ಧಾರವಾಡ: ಎಸ್ಡಿಎಮ್ ವಿದ್ಯಾರ್ಥಿನಿಯಿಂದ ಸಹೋದರನಿಗೆ ಹರಡಿದ ಕೊರೊನಾ ಸೋಂಕು; ಶಾಲೆಗೆ ರಜೆ ಘೋಷಣೆ
ಸೋಂಕಿತ ವಿದ್ಯಾರ್ಥಿಯ ಕುಟುಂಬಸ್ಥರಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿತ್ತು. ಇದೀಗ ಕೊವಿಡ್ ಸೋಂಕು ದೃಢಪಟ್ಟಿರುವ ಹಿನ್ನೆಲೆ ಮನೆಯಲ್ಲಿಯೇ ಸೋಂಕಿತ ವಿದ್ಯಾರ್ಥಿಗೆ ಕ್ವಾರಂಟೈನ್ ಮಾಡಲಾಗಿದೆ.
ಧಾರವಾಡ: ಇಲ್ಲಿನ ಖಾಸಗಿ ಶಾಲೆ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎಸ್ಡಿಎಮ್ ಕಾಲೇಜಿನ ವಿದ್ಯಾರ್ಥಿನಿಯಿಂದ ಸೋಂಕು ಹರಡಿದೆ. ಈ ಮೊದಲು ಹುಬ್ಬಳ್ಳಿಯ ಎಸ್ಡಿಎಮ್ ಕಾಲೇಜಿನಲ್ಲಿ ಕೊರೊನಾ ಸೋಂಕು ಕಂಡುಬಂದಿತ್ತು. ಬಳಿಕ, ಇದೀಗ ವಿದ್ಯಾರ್ಥಿನಿಯಿಂದ ಸಹೋದರನಿಗೆ ಕೊರೊನಾ ಹರಡಿದೆ. ಎಸ್ಡಿಎಮ್ ಕಾಲೇಜಿನಿಂದ ಖಾಸಗಿ ಶಾಲೆಗೆ ಕೊವಿಡ್19 ಸೋಂಕು ಹರಡಿದಂತಾಗಿದೆ.
ಹುಬ್ಬಳ್ಳಿಯ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಓದುತ್ತಿರುವ ಬಗ್ಗೆ ತಿಳಿದುಬಂದಿದೆ. ಆದರ್ಶನಗರದ ಶಾಲೆಯಲ್ಲಿ ವಿದ್ಯಾರ್ಥಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವುದು ತಿಳಿದುಬಂದಿದೆ. ವಿದ್ಯಾರ್ಥಿಗೆ ಕೊರೊನಾ ಹಿನ್ನೆಲೆ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಡಿಸೆಂಬರ್ 4ರವರೆಗೆ ಆಡಳಿತ ಮಂಡಳಿ ಶಾಲೆಗೆ ರಜೆ ಘೋಷಿಸಿದೆ. ಸೋಂಕಿತ ವಿದ್ಯಾರ್ಥಿಯ ಕುಟುಂಬಸ್ಥರಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿತ್ತು. ಇದೀಗ ಕೊವಿಡ್ ಸೋಂಕು ದೃಢಪಟ್ಟಿರುವ ಹಿನ್ನೆಲೆ ಮನೆಯಲ್ಲಿಯೇ ಸೋಂಕಿತ ವಿದ್ಯಾರ್ಥಿಗೆ ಕ್ವಾರಂಟೈನ್ ಮಾಡಲಾಗಿದೆ.
ಧಾರವಾಡ: ಇದುವರೆಗೆ ಯಾರಲ್ಲೂ ಹೊಸತಳಿಯ ವೈರಾಣು ಕಂಡುಬಂದಿಲ್ಲ; ಜಿಲ್ಲಾಧಿಕಾರಿ ಮಾಹಿತಿ ಧಾರವಾಡ ಜಿಲ್ಲೆಯಲ್ಲಿ ಆತಂಕ ಹುಟ್ಟಿಸಿದ್ದ ಎಸ್ಡಿಎಂ ಕಾಲೇಜು ವಿದ್ಯಾರ್ಥಿಗಳ ಕೊರೊನಾ ಪಾಸಿಟಿವ್ ಪ್ರಕರಣದ ಕುರಿತು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಇಂದು (ಡಿಸೆಂಬರ್ 1) ಬೆಳಗ್ಗೆ ಮಾಹಿತಿ ನೀಡಿದ್ದರು. ಹೊಸ ತಳಿಯ ವೈರಾಣು ಕಂಡುಬಂದಿದೆಯೇ ಎಂದು ಪರೀಕ್ಷಿಸಲು ಇತ್ತೀಚೆಗೆ ಜಿನ್ಯೂಂ ಸಿಕ್ವೇನ್ಸ್ ಟೆಸ್ಟ್ ಮಾಡಲು ವಿದ್ಯಾರ್ಥಿಗಳ ಸ್ಯಾಂಪಲ್ ಕಳುಹಿಸಿಕೊಡಲಾಗಿತ್ತು. ಇದೀಗ ಅವುಗಳ ವರದಿ ಬಂದಿದೆ ಎಂದು ತಿಳಿಸಿದ್ದರು.
