ಎಸ್ಮಾ ಯಾವಾಗ ಜಾರಿ ಮಾಡ್ತೀರಿ ಸಿಎಂ ಸಾಹೇಬ್ರೇ?.. ನಮ್ಮನ್ನೆಲ್ಲಾ ಯಾವ ಜೈಲಿಗೆ ಕಳಿಸ್ತೀರಿ? -BSYಗೆ ಕೋಡಿಹಳ್ಳಿ ಸವಾಲ್​

| Updated By: KUSHAL V

Updated on: Dec 13, 2020 | 1:48 PM

ತಾರತಮ್ಯ ಸರಿಪಡಿಸೋಕೆ ಹೋರಾಡಿದ್ರೆ ನಮ್ಮನ್ನು ಬೆದರಿಸೋಕೆ ನೋಡ್ತೀರಾ? ಎಸ್ಮಾ ಯಾವಾಗ ಜಾರಿ ಮಾಡ್ತೀರಿ ಅಂತಾ ಹೇಳಿ ಯಡಿಯೂರಪ್ಪನವರೇ, ನಾವು ಜೈಲಿಗೆ ಹೋಗೋಕೂ ಸಿದ್ಧ ಎಂದು ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್​ ಹೇಳಿಕೆ ನೀಡಿದ್ದಾರೆ.

ಎಸ್ಮಾ ಯಾವಾಗ ಜಾರಿ ಮಾಡ್ತೀರಿ ಸಿಎಂ ಸಾಹೇಬ್ರೇ?.. ನಮ್ಮನ್ನೆಲ್ಲಾ ಯಾವ ಜೈಲಿಗೆ ಕಳಿಸ್ತೀರಿ? -BSYಗೆ ಕೋಡಿಹಳ್ಳಿ ಸವಾಲ್​
ಕೋಡಿಹಳ್ಳಿ ಚಂದ್ರಶೇಖರ್​ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಸಾರಿಗೆ ಸಿಬ್ಬಂದಿ ಅರ್ಧ ಹೊಟ್ಟೆಯಲ್ಲಿ ಕೆಲಸ ಮಾಡ್ತಾ ಇದ್ದಾರೆ. ಸರ್ಕಾರಿ ನೌಕರರಿಗಿಂತಾ ಶೇ.40ರಷ್ಟು ಕಡಿಮೆ ಸೌಲಭ್ಯ ಪಡೆಯುತ್ತಿದ್ದಾರೆ. ಈ ತಾರತಮ್ಯ ಸರಿಪಡಿಸೋಕೆ ಹೋರಾಡಿದ್ರೆ ನಮ್ಮನ್ನು ಬೆದರಿಸೋಕೆ ನೋಡ್ತೀರಾ? ಎಸ್ಮಾ ಯಾವಾಗ ಜಾರಿ ಮಾಡ್ತೀರಿ ಅಂತಾ ಹೇಳಿ ಯಡಿಯೂರಪ್ಪನವರೇ, ನಾವು ಜೈಲಿಗೆ ಹೋಗೋಕೂ ಸಿದ್ಧ ಎಂದು ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್​ ಹೇಳಿಕೆ ನೀಡಿದ್ದಾರೆ.

ನಾವು ಶ್ರಮದಿಂದ ಕೆಲಸ ಮಾಡುವ ಮಕ್ಕಳು. ನಮಗೆ ಅರ್ಧ ಕೂಲಿ ಕೊಡುತ್ತಿರುವುದು ನ್ಯಾಯ ಸಮ್ಮತವಾ? ಇದನ್ನು ಪ್ರಶ್ನಿಸಿದ್ರೆ ಎತ್ತಿ ಕಟ್ತಿದ್ದೀರಿ ಅಂತಾ ಆರೋಪ ಮಾಡ್ತೀರಿ. ಎತ್ತಿ ಕಟ್ಟೋದು ಅಂದ್ರೆ ಏನು? ಇಷ್ಟಕ್ಕೂ ನಾನು ಹೋರಾಟದಲ್ಲಿ ಭಾಗಿಯಾದ್ರೆ ತಪ್ಪೇನು? ವಿಪಕ್ಷದಲ್ಲಿದ್ದಾಗ ನಮ್ಮ ಪರ ಬ್ಯಾಟಿಂಗ್ ಮಾಡ್ತೀರಾ. ಆದ್ರೆ ಅಧಿಕಾರಕ್ಕೆ ಬಂದಾಗ ಹೀಗೆ. ನಿಮ್ಮ ಸರ್ಕಾರವನ್ನು ಬೀಳಿಸುವ ಪ್ರಯತ್ನ ನಾವು ಮಾಡ್ತಿಲ್ಲ. ನಾನು ಯಾವುದೇ ಪಕ್ಷದವನೂ ಅಲ್ಲ ಅಥವಾ ಸಿಎಂ ಆಗಬೇಕು ಅಂತಾ ಲಾಬಿ ಮಾಡ್ತಿಲ್ಲ ಎಂದು ಕೋಡಿಹಳ್ಳಿ ಗರಂ ಆದರು.

ಫೆಬ್ರವರಿಯಲ್ಲಿ ಕಮಿಟಿ ವರದಿ ನೀಡುವುದಾಗಿ ಹೇಳಿದ್ದೀರಿ. ಈಗ ಕಮಿಟಿ ವರದಿ ಎಲ್ಲಿಗೆ ಬಂದಿದೆ? ಇವತ್ತು ನೀವು ಮಾತನಾಡ್ತಿರೋದೇನು ಮಿಸ್ಟರ್ ಸವದಿ? ಕೋಡಿಹಳ್ಳಿ ಚಂದ್ರಶೇಖರ ಪ್ರತಿಭಟನೆಯಲ್ಲಿ ಭಾಗಿಯಾಗೋದಕ್ಕೆ ಯಾರು ಅಂತಾ ಕೇಳ್ತೀರಾ? ನೀನ್ಯಾವ ಸೀಮೆ ಮನುಷ್ಯ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು.

ಮುಷ್ಕರ ಕರೆದಿದ್ದ ಗುಂಪು ಒಡೆಯಲು ಲಕ್ಷ್ಮಣ ಸವದಿ ಪ್ರಯತ್ನಿಸುತ್ತಿದ್ದಾರೆ. ಅವರೇ ಎತ್ತಿಕಟ್ಟುವ ಕೆಲಸ ಮಾಡುತ್ತಿರೋದು. ಧರಣಿ ನಿರತರನ್ನು ಬಿಟ್ಟು ಬೇರೆಯವರ ಜತೆ ಸಭೆ ನಡೆಸಿದ್ರು. ಹೋರಾಟದಲ್ಲಿ ನಿರತರಾದವರನ್ನು ಕೈಬಿಟ್ರು. ಈಗ ಕರ್ತವ್ಯಕ್ಕೆ ಹಾಜರಾಗಲು ಸಿಬ್ಬಂದಿಗೆ ಬಲವಂತ ಮಾಡ್ತಿದ್ದಾರೆ. ಬಲತ್ಕಾರವಾಗಿ ಡ್ರೈವಿಂಗ್ ಮಾಡ್ಸೋಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

ಪ್ರತಿಭಟನಾಕಾರರನ್ನು ಬೆದರಿಸೋಕೆ ಎಸ್ಮಾ ಜಾರಿ ಮಾಡುವುದಾಗಿ ಹೇಳುತ್ತಿದ್ದಾರೆ. ರಾಜ್ಯದ ಜೈಲಿನ ಸಾಮರ್ಥ್ಯವಿರುವುದು 10 ಸಾವಿರ ಮಾತ್ರ. ಈಗಾಗಲೇ 20 ಸಾವಿರ ಅಪರಾಧಿಗಳಿದ್ದಾರೆ. ಆದರೆ, ನಾವು 1 ಲಕ್ಷ 30 ಸಾವಿರ ಧರಣಿ ನಿರತರು ಇಲ್ಲಿದ್ದೇವೆ. ನಮ್ಮನ್ನೆಲ್ಲಾ ಯಾವ ಜೈಲಿಗೆ ಕಳಿಸ್ತೀರಿ ಅಂತಾ ಹೇಳಿ. ಜೈಲಿಗೆ ಹೋಗಲು ನಾವೆಲ್ಲರೂ ಕ್ಯೂನಲ್ಲಿ ನಿಂತುಕೊಳ್ತೇವೆ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನೀಲಿ ಚಿತ್ರ ನೋಡಿದವರು ನ್ಯಾಯ ಕೊಡುತ್ತಾರಾ?’
ಈ ವೇಳೆ, ನೀಲಿ ಚಿತ್ರ ನೋಡಿದವರು ನ್ಯಾಯ ಕೊಡುತ್ತಾರಾ? ಎಂದು ಲಕ್ಷ್ಮಣ ಸವದಿ ವಿರುದ್ಧ BSP ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ತಾವು ಮಣ್ಣಿನ ಮಕ್ಕಳು ಎಂದು ಹೇಳುತ್ತಾರೆ ಇವ್ರು ಮಣ್ಣಿನ ಮಕ್ಕಳಾದ್ರೆ ಉಳಿದವರು ಕಬ್ಬಿಣದ ಮಕ್ಕಳಾ? ಎಂದು ಮುನಿಯಪ್ಪ ವ್ಯಂಗ್ಯವಾಡಿದರು.

ಸಾರಿಗೆ ಸಿಬ್ಬಂದಿಯನ್ನ ಎತ್ತಿಕಟ್ಟೋದು ಅಂದ್ರೇನು? -‘ಗೌರವಾಧ್ಯಕ್ಷ’ ಕೋಡಿಹಳ್ಳಿ ಚಂದ್ರಶೇಖರ್‌ ಪ್ರಶ್ನೆ

Published On - 1:48 pm, Sun, 13 December 20