ದಸರಾ ಆನೆಗಳ ಯೋಗಕ್ಷೇಮ ವಿಚಾರಿಸಿ ಮೊಮ್ಮಗನ ಜೊತೆ ಫೋಟೋಗೆ ಪೋಸ್ ಕೊಟ್ಟ ಪ್ರಮೋದಾದೇವಿ ಒಡೆಯರ್‌

ಸಾಂಸ್ಕೃತಿಕನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾದ ಸಂಭ್ರಮ ಕಳೆಗಟ್ಟಿದೆ. ಅದ್ರಲ್ಲೂ ಸೆಪ್ಟೆಂಬರ್ 16 ರಂದು ಜಂಬೂಸವಾರಿಯ ಸಾರಥಿಗಳು ಅರಮನೆಗೆ ಕಾಲಿಟ್ಟಿದ್ದು, ಹಬ್ಬದ ರಂಗು ಮತ್ತಷ್ಟು ಹೆಚ್ಚಾಗಿದೆ. ವಿಶೇಷ ಅತಿಥಿಗಳನ್ನ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಈ ವೇಳೆ ರಾಜಮಾತೆ ಪ್ರಮೋದಾದೇವಿ ಒಡೆಯರ್‌ ದಸರಾ ಆನೆಗಳ ಯೋಗಕ್ಷೇಮ ವಿಚಾರಿಸಿದ್ದಾರೆ.

ದಸರಾ ಆನೆಗಳ ಯೋಗಕ್ಷೇಮ ವಿಚಾರಿಸಿ ಮೊಮ್ಮಗನ ಜೊತೆ ಫೋಟೋಗೆ ಪೋಸ್ ಕೊಟ್ಟ ಪ್ರಮೋದಾದೇವಿ ಒಡೆಯರ್‌
ರಾಜಮಾತೆ ಪ್ರಮೋದಾದೇವಿ ಒಡೆಯರ್‌ ದಸರಾ ಆನೆಗಳ ಯೋಗಕ್ಷೇಮ ವಿಚಾರಿಸಿದ್ರು.
Follow us
TV9 Web
| Updated By: ಆಯೇಷಾ ಬಾನು

Updated on:Sep 17, 2021 | 1:56 PM

ಮೈಸೂರು: ದಸರಾ ಅಂದ್ರೆ ಸಾಂಸ್ಕೃತಿಕ ಕಲರವ.. ದಸರಾ ಅಂದ್ರೆ ಗತಕಾಲದ ವೈಭವ.. ದಸರಾ ಅಂದ್ರೆ ಅದು ಇತಿಹಾಸದ ಉತ್ಸವ.. ಕರುನಾಡ ಮನೆ ಮನೆಯಲ್ಲೂ ಮೆರೆಸೋ ನಾಡಹಬ್ಬ. ಈ ನಾಡಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ಮೈಸೂರು ಸರ್ವರೀತಿಯಲ್ಲೂ ಸನ್ನದ್ಧವಾಗ್ತಿದೆ. ಜಂಬೂಸವಾರಿಯ ಸಾರಥಿಗಳು ಇವತ್ತು ಅರಮನೆಗೆ ಕಾಲಿಡೋ ಮೂಲಕ ರಾಜಕಳೆ ಬಂದಿದೆ. ಮಂಗಳವಾದ್ಯದ ನಿನಾದ.. ಮಂತ್ರಘೋಷಗಳ ಸದ್ದಿನೊಂದಿಗೆ ಸಿಂಗಾರಗೊಂಡ ಗಜಪಡೆಗೆ ಪುರೋಹಿತರಿಂದ ಪೂಜೆ, ಪುನಸ್ಕಾರ, ಸಕಲ ಗೌರವಗಳ ಜೊತೆ ಆನೆಗಳ ಅರಮನೆ ಪ್ರವೇಶವಾಗಿದೆ. ಸದ್ಯ ರಾಜಮಾತೆ ಪ್ರಮೋದಾದೇವಿ ಒಡೆಯರ್‌ ದಸರಾ ಆನೆಗಳ ಯೋಗಕ್ಷೇಮ ವಿಚಾರಿಸಿದ್ದಾರೆ.

ಮೊಮ್ಮಗ ಆದ್ಯವೀರ ಒಡೆಯರ್‌ ಜೊತೆ ಆನೆಗಳ ಬಳಿ ತೆರಳಿದ್ದ ಪ್ರಮೋದಾದೇವಿ ಒಡೆಯರ್, ಕ್ಯಾಪ್ಟನ್ ಅಭಿಮನ್ಯು ಆನೆಗೆ ಸಿಹಿ ತಿನಿಸಿ ಶುಭ ಹಾರೈಸಿದ್ದಾರೆ. ಮೊಮ್ಮಗನ ಜೊತೆಗೆ ಫೋಟೋಗೆ ಫೋಸ್ ನೀಡಿ ಸಂಭ್ರಮಿಸಿದ್ದಾರೆ.

Dasara Elephants

ಪ್ರಮೋದಾದೇವಿ ಒಡೆಯರ್, ಕ್ಯಾಪ್ಟನ್ ಅಭಿಮನ್ಯು ಆನೆಗೆ ಸಿಹಿ ತಿನಿಸಿ ಶುಭ ಹಾರೈಸಿದ್ದಾರೆ. ಮೊಮ್ಮಗನ ಜೊತೆಗೆ ಫೋಟೋಗೆ ಫೋಸ್ ನೀಡಿ ಸಂಭ್ರಮಿಸಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರೆ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗ್ತಿದ್ದು, ಗಜಪಡೆ ಅರಮನೆ ಪ್ರವೇಶ ಮಾಡಿವೆ. ಕಾಡಿನಿಂದ ನಾಡಿಗೆ ಆಗಮಿಸಿರುವ ಅಭಿಮನ್ಯು ನೇತೃತ್ವದ 8 ದಸರಾ ಜಂಬೂಸವಾರಿ ಆನೆಗಳು ಮೈಸೂರಿನ ಆಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಬೀಡು ಬಿಟ್ಟಿದ್ದವು. ಸೆ.16 ಬೆಳಗ್ಗೆ 6 ಗಂಟೆಗೆ ಶುಭತುಲಾ ಲಗ್ನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ಟಿ ಸೋಮಶೇಖರ್ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ್ರು.

ಪೂಜೆ ಬಳಿಕ ದಸರಾ ಗಜಪಡೆ ರಸ್ತೆ ಮಾರ್ಗವಾಗಿ‌ ಅರಮನೆ ಕಡೆಗೆ ಪ್ರಯಾಣ ಬೆಳೆಸಿದವು. ಅಭಿಮನ್ಯು ನೇತೃತ್ವದಲ್ಲಿ ಧನಂಜಯ, ವಿಕ್ರಮ, ಕಾವೇರಿ, ಚೈತ್ರ, ಲಕ್ಷ್ಮೀ, ಗೋಪಾಲಸ್ವಾಮಿ ಹಾಗೂ ಅಶ್ವತ್ಥಾಮ ಆನೆಗಳ ಗಜಗಾಂಭೀರ್ಯ ನಡಿಗೆ ಎಲ್ಲರ ಗಮನ ಸೆಳೆಯಿತು. ಆದ್ರೆ ಅರಮನೆ ಆವರಣಕ್ಕೆ ಬರುವ ವೇಳೆ ಅಶ್ವತ್ಥಾಮ ಗೊಂದಲ ಸೃಷ್ಟಿಸಿದ್ದ. ಅದ್ಯಾಕೋ ಏನೋ ರಸ್ತೆ ಬಿಟ್ಟು‌ ಫುಟ್‌ಪಾತ್‌ಗೆ ಹೋಗಿದ್ದ. ಇದೇ ಮೊದಲ ಸಲ ಅಶ್ವತ್ಥಾಮ ದಸರೆಯಲ್ಲಿ ಭಾಗಿಯಾಗ್ತಿದ್ದು, ಕೊನೆಗೆ ಹರಸಾಹಸ ಪಟ್ಟು ಮಾವುತರು ರಸ್ತೆಗೆ ಕರೆತಂದ್ರು.

Dasara Elephants

ದಸರಾ ಆನೆಗಳಿಗೆ ಅದ್ದೂರಿ ಸ್ವಾಗತ

ಇದನ್ನೂ ಓದಿ: Mysuru Dasara 2021: ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ವೀರನಹೊಸಹಳ್ಳಿಯಿಂದ ನಾಳೆ ಗಜಪಯಣ ಆರಂಭ

Published On - 7:42 am, Fri, 17 September 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