ಧಾರವಾಡದ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿಗಳ ಜಿನ್ಯೂಂ ಸಿಕ್ವೇನ್ಸ್ ಟೆಸ್ಟ್ ಮಾಡಲು ಸ್ಯಾಂಪಲ್ ಕಳುಹಿಸಿ ಕೊಡಲಾಗಿತ್ತು. ಟೆಸ್ಟ್ ವರದಿ ಕಳೆದ ರಾತ್ರಿ ಬಂದಿದ್ದು, 113 ಜನ ವಿದ್ಯಾರ್ಥಿಗಳ ವರದಿಯಲ್ಲಿ ಹೊಸ ತಳಿ ಕಂಡು ಬಂದಿಲ್ಲ. ಇಂದು 140 ಜನರ ವರದಿ ಬರಲಿದೆ ಎಂದು ಡಿಸಿ ನಿತೇಶ್ ಪಾಟೀಲ್ ಹೇಳಿದ್ದರು. ಈ ಮಾಹಿತಿ ಮೂಲಕ ಆತಂಕಗೊಂಡಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿತ್ತು.
ಹುಬ್ಬಳ್ಳಿಯಲ್ಲಿ ಲಸಿಕೆ ವಿತರಣೆ ಕುರಿತು ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಮನೆ ಮನೆಗೆ ಹೋಗಿ ಲಸಿಕೆ ವಿತರಣೆ ಮಾಡುತ್ತಿದ್ದೇವೆ. ಎರಡೂವರೆ ಲಕ್ಷ ಲಸಿಕೆ ನಮ್ಮ ಬಳಿ ಲಭ್ಯವಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ೪ ಜನರಿಗೆ ಪಾಸಿಟಿವ್ ಬಂದಿದೆ. ಧಾರವಾಡದಲ್ಲಿ ಹೊಸದಾಗಿ ಇಬ್ಬರಿಗೆ ಪಾಸಿಟಿವ್ ಬಂದಿದೆ ಎಂದು ಹೇಳಿದ್ದರು.
ಎಸ್ಡಿಎಂ ಕಾಲೇಜಿನ ಸುತ್ತಮುತ್ತ ನಿರ್ಬಂಧ ಹೇರಿದ್ದನ್ನು ನಾಳೆಯಿಂದ (ಡಿಸೆಂಬರ್ 2) ತೆರವು ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಇದೇ ವೇಳೆ ಮಾಹಿತಿ ನೀಡಿದ್ದರು. ಧಾರವಾಡದ ಎಸ್ಡಿಎಂ ಆಸ್ಪತ್ರೆಯ ಸುತ್ತಲಿನ ಶಾಲಾ ಕಾಲೇಜುಗಳು ಮತ್ತೆ ನಾಳೆಯಿಂದ ಆರಂಭ ಮಾಡುತ್ತೇವೆ. ಜಿಲ್ಲೆಯಲ್ಲಿ ವಾಣಿಜ್ಯ ವ್ಯವಹಾರಗಳಿಗೆ ನಿರ್ಬಂದ ಹೇರುವುದಿಲ್ಲ. ಮತ್ತು ನಿರ್ಬಂಧ ಹೇರಲು ಅವಕಾಶವೂ ಇಲ್ಲ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಅರಿವಿಗೆ ಬರುವ ಮೊದಲೇ ಹರಡಿದ ಒಮಿಕ್ರಾನ್: 20 ದೇಶಗಳಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ, ಕಾದಿದೆಯೇ ಸಂಕಷ್ಟ
ಇದನ್ನೂ ಓದಿ: ಕೊರೊನಾ ವೈರಸ್ 13ನೇ ರೂಪಾಂತರಿಗೆ ಒಮಿಕ್ರಾನ್ ಹೆಸರು ಯಾಕೆ ಬಂತು, ಅದರ ಹಿನ್ನೆಲೆ ಏನು ಅಂತ ಗೊತ್ತಾ?
Published On - 5:55 pm, Wed, 1 December 21