ತಲಕಾವೇರಿ ಸನ್ನಿಧಿಯಲ್ಲಿ ಯುವತಿಯರ ಡಾನ್ಸ್; ವಿವಾದ ಸೃಷ್ಟಿಸಿದ ವಿಡಿಯೋ ಇಲ್ಲಿದೆ

| Updated By: sandhya thejappa

Updated on: Dec 01, 2021 | 1:28 PM

ವಿಶೇಷವಾಗಿ ಕೊಡಗಿನ ಸಂಪ್ರದಾಯವಾದಿಗಳು ದೇವಸ್ಥಾನದ ಆವರಣದಲ್ಲಿ ಈ ರೀತಿ ನೃತ್ಯ ಮಾಡಿರುವುದು ಖಂಡನೀಯ ಅಂತ ಟೀಕಿಸಿದ್ದಾರೆ. ಪ್ರವಾಸಿಗರಿಂದ ಧಾರ್ಮಿಕ ಸ್ಥಳದ ಪಾವಿತ್ರ್ಯತೆಗೆ ಧಕ್ಕೆ ಬರುತ್ತಿದೆ ಅಂತ ಕುಟುಕಿದ್ದಾರೆ.

ತಲಕಾವೇರಿ ಸನ್ನಿಧಿಯಲ್ಲಿ ಯುವತಿಯರ ಡಾನ್ಸ್; ವಿವಾದ ಸೃಷ್ಟಿಸಿದ ವಿಡಿಯೋ ಇಲ್ಲಿದೆ
ಯುವತಿಯರು ಡ್ಯಾನ್ಸ್ ಮಾಡಿದ ವಿಡಿಯೋ ವಿವಾದಕ್ಕೆ ಕಾರಣವಾಗಿದೆ
Follow us on

ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ ಕೊಡಗಿನ ತಲಕಾವೇರಿಯಲ್ಲಿ ಮೂವರು ಯುವತಿಯರು ಡಾನ್ಸ್ ಮಾಡಿರುವ ದೃಷ್ಯವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಸೃಷ್ಟಿಸಿದೆ. ಮೂವರು ಯುವತಿಯರು ತಲಕಾವೇರಿಯ ಮುಖ್ಯ ದ್ವಾರದ ಬಳಿ ಮಂಜು ಮುಸುಕಿದ ವಾತಾವರಣದಲ್ಲಿ ಕೆಲ ಸೆಕೆಂಡ್​ಗಳ ಕಾಲ ಡಾನ್ಸ್ ಮಾಡಿದ್ದಾರೆ. ನೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಆದರೆ ಈ ಡಾನ್ಸ್​ಗೆ ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ವಿಶೇಷವಾಗಿ ಕೊಡಗಿನ ಸಂಪ್ರದಾಯವಾದಿಗಳು ದೇವಸ್ಥಾನದ ಆವರಣದಲ್ಲಿ ಈ ರೀತಿ ನೃತ್ಯ ಮಾಡಿರುವುದು ಖಂಡನೀಯ ಅಂತ ಟೀಕಿಸಿದ್ದಾರೆ. ಪ್ರವಾಸಿಗರಿಂದ ಧಾರ್ಮಿಕ ಸ್ಥಳದ ಪಾವಿತ್ರ್ಯತೆಗೆ ಧಕ್ಕೆ ಬರುತ್ತಿದೆ ಅಂತ ಕುಟುಕಿದ್ದಾರೆ. ಯಾವಾಗ ತಮ್ಮ ಡಾನ್ಸ್ ವಿಡಿಯೋ ಟೀಕೆಗೆ ಗುರಿಯಾಯಿತೋ ಯುವತಿಯರು ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಡಿಲೀಟ್ ಮಾಡಿದ್ದಾರೆ. ಜೊತೆಗೆ ಮೂವರು ಪ್ರತ್ಯೇಕವಾಗಿ ಕ್ಷಮೆಯಾಚಿಸಿದ್ದಾರೆ.

ನಾವು ದೇವಾಲಯದ ಮುಂದೆ ನೃತ್ಯ ಮಾಡಿದಕ್ಕೆ ಕೊಡವ ಜನರಿಗೆ ನೋವಾಗಿದೆ. ಕೊಡಗಿನ ಮಂದಿಯ ಭಾವನೆಗೆ ಧಕ್ಕೆ ತರುವ ಉದ್ದೇಶ ತಮ್ಮದಾಗಿರಲಿಲ್ಲ. ನಿಮ್ಮ ಮನೆ ಮಕ್ಕಳು ಅಂಥ ಅಂದುಕೊಂಡು ದಯವಿಟ್ಟು ಕ್ಷಮಿಸಿ ಅಂತ ಕೈ ಮುಗಿದು ಕೇಳಿಕೊಂಡಿದ್ದಾರೆ.

ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಅಂತ ಭರವಸೆ ನೀಡಿದ್ದಾರೆ. ಯುವ ಜನತೆ ಇತ್ತೀಚೆಗೆ ಇನ್​​ಸ್ಟಾಗ್ರಾಮ್​ನಲ್ಲಿ ರೀಲ್ಸ್ ಮಾಡುತ್ತಿದ್ದಾರೆ. ಕೆಲವೊಂದು ವಿಡಿಯೋ ಟ್ರೆಂಡ್ ಸೃಷ್ಟಿಸುತ್ತಿರುತ್ತದೆ. ಆದರೆ ಈ ವಿಡಿಯೋ ಸದ್ಯ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ

ಪ್ಲಾಸ್ಟಿಕ್ ಬಾಟಲ್​ನಲ್ಲಿ ನೀರು ಕುಡಿಯುವ ಅಭ್ಯಾಸ ಇದೆಯೇ; ಅಡ್ಡಪರಿಣಾಮಗಳ ಬಗ್ಗೆ ಇರಲಿ ಎಚ್ಚರ

ಕಾವೇರಿದ ಪರಿಷತ್ ಚುನಾವಣೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಶಾಸಕರ ಮಧ್ಯೆ ಗಲಾಟೆ

Published On - 1:25 pm, Wed, 1 December 21