Kolar Oxygen Shortage Death| ಜಿಲ್ಲಾ ಶಸ್ತ್ರಚಿಕಿತ್ಸಕ ಸಸ್ಪೆಂಡ್, ತನಿಖೆಗೆ ಸೂಚಿಸಿದ ಸಚಿವ ಸುಧಾಕರ್
ಕೋಲಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಬಳಿಕ ಡಾ.ಕೆ.ಸುಧಾಕರ್, ಆಸ್ಪತ್ರೆಯಲ್ಲಿ 40 ವೆಂಟಿಲೇಟರ್ ಇದ್ರೂ ಬಳಸ್ತಿಲ್ಲ, ಇದು ದೊಡ್ಡ ಅಪರಾಧ. ವೆಂಟಿಲೇಟರ್ ಬಳಸಿದ್ರೆ ಕನಿಷ್ಠ 40 ಜನರನ್ನ ಉಳಿಸಬಹುದಿತ್ತು. ಆಸ್ಪತ್ರೆಯಲ್ಲಿ ಸಾಕಷ್ಟು ಲೋಪದೋಷಗಳಿವೆ ಎಂದು ಸುಧಾಕರ್ ಆಸ್ಪತ್ರೆ ವಿರುದ್ಧ ಹಾಗೂ ಆಸ್ಪತ್ರೆಯ ಲೋಪದೋಷಗಳ ಬಗ್ಗೆ ಮಾತನಾಡಿದ್ದಾರೆ.
ಕೋಲಾರ: ಆಕ್ಸಿಜನ್ ಸಮಸ್ಯೆಯಿಂದ ನಿನ್ನೆ ಆಸ್ಪತ್ರೆಯಲ್ಲಿ ಸೋಂಕಿತರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಆಕ್ಸಿಜನ್ ಸರಬರಾಜಿನ ದೋಷದ ಬಗ್ಗೆ ತನಿಖೆಗೆ ಸೂಚಿಸಿದ್ದಾರೆ. ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ, ಆರ್.ಎಂ.ಒ ಸಸ್ಪೆಂಡ್ ಮಾಡಲಾಗಿದೆ.
ಘಟನೆ ಬಗ್ಗೆ ತಿಳಿದ ನಂತರ ಕೋಲಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಬಳಿಕ ಡಾ.ಕೆ.ಸುಧಾಕರ್, ಆಸ್ಪತ್ರೆಯಲ್ಲಿ 40 ವೆಂಟಿಲೇಟರ್ ಇದ್ರೂ ಬಳಸ್ತಿಲ್ಲ, ಇದು ದೊಡ್ಡ ಅಪರಾಧ. ವೆಂಟಿಲೇಟರ್ ಬಳಸಿದ್ರೆ ಕನಿಷ್ಠ 40 ಜನರನ್ನ ಉಳಿಸಬಹುದಿತ್ತು. ಆಸ್ಪತ್ರೆಯಲ್ಲಿ ಸಾಕಷ್ಟು ಲೋಪದೋಷಗಳಿವೆ ಎಂದು ಸುಧಾಕರ್ ಆಸ್ಪತ್ರೆ ವಿರುದ್ಧ ಹಾಗೂ ಆಸ್ಪತ್ರೆಯ ಲೋಪದೋಷಗಳ ಬಗ್ಗೆ ಮಾತನಾಡಿದ್ದಾರೆ.
ಆಸ್ಪತ್ರೆಯಲ್ಲಿ ಪ್ರತಿನಿತ್ಯ 10 ರಿಂದ 11 ಜನರು ಸಾಯುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಅಟೆಂಡರ್ ಇಟ್ಟಿದ್ದಾರೆ. ರೋಗಿಗಳಿಗೆ ಅಟೆಂಡರ್ ರಾಜ್ಯದಲ್ಲಿ ಎಲ್ಲೂ ಇಲ್ಲ, ಇದು ತಪ್ಪು ಎಂದು ತಿಳಿಸಿದ್ರು. ಇನ್ನು ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ತಡರಾತ್ರಿವರೆಗೂ ಅಧಿಕಾರಿಗಳ ಜೊತೆ ಸುಧಾಕರ್ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಡಿಸಿ, SP ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.
ಏಪ್ರಿಲ್ 26ರ ರಾತ್ರಿ ಆಕ್ಸಿಜನ್ ಸಮಸ್ಯೆಯಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ನಾಲ್ವರು ಮೃತಪಟ್ಟಿದ್ದರು. ಬಳಿಕ ಸಾವಿನ ಸಂಖ್ಯೆ ಏರಿಕೆಯಾಗಿತ್ತು. ಕೊರೊನಾ ದೃಢವಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತರು ಐಸಿಯು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ನಿನ್ನೆ ರಾತ್ರಿ ಆಕ್ಸಿಜನ್ ಕೊರತೆಯಿಂದಾಗಿ ಮೂವರು ಪುರುಷರು ಹಾಗೂ ಓರ್ವ ಮಹಿಳೆ ಮೃತಪಟ್ಟಿದ್ದರು.
ರಾತ್ರಿ ಫೋನ್ ಮಾಡಿದರು ಯಾವೊಬ್ಬ ಅಧಿಕಾರಿಯು ಸ್ಪಂದಿಸಿಲ್ಲ. ಆಸ್ಪತ್ರೆ ಸಿಬ್ಬಂದಿ ಆಕ್ಸಿಜನ್ ಕಡಿತಗೊಳಿಸಿದ್ದರಿಂದಲೇ ನಮ್ಮವರ ಸಾವು ಸಂಭವಿಸಿದೆ ಎಂದು ಆಸ್ಪತ್ರೆ ಎದುರು ಮೃತರ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದರು.
ಇದನ್ನೂ ಓದಿ: Oxygen Shortage| ಆಕ್ಸಿಜನ್ ಕೊರತೆಯಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಸೋಂಕಿತರು ಬಲಿ