ಪೆಹಲ್ಗಾಮ್​ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಕೋಲಾರದ ರೈತರು..!

ಜಮ್ಮು ಮತ್ತು ಕಾಶ್ಮೀರದ ಪೆಹಾಲ್ಗಾಮ ನಲ್ಲಿ ಉಗ್ರರು ನಡೆಸಿದ ನರಮೇದದ ಹಿನ್ನಲೆ ಕೇಂದ್ರ ಸರ್ಕಾರ ರಾಜತಾಂತ್ರಿಕವಾಗಿ ಪಾಪಿ ಪಾಕಿಸ್ತಾನದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದೆ. ಇದರಿಂದ ಔಷಧ ಸೇರಿದಂತೆ ದಿನನಿತ್ಯ ಬಳಕೆ ವಸ್ತುಗಳಿಗಾಗಿ ಪಾಕ್​​ ಪರದಾಡುತ್ತಿದೆ. ಹೀಗಿರುವಾಗಲೇ ಕೋಲಾರದ ರೈತರು ಮತ್ತು ವರ್ತಕರು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ ಟೊಮ್ಯಾಟೊ ರಪ್ರು ಮೇಲೆ ಸಂಪೂರ್ಣ ನಿರ್ಬಂಧವೇರಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ.

ಪೆಹಲ್ಗಾಮ್​ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಕೋಲಾರದ ರೈತರು..!
Kolar Tomato
Edited By:

Updated on: May 01, 2025 | 5:38 PM

ಕೋಲಾರ, (ಮೇ 01): ಕೋಲಾರದ ಎಪಿಎಂಸಿ ಮಾರುಕಟ್ಟೆ (Kolar APMC) ಇಡೀ ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ (tomato Market) ಎನ್ನುವ ಹೆಗ್ಗಳಿಕೆ ಹೊಂದಿದೆ. ಅದೇ ಕಾರಣಕ್ಕೆ ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಗುಣಮಟ್ಟದ ಟೊಮೆಟೊ ದೇಶದ ಬಹುತೇಕ ರಾಜ್ಯಗಳಿಗೆ ಹಾಗೂ ಹೊರ ದೇಶಗಳಿಗೂ ರಫ್ತಾಗುತ್ತದೆ. ಇನ್ನು ಜೂನ್ ಮತ್ತು ಜುಲೈ ತಿಂಗಳಲ್ಲಿ ಟೊಮ್ಯಾಟೊ ಸುಗ್ಗಿಯ ಕಾಲ. ಈ ಸಂದರ್ಭದಲ್ಲಿ ಕೋಲಾರದ ಟೊಮೆಟೊ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ,ದುಬೈ ಸೇರಿದಂತೆ ವಿವಿಧ ದೇಶಗಳಿಗೆ ಇಲ್ಲಿನ ರೈತರು ರಪ್ತು ಮಾಡುತ್ತಾರೆ. ಆದರೆ ಇತ್ತೀಚೆಗೆ ಉಗ್ರರು ಕಾಶ್ಮೀರದ ಪೆಹಲ್ಗಾಮ ನಲ್ಲಿ (Pahalgam Terror Attack) ಅಟ್ಟಹಾಸ ಮೆರೆದು 27 ಜನರನ್ನು ಬಲಿ ಪಡೆದಿದ್ದಾರೆ. ಇದರಿಂದ ಕೇಂದ್ರ ಸರ್ಕಾರ, ರಾಜತಾಂತ್ರಿಕವಾಗಿ ಈಗಾಗಲೇ ಪಾಕ್​​ಗೆ ಬಿಸಿಮುಟ್ಟಿಸಲು ಮುಂದಾಗಿದೆ. ಇತ್ತ ಕೋಲಾರದ ರೈತರು ಸಹ ತಮ್ಮ ಟೊಮೆಟೊವನ್ನು ಪಾಕಿಸ್ತಾನಕ್ಕೆ (Pakistan) ರಪ್ತು ಮಾಡುವುದನ್ನ ನಿಲ್ಲಿಸಿದ್ದಾರೆ. ಈ ಮೂಲಕ ಕೋಲಾರದ ರೈತರು ಸಹ ಪಾಕಿಸ್ತಾನಕ್ಕೆ ಶಾಕ್ ಕೊಟ್ಟಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರ ರಾಜತಾಂತ್ರಿಕವಾಗಿ ಪಾಕಿಸ್ತಾನದ ವಿರುದ್ದ ಪ್ರತೀಕಾರವನ್ನು ತೀರಿಸಿಕೊಳ್ಳಲು ಮುಂದಾಗಿದ್ದು,ಇದರ ಬೆನ್ನಲೇ ಕೋಲಾರದ ರೈತರು ಮತ್ತು ವರ್ತಕರು ಪಾಕಿಸ್ತಾನಕ್ಕೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಘೋಷಣೆ ಮಾಡಿದ್ದಾರೆ. ಕೋಲಾರದಿಂದ ಪಾಕಿಸ್ತಾನಕ್ಕೆ ಸರಬರಾಜು ಮಾಡುತ್ತಿದ್ದ ಟೊಮೆಟೊಗೆ ಸಂಪೂರ್ಣ ನಿರ್ಬಂಧವೇರಿದ್ದು,ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಟೊಮೆಟೊ ಸರಬರಾಜು ಮಾಡದಿರಲು ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ: ಭಯದಿಂದ ಕಂಪಿಸುತ್ತಿದೆ ಪಾಕ್, ಭಾರತ ಔಷಧಗಳ ಪೂರೈಕೆ ನಿಲ್ಲಿಸಿದ್ರೆ ಪಾಕ್​ ಪರಿಸ್ಥಿತಿ ಏನಾಗುತ್ತೆ?

