ಟಿಪ್ಪು ಜಯಂತಿ ಕರಾಳ‌ ನೆನಪು ಹಿನ್ನೆಲೆ; ನವೆಂಬರ್ 10 ರಂದು ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ

| Updated By: ganapathi bhat

Updated on: Nov 09, 2021 | 7:45 PM

ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಆದೇಶ ಹೊರಡಿಸಿದ್ದಾರೆ. ವಿಜಯೋತ್ಸವ, ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಭಾಷಣ ನಿಷೇಧಗೊಳಿಸಲಾಗಿದೆ.

ಟಿಪ್ಪು ಜಯಂತಿ ಕರಾಳ‌ ನೆನಪು ಹಿನ್ನೆಲೆ; ನವೆಂಬರ್ 10 ರಂದು ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ
Follow us on

ಮಡಿಕೇರಿ: ಕೊಡಗಿನಲ್ಲಿ ಟಿಪ್ಪು ಜಯಂತಿ ಕರಾಳ‌ ನೆನಪು ಹಿನ್ನೆಲೆ ನವೆಂಬರ್ 10 ರಂದು ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಆದೇಶ ಹೊರಡಿಸಿದ್ದಾರೆ. ವಿಜಯೋತ್ಸವ, ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಭಾಷಣ ನಿಷೇಧಗೊಳಿಸಲಾಗಿದೆ.

ಟಿಪ್ಪು ಜಯಂತಿ ಆಚರಣೆ ಈ ಮೊದಲು ವಿವಾದ ಸೃಷ್ಟಿಸಿತ್ತು. ಆಚರಣೆಯ ಕಾರಣದಿಂದ ಮಡಿಕೇರಿಯಲ್ಲಿ ಗಲಭೆಯೂ ಉಂಟಾಗಿತ್ತು. ಟಿಪ್ಪು ಜಯಂತಿ ಆಚರಣೆ ಕೋಮು ಸಂಬಂಧಿ ಗಲಭೆಗಳಿಗೂ ಸಾಕ್ಷಿಯಾಗಿತ್ತು. ಈ ಬಗ್ಗೆ ರಾಜಕೀಯ ಪಕ್ಷಗಳು ವಾದ, ಪ್ರತಿವಾದ ಮಾಡಿಕೊಂಡಿದ್ದವು. ಟಿಪ್ಪು ಜಯಂತಿ ಕರಾಳ ನೆನಪಿನ ಹಿನ್ನೆಲೆಯಲ್ಲಿ ಇದೀಗ ನಾಳೆ (ನವೆಂಬರ್ 10) ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ: ಟಿಪ್ಪು ಜಯಂತಿ ಆಚರಿಸಿದ್ದ ಸಿದ್ದರಾಮಯ್ಯರಿಂದ ಪಾಠ ಕಲಿಯಬೇಕಿಲ್ಲ: ನಳಿನ್ ಕುಮಾರ್ ಕಟೀಲ್

ಇದನ್ನೂ ಓದಿ: ನಿಮಗೆ ಪ್ರೀತಿ, ಕಾಳಜಿ ಇದ್ದಿದ್ದರೆ ವಿಗ್ರಹ ಕಳ್ಳ ಟಿಪ್ಪು ಜಯಂತಿ ಮಾಡ್ತಿರಲಿಲ್ಲ: ಮತ್ತೆ ಸಿದ್ದರಾಮಯ್ಯ ಕಾಲೆಳೆದ ಸಂಸದ ಪ್ರತಾಪ್

Published On - 7:31 pm, Tue, 9 November 21