ನಿಮಗೆ ಪ್ರೀತಿ, ಕಾಳಜಿ ಇದ್ದಿದ್ದರೆ ವಿಗ್ರಹ ಕಳ್ಳ ಟಿಪ್ಪು ಜಯಂತಿ ಮಾಡ್ತಿರಲಿಲ್ಲ: ಮತ್ತೆ ಸಿದ್ದರಾಮಯ್ಯ ಕಾಲೆಳೆದ ಸಂಸದ ಪ್ರತಾಪ್

TV9 Digital Desk

| Edited By: Ayesha Banu

Updated on:Sep 17, 2021 | 1:52 PM

ಸಿದ್ದರಾಮಯ್ಯನವರೇ ರಾಜಕೀಯಕ್ಕಾಗಿ ಆರೋಪ ಬೇಡ. ನಿಮ್ಮ ಕಾಲದಲ್ಲಿಯೇ ಲೋಪ ಸರಿಪಡಿಸಬಹುದಾಗಿತ್ತು. ಈಗ ಇದ್ದಕ್ಕಿದ್ದಂತೆ ಕಾಳಜಿ, ಪ್ರೀತಿ ವ್ಯಕ್ತವಾಗುತ್ತಿದೆ. ಪ್ರೀತಿ, ಕಾಳಜಿ ಇದ್ದಿದ್ದರೆ ವಿಗ್ರಹ ಕಳ್ಳ ಟಿಪ್ಪು ಸುಲ್ತಾನ್ ಜಯಂತಿ ಮಾಡುತ್ತಿರಲಿಲ್ಲ. ಲಿಂಗಾಯತರನ್ನು ಒಡೆಯುವ ಕೆಲಸ ಮಾಡುತ್ತಿರಲಿಲ್ಲ. - ಸಂಸದ ಪ್ರತಾಪ್

ನಿಮಗೆ ಪ್ರೀತಿ, ಕಾಳಜಿ ಇದ್ದಿದ್ದರೆ ವಿಗ್ರಹ ಕಳ್ಳ ಟಿಪ್ಪು ಜಯಂತಿ ಮಾಡ್ತಿರಲಿಲ್ಲ: ಮತ್ತೆ ಸಿದ್ದರಾಮಯ್ಯ ಕಾಲೆಳೆದ ಸಂಸದ ಪ್ರತಾಪ್
ಪ್ರತಾಪ್​ ಸಿಂಹ (ಸಂಗ್ರಹ ಚಿತ್ರ)