ಪ್ರತಿ ವಾರ್ಷಿಕವಾಗಿ 800 ರಿಂದ 900 ಟನ್ ಟೊಮೆಟೊವನ್ನು ಕೋಲಾರಿಂದ ಪಾಕಿಸ್ತಾನಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಆದ್ರೆ, ಪೆಹಲ್ಗಾಮ್​ ದಾಳಿ ಬೆನ್ನಲ್ಲೇ ವರ್ತಕರು ಇನ್ನು ಮುಂದೆ ಪಾಕಿಸ್ತಾನಕ್ಕೆ ಒಂದೇ ಒಂದು ಟೊಮೆಟೊವನ್ನು ಕಳುಹಿಸದಿರಲು ತೀರ್ಮಾನಿಸಿದ್ದಾರೆ. ಇನ್ನು ಪಾಕಿಸ್ತಾನದ ಜೊತೆ ಇಲ್ಲಿನ ವರ್ತಕರು ಅವಿನಾಭಾವ ‌ಸಂಬಂಧವನ್ನು ಹೊಂದಿದ್ದಾರೆ.‌ ಟೊಮೆಟೊ ಜೊತೆ ತರಕಾರಿಯನ್ನು‌ ಸಹ ಕಳುಹಿಸುತ್ತಿದ್ದರು. ಈ ಮೂಲಕ ಕೋಟ್ಯಾಂತರ ರೂಪಾಯಿ ವ್ಯವಹಾರವನ್ನು ಇಲ್ಲಿನ ರೈತರು ವರ್ತಕರು ಪಾಕಿಸ್ತಾನದ ಜೊತೆ ವಹಿವಾಟು ಮಾಡುತ್ತಿದ್ದರು. ಆದ್ರೆ ನರಮೇಧ ನಡೆಸಿ ಕ್ಯಾತೆ ತೆಗೆದ ಹಿನ್ನಲೆಯಲ್ಲಿ ರೈತರು ಪಾಕಿಸ್ತಾನದ ವಿರುದ್ದ ತಿರುಗಿ ಬಿದಿದ್ದಾರೆ.

ಇದನ್ನೂ ಓದಿ
ಭಾರತ ಔಷಧಗಳ ಪೂರೈಕೆ ನಿಲ್ಲಿಸಿದ್ರೆ ಪಾಕ್​ ಪರಿಸ್ಥಿತಿ ಏನಾಗುತ್ತೆ?
ಪಾಕ್​ಗೆ ಹೋಗುವ ಸಂಪೂರ್ಣ ನೀರನ್ನು ಭಾರತ ತಡೆಹಿಡಿಯಲು ಸಾಧ್ಯವಿಲ್ಲ
ಕದನ ವಿರಾಮ ಉಲ್ಲಂಘನೆಗಳ ವಿರುದ್ಧ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ

ತಮಗೆ ನಷ್ಟವಾದರೂ ಪರವಾಗಿಲ್ಲ ಪಾಕಿಸ್ತಾನಕ್ಕೆ ಮಾತ್ರ ಟೊಮೆಟೊ ಕಳುಹಿಸುವುದಿಲ್ಲ, 2013ರಲ್ಲಿ ಪುಲ್ವಾಮ ದಾಳಿ ಸಂದರ್ಭದಲ್ಲಿ ಕೂಡಾ ಇದೇ ರೀತಿ ಪಾಕಿಸ್ತಾನ ಕ್ಯಾತೆ ತೆಗೆದಾಗ ಕೋಲಾರದ ರೈತರು ಇಂತಹದ್ದೇ ನಿರ್ಧಾರ ಮಾಡಿದ್ದರು, ಈಗ ಮತ್ತೆ ