ದೇಶದಲ್ಲಿ ಪ್ರಳಯವಾಗುತ್ತದೆ, ಸತ್ತು ಹೂತವರು ಮೇಲೆದ್ದು ಮಾತನಾಡುತ್ತಾರೆ – ಕೋಡಿಮಠ ಶ್ರೀಗಳ ಭವಿಷ್ಯ ವಾಣಿ

| Updated By: ಆಯೇಷಾ ಬಾನು

Updated on: Jun 02, 2021 | 1:31 PM

Kodi Mutt Swamiji Predictions: ಸತ್ತು ಹೂತವರು ಮೇಲೆದ್ದು ಮಾತನಾಡುತ್ತಾರೆ ಎಂದು ಶ್ರೀಗಳು ತಿಳಿಸಿದ್ದಾರೆ. ಪ್ರೇತಗಳ ಮಾತುಕತೆ ಎಲ್ಲರೂ ನೋಡಲಿದ್ದೀರಿ. ಪ್ರಕೃತಿಯ ನಾಲ್ಕು ದಿಕ್ಕುಗಳಲ್ಲೂ ದೋಷ ಇದೆ. ಭೂಮಿ, ಆಕಾಶ, ಗಾಳಿ, ನೀರು, ಭೂಕಂಪನ ಸಾಧ್ಯತೆ ಇದೆ. ಮಿಂಚಿನಿಂದ ದುರ್ಯೋಗವಿದೆ ಎಂದು ಭವಿಷ್ಯ ನುಡಿದಿದ್ದಾರೆ.

ದೇಶದಲ್ಲಿ ಪ್ರಳಯವಾಗುತ್ತದೆ, ಸತ್ತು ಹೂತವರು ಮೇಲೆದ್ದು ಮಾತನಾಡುತ್ತಾರೆ - ಕೋಡಿಮಠ ಶ್ರೀಗಳ ಭವಿಷ್ಯ ವಾಣಿ
ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು
Follow us on

Kodi Mutt Swamiji Predictions | ಹಾಸನ: ಕೊರೊನಾ ಇನ್ನಷ್ಟು ಹೆಚ್ಚಾಗುವ ಭೀತಿ ಇದೆ. ಕೊರೊನಾ ಗಾಳಿಯಿಂದ ಬರುವ ರೋಗವಲ್ಲ. ಮುಂದೆ ಗಾಳಿಯಿಂದ ಒಂದು ರೋಗ ಬರಲಿದೆ ಎಂದು ಈ ಹಿಂದೆಯೇ ಭವಿಷ್ಯ ವಾಣಿ ನುಡಿದಿದ್ದ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಈಗ ಕೊರೊನಾದ ಎರಡನೇ ಅಲೆಯಲ್ಲೂ ಬೆಚ್ಚಿ ಬೀಳುಸುವ ಭವಿಷ್ಯ ನುಡಿದಿದ್ದಾರೆ.

‘ಜೂನ್ 20ರ ಬಳಿಕ ಕೊರೊನಾ ಅಲೆ ಕಡಿಮೆಯಾಗಲಿದೆ’ ಕೊರೊನಾದ ಹಾವಳಿ ತಪ್ಪಲಿದೆ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದು ಮುಂದೆ ಭಯಾನಕ ದಿನಗಳನ್ನು ಎದುರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಹೋಗಲು ಹತ್ತು ವರ್ಷ ಬೇಕು. ಸದ್ಯ ಜೂನ್ 20ರ ಬಳಿಕ ಕೊರೊನಾ ಅಲೆ ಕಡಿಮೆಯಾಗಲಿದೆ. ‘ಕೊರೊನಾ ಹೋಗುವುದಕ್ಕೆ ಇನ್ನೊಂದು ಅಲೆ‌ ಬರಲಿದೆ’ ‘ಮತ್ತೊಂದು ಗಂಡಾಂತರ ಕಾಯಿಲೆ ಬರಲಿದೆ’ ‘ನಡೆದುಕೊಂಡು ಹೋಗ್ತಿರುವಾಗಲೇ ಮನುಷ್ಯ ಬಿದ್ದು ಸಾಯ್ತಾನೆ’ ಕುಂಭದಲ್ಲಿ ಗುರು ಬರಲು- ತುಂಬುವುದು ಕೆರೆ ಕಟ್ಟೆ, ಶಂಬುವಿನ ಪದ ಸಾಕ್ಷಿ ಡಂಬವೆನಬೇಡಿ. ಕಾರ್ತಿಕ ಮಾಸದವರೆಗೂ ಕೊರೊನಾ ಬೆನ್ನು ಹತ್ತಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

‘ದೇಶದಲ್ಲಿ ಪ್ರಳಯವಾಗುವ ಸಾಧ್ಯತೆ ಇದೆ’
ಇನ್ನು ಕೊರೊನಾ ಬಳಿಕ ಜಗತ್ತಿನಲ್ಲಿ ಒಂದು ಅಪಾಯಕಾರಿ ಘಟನೆ ನಡೆಯುತ್ತದೆ. ಇದು ರಾಷ್ಟ್ರಕ್ಕೆ ಅಪಾಯಕಾರಿಯಾಗಿರುತ್ತೆ. ದೇಶದಲ್ಲಿ ಪ್ರಳಯವಾಗುವ ಸಾಧ್ಯತೆ ಇದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ. ರಾಷ್ಟ್ರ ರಾಜಕೀಯ ವಿಫಲವಾಗುತ್ತದೆ. ರಾಜಕೀಯ ಭೀತಿ ಸೃಷ್ಟಿಯಾಗಲಿದೆ. ಸಾಮೂಹಿಕ ಸಾವು ನೋವು ಆಗಲಿದೆ ಎಂದು ಆತಂಕಕಾರಿ ಸಂಗತಿಯನ್ನು ನುಡಿದಿದ್ದಾರೆ.

ಸತ್ತು ಹೂತವರು ಮೇಲೆದ್ದು ಮಾತನಾಡುತ್ತಾರೆ
ಇನ್ನೂ ಬೆಚ್ಚಿ ಬೀಳಿಸುವ ವಿಷಯವೆಂದರೆ ಸತ್ತು ಹೂತವರು ಮೇಲೆದ್ದು ಮಾತನಾಡುತ್ತಾರೆ ಎಂದು ಶ್ರೀಗಳು ತಿಳಿಸಿದ್ದಾರೆ. ಪ್ರೇತಗಳ ಮಾತುಕತೆ ಎಲ್ಲರೂ ನೋಡಲಿದ್ದೀರಿ. ಪ್ರಕೃತಿಯ ನಾಲ್ಕು ದಿಕ್ಕುಗಳಲ್ಲೂ ದೋಷ ಇದೆ. ಭೂಮಿ, ಆಕಾಶ, ಗಾಳಿ, ನೀರು, ಭೂಕಂಪನ ಸಾಧ್ಯತೆ ಇದೆ. ಮಿಂಚಿನಿಂದ ದುರ್ಯೋಗವಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಕೊರೊನಾ ಹಳೇ ರೋಗ.. ಮುಂದೆ ಗಾಳಿಯಿಂದ ಮತ್ತೊಂದು ರೋಗ ಬರಲಿದೆ -ಕೋಡಿಹಳ್ಳಿ ಶ್ರೀ ಭವಿಷ್ಯ

Published On - 12:49 pm, Wed, 2 June 21