ಕಾವೇರಿದ ಪರಿಷತ್ ಚುನಾವಣೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಶಾಸಕರ ಮಧ್ಯೆ ಗಲಾಟೆ
ಹುಬ್ಬಳ್ಳಿ: ಇದೇ ತಿಂಗಳು ರಾಜ್ಯ ಮೇಲ್ಮನೆಗೆ ದ್ವೈವಾರ್ಷಿಕ ಚುನಾವಣೆಗಳು ನಡೆಯುತ್ತಿವೆ. ಈ ಮಧ್ಯೆ, ವಿಧಾನ ಪರಿಷತ್ ಚುನಾವಣೆ ಸಂಬಂಧ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಶಾಸಕರ ಮಧ್ಯೆ ಗಲಾಟೆಗಳು ನಡೆದಿವೆ. ಚುನಾವಣಾ ಉಸ್ತುವಾರಿ ಹಂಚಿಕೆ ಸಂಬಂಧ ಬಿಜೆಪಿ ಶಾಸಕ ಮತ್ತು ಪರಿಷತ್ ಸದಸ್ಯನ ಮಧ್ಯೆ ಗಲಾಟೆ ನಡೆದಿದೆ. ರಾಣೆಬೆನ್ನೂರು ಬಿಜೆಪಿ ಶಾಸಕ ಅರುಣ್ ಕುಮಾರ್ ಮತ್ತು ಪರಿಷತ್‌ನ ಬಿಜೆಪಿ ಸದಸ್ಯ ಆರ್ ಶಂಕರ್ ಮಧ್ಯೆ ಈ ಗಲಾಟೆ ನಡೆದಿದೆ. ಅದೂ ಮಾಜಿ ಸಿಎಂ ಜಗದೀಶ್ […]
ಹುಬ್ಬಳ್ಳಿ: ಇದೇ ತಿಂಗಳು ರಾಜ್ಯ ಮೇಲ್ಮನೆಗೆ ದ್ವೈವಾರ್ಷಿಕ ಚುನಾವಣೆಗಳು ನಡೆಯುತ್ತಿವೆ. ಈ ಮಧ್ಯೆ, ವಿಧಾನ ಪರಿಷತ್ ಚುನಾವಣೆ ಸಂಬಂಧ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಶಾಸಕರ ಮಧ್ಯೆ ಗಲಾಟೆಗಳು ನಡೆದಿವೆ. ಚುನಾವಣಾ ಉಸ್ತುವಾರಿ ಹಂಚಿಕೆ ಸಂಬಂಧ ಬಿಜೆಪಿ ಶಾಸಕ ಮತ್ತು ಪರಿಷತ್ ಸದಸ್ಯನ ಮಧ್ಯೆ ಗಲಾಟೆ ನಡೆದಿದೆ. ರಾಣೆಬೆನ್ನೂರು ಬಿಜೆಪಿ ಶಾಸಕ ಅರುಣ್ ಕುಮಾರ್ ಮತ್ತು ಪರಿಷತ್‌ನ ಬಿಜೆಪಿ ಸದಸ್ಯ ಆರ್ ಶಂಕರ್ ಮಧ್ಯೆ ಈ ಗಲಾಟೆ ನಡೆದಿದೆ. ಅದೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಗಲಾಟೆಗಳು ನಡೆದಿವೆ.
ತಾರಕಕ್ಕೇರಿದ ಉಭಯ ಶಾಸಕರ ಗಲಾಟೆ: ಆರ್ ಶಂಕರ್ ವಿರುದ್ದ ಅರುಣ್ ಕುಮಾರ್ ಗರಂ ಆಗಿದ್ದಾರೆ. ಉಭಯ ಶಾಸಕರ ಮಧ್ಯೆ ಗಲಾಟೆ ತಾರಕಕ್ಕೇರಿದೆ. ಶಾಸಕ ಅರುಣ ಕುಮಾರ ಅವರನ್ನ ಹಾವೇರಿ ಜಿಲ್ಲಾ ಬಿಜೆಪಿ ಮುಖಂಡರು ಸಮಾಧಾನ ಪಡಿಸಿದ್ದಾರೆ. ಗಲಾಟೆಯಾಗುತ್ತಿದ್ದಂತೆ ಆರ್ ಶಂಕರ್ ಸಭೆಯಿಂದ ಹೊರನಡೆದಿದ್ದಾರೆ. ಆಗ ಶಂಕರ್ ಅವರನ್ನ ಬಿಜೆಪಿ ಮುಖಂಡರು ವಾಪಸ್ ಕರೆದುಕೊಂಡು ಬಂದಿದ್ದಾರೆ.
ಗಲಾಟೆ ಏನು ಆಗಿಲ್ಲ, ಅವರು ಏನೋ ಅಂದ್ರು. ಉಸ್ತುವಾರಿ ಸಂಬಂಧ ಶುರುವಾಗಿದ್ದ ಗಲಾಟೆ ಅದು ಎಂದು ಟಿವಿ 9 ಗೆ ಜೊತೆ ಮಾತನಾಡುತ್ತಾ ಗಲಾಟೆ ಆಗಿದ್ದನ್ನ ಆರ್ ಶಂಕರ್ ಒಪ್ಪಿಕೊಂಡಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ಗೆ ದ್ವೈವಾರ್ಷಿಕ ಚುನಾವಣೆ ದಿನಾಂಕ, ಡಿಸೆಂಬರ್ನಲ್ಲಿ 25 ಸ್ಥಾನಗಳಿಗೆ ಮತದಾನ ಕರ್ನಾಟಕ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಿಗದಿಯಾಗಿದ್ದು, ಚುನಾವಣಾ ದಿನಾಂಕ ಪ್ರಕಟಿಸಲಾಗಿದೆ. ಡಿಸೆಂಬರ್ 10ರಂದು ರಾಜ್ಯ ಮೇಲ್ಮನೆಯ (Karnataka Legislative Council) 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ಚುನಾವಣಾ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಡಿಸೆಂಬರ್ 10 ಶುಕ್ರವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ರಂದು (ಮಂಗಳವಾರ) 25 ಸ್ಥಾನಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
Published On - 12:31 pm, Wed, 1 December 21