ಮೈಸೂರು: ರಾಜ್ಯದಲ್ಲಿ ದೇವಾಲಯ ತೆರವು ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಪ್ರೀತಿ, ಕಾಳಜಿ ಇದ್ದಿದ್ದರೆ ವಿಗ್ರಹ ಕಳ್ಳ ಟಿಪ್ಪು ಸುಲ್ತಾನ್ ಜಯಂತಿ ಮಾಡುತ್ತಿರಲಿಲ್ಲ. ಲಿಂಗಾಯತರನ್ನು ಒಡೆಯುವ ಕೆಲಸ ಮಾಡುತ್ತಿರಲಿಲ್ಲ. ಇದರಲ್ಲಿ ಬ್ಯುಸಿ ಆಗಿದ್ದರಿಂದ ನಿಮಗೆ ಅರ್ಥ ಆಗಿಲ್ಲ. ಈಗ ಸುಮ್ಮನೆ ಪ್ರೀತಿ ವಿಶ್ವಾಸವಿದೆ ಎಂದು ಬಿಂಬಿಸಿಕೊಳ್ಳಬೇಡಿ ಎಂದು ಪ್ರತಾಪ್ ಸಿಂಹ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಈ ವೇಳೆ ಮಾತನಾಡಿದ ಪ್ರತಾಪ್ ಸಿಂಹ, ಹರದನಹಳ್ಳಿ ಮಹದೇವಮ್ಮ ದೇಗುಲ ತೆರವು ವೇಳೆ ನಿಯಮಗಳನ್ನು ಪಾಲನೆ ಮಾಡಿಲ್ಲ. ಹೀಗಾಗಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡ್ತಿದ್ದೇನೆ. ನನಗೆ ಮುಖ್ಯಮಂತ್ರಿ ಬೊಮ್ಮಾಯಿ ಮೇಲೆ ನಂಬಿಕೆ ಇದೆ. ಸಿಎಂ ಬೊಮ್ಮಾಯಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಕೋರ್ಟ್ ಆದೇಶ ನೀಡಿತ್ತು. ನೀವು ವಕೀಲರಾಗಿದ್ದೀರಿ, ಏಕೆ ನೀವು ಗಮನಹರಿಸಲಿಲ್ಲ? ಎಂದು ಸಿದ್ದರಾಮಯ್ಯಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಲೋಪವಾಗಿದೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಲೋಪವಾಗಿದೆ. ಅಧಿಕಾರಿಗಳ ತಪ್ಪಿನಿಂದ ಈಗ ರಾಜಕಾರಣಿಗಳಿಂದ ಪರಸ್ಪರ ಆರೋಪ-ಪ್ರತ್ಯಾರೋಪವಾಗುತ್ತಿದೆ. ಇದೇ ರೀತಿ ಮಾಡಿಕೊಂಡು ಕಾಲಹರಣ ಮಾಡಬೇಡಿ. ಸಿದ್ದರಾಮಯ್ಯನವರೇ ರಾಜಕೀಯಕ್ಕಾಗಿ ಆರೋಪ ಬೇಡ. ನಿಮ್ಮ ಕಾಲದಲ್ಲಿಯೇ ಲೋಪ ಸರಿಪಡಿಸಬಹುದಾಗಿತ್ತು. ಈಗ ಇದ್ದಕ್ಕಿದ್ದಂತೆ ಕಾಳಜಿ, ಪ್ರೀತಿ ವ್ಯಕ್ತವಾಗುತ್ತಿದೆ. ಪ್ರೀತಿ, ಕಾಳಜಿ ಇದ್ದಿದ್ದರೆ ವಿಗ್ರಹ ಕಳ್ಳ ಟಿಪ್ಪು ಸುಲ್ತಾನ್ ಜಯಂತಿ ಮಾಡುತ್ತಿರಲಿಲ್ಲ. ಲಿಂಗಾಯತರನ್ನು ಒಡೆಯುವ ಕೆಲಸ ಮಾಡುತ್ತಿರಲಿಲ್ಲ. ಇದರಲ್ಲಿ ಬ್ಯುಸಿ ಆಗಿದ್ದರಿಂದ ನಿಮಗೆ ಅರ್ಥ ಆಗಿಲ್ಲ. ಈಗ ಸುಮ್ಮನೆ ಪ್ರೀತಿ ವಿಶ್ವಾಸವಿದೆ ಎಂದು ಬಿಂಬಿಸಿಕೊಳ್ಳಬೇಡಿ. ತಪ್ಪು ಎಲ್ಲ ಕಡೆಯಿಂದಲೂ ಆಗಿದೆ ಅನ್ನೋದನ್ನು ಒಪ್ಪಿಕೊಳ್ಳಿ ನೀವು ನೀವು ಹೊಡೆದಾಡದೆ ಎಲ್ಲರ ಭಾವನೆ ಗೌರವಿಸಿ. ಎಲ್ಲರೂ ವಿಶ್ವಾಸದಿಂದ ನಿರ್ಧಾರವನ್ನು ತೆಗೆದುಕೊಳ್ಳಿ ಯಾರ ಮೇಲೂ ಗೂಬೆ ಕೂರಿಸಲು ನಾನು ಬಂದಿಲ್ಲ ಎಂದರು.

ನಾನು ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದು ನಿಜ
ನಾನು ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದು ನಿಜ. ‘ಸುಪ್ರೀಂ’ ಆದೇಶ ಸರಿಯಾಗಿ ಪಾಲಿಸಿಲ್ಲವೆಂದು ತರಾಟೆಗೆ ತೆಗೆದುಕೊಂಡೆ ಎಂದು ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ. ಪ್ರತಿ ಪ್ರಕರಣವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು. ಸೂಕ್ತ ಕ್ರಮಕೈಗೊಳ್ಳಬೇಕು ಅಂತಾ ಸ್ಪಷ್ಟವಾಗಿದೆ. ಸಾರ್ವಜನಿಕ ಸ್ಥಳದ ಧಾರ್ಮಿಕ ಕಟ್ಟಡಗಳ ಮಾಹಿತಿಯನ್ನು 8 ವಾರದಲ್ಲಿ ನೀಡುವಂತೆ ಸೂಚಿಸಲಾಗಿತ್ತು. ಆದರೆ ಅಧಿಕಾರಿಗಳು ತರಾತುರಿಯಲ್ಲಿ ಪಟ್ಟಿ ನೀಡಿದ್ದಾರೆ. 06/02/2018ರಲ್ಲಿ ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿತ್ತು. ಹೈಕೋರ್ಟ್‌ಗೆ ಇದನ್ನು ಜಾರಿಗೊಳಿಸುವ ಅಧಿಕಾರವಿದೆ. ತೃಪ್ತಿಕರವಾದ ಅಫಿಡವಿಟ್ ನೀಡಿಲ್ಲ. ಸಮಗ್ರವಾದ ನೀತಿಯನ್ನು ರೂಪಿಸುವಂತೆ ಆದೇಶ ನೀಡಿದೆ.

ಅನ್‌ಪಡ್‌ಗಳು ರಾಜಕಾರಣಿಗಳಾಗಬಹುದು. ಆದರೆ ಅಧಿಕಾರಿಗಳು ವಿದ್ಯಾವಂತರಾಗಿರುತ್ತಾರೆ. ಸಿಎಸ್‌ಗಳಿಗೂ ಸುದೀರ್ಘ ಅನುಭವ ಇರುತ್ತದೆ. ಕೋರ್ಟ್ ಆದೇಶ ಅರ್ಥಮಾಡಿಕೊಂಡು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಾಗಿತ್ತು ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ನಾನು ಗೋಸುಂಬೆ ರಾಜಕಾರಣ ಮಾಡುವುದಕ್ಕೆ ಬಂದಿಲ್ಲ
ಪ್ರತಾಪ್ ಸಿಂಹ ರಾಜೀನಾಮೆ ಕೊಟ್ಟು ಹೋರಾಟ ಮಾಡಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಗೋಸುಂಬೆ ರಾಜಕಾರಣ ಮಾಡುವುದಕ್ಕೆ ಬಂದಿಲ್ಲ. ರಾಜೀನಾಮೆ ತಹಶೀಲ್ದಾರ್‌ಗೆ ಕೊಟ್ಟು ರಾಜಕಾರಣ ಮಾಡಲ್ಲ. ಕಾವೇರಿ ಹೋರಾಟದ ವಿಚಾರದಲ್ಲೂ ಕೆಲವರು ತಹಶೀಲ್ದಾರ್‌ಗೆ ರಾಜೀನಾಮೆ ಕೊಟ್ಟು ನಾಟಕ ಮಾಡಿದ್ದಾರೆ. ನನಗೆ ಅಂತಹ ರಾಜಕಾರಣ ಗೊತ್ತಿಲ್ಲವೆಂದು ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಇನ್ನೂ 92 ದೇಗುಲಗಳು ಇವೆ; ಅವುಗಳನ್ನು ಮುಟ್ಟಲು ಬಿಡಲ್ಲ- ನಂಜನಗೂಡು ದೇಗುಲ ತೆರವು ಬಳಿಕ ಪ್ರತಾಪ್ ಸಿಂಹ ವಾಗ್ದಾಳಿ


ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada