ಈಗ ಮತ್ತೆ ಕೊಡಗು ಜಿಲ್ಲಾಧಿಕಾರಿ ಶುಭ ಸುದ್ದಿ ನೀಡಿದ್ದಾರೆ. ಎರಡು ದಿನಗಳ ಬಳಿಕ ಆದೇಶ ಹಿಂಪಡೆದ ಡಿಸಿ ಚಾರುಲತಾ, ಎರಡು ವ್ಯಾಕ್ಸಿನ್ ಆಗಿದ್ದರೆ ಕೊಡಗು ಪ್ರವೇಶಕ್ಕೆ ಮುಕ್ತ ಅವಕಾಶ ಇದೆ ಎಂದು ತಿಳಿಸಿದ್ದಾರೆ.

Madikeri Elephant

ಸಂಗ್ರಹ ಚಿತ್ರ

ಲಾಕ್​ಡೌನ್ ಸಮಯದಲ್ಲಿನ ಕಟ್ಟೆಚ್ಚರ ಲಾಕ್​ಡೌನ್​ ಹಿನ್ನೆಲೆ ಕೊಡಗು ಜಿಲ್ಲೆಯೊಳಕ್ಕೆ ಯಾವುದೇ ಪ್ರವಾಸಿಗರು ಬರುವಂತಿಲ್ಲ ಎಂದು ಈ ಹಿಂದೆ ಕಟ್ಟೆಚ್ಚರ ವಹಿಸಲಾಗಿತ್ತು ಕೊಡಗು ಜಿಲ್ಲೆಯಲ್ಲಿ ಕೊರೊನಾ ಲಾಕ್​ಡೌನ್​ ಜಾರಿ ಇರುವ ಹಿನ್ನೆಲೆ ಜುಲೈ 5ರವರೆಗೂ ಪ್ರವಾಸಿಗರು ಜಿಲ್ಲೆಗೆ ಆಗಮಿಸದಂತೆ ಕಟ್ಟೆಚ್ಚರ ವಹಿಸಲಾಗುವುದು. ಯಾವುದೇ ಪ್ರವಾಸಿಗರು ಜಿಲ್ಲೆಯೊಳಕ್ಕೆ ಬರುವಂತಿಲ್ಲ ಎಂದು ಕೊಡಗು ಉಪ ವಿಭಾಗಾಧಿಕಾರಿ‌ ಈಶ್ವರ್ ಖಂಡೂ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಜಾರಿಗೆ ತಂದಿರುವ ಲಾಕ್​ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಹೋಮ್​ ಸ್ಟೇ, ರೆಸಾರ್ಟ್ ಮಾಲೀಕರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಜುಲೈ 5 ರವರೆಗೆ ಎಲ್ಲಾ ಹೋಂ ಸ್ಟೇ ರೆಸಾರ್ಟ್ ಮೇಲೆ ನಿಗಾ ವಹಿಸಲಾಗುವುದು. ಚೆಕ್ ಪೋಸ್ಟ್ ನಲ್ಲೂ ಕೂಡ ಕೂಲಂಕಷ ತಪಾಸಣೆ ನಡೆಯಲಿದೆ. ಈವರೆಗೆ ಮೂರು ಹೋಮ್​ ಸ್ಟೇ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಾಧ್ಯಮಗಳಿಗೆ ಈಶ್ವರ್ ಕುಮಾರ್​ ಖಂಡೂ (Assistant Commissioner Eshwar Kumar Khandu ) ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

ಕೊಡಗು: ಆಟಿ ಸೊಪ್ಪಿನ ಪಾಯಸದ ರುಚಿ ಸವಿಯುವುದರ ಹಿಂದಿದೆ ಒಂದು ವಿಶೇಷ ನಂಬಿಕೆ!

ಮಳೆಗಾಲ ಆರಂಭಕ್ಕೂ ಮುನ್ನವೇ ಅಪಾಯಕಾರಿ ಸ್ಥಳಗಳ ಗುರುತಿಸುವ ಪ್ರಕ್ರಿಯೆ ನಡೆದಿದೆ: ಡಿಸಿ ಚಾರುಲತಾ ಸೋಮಲ್

Follow us on

Related Stories

Most Read Stories

Click on your DTH Provider to Add TV9 Kannada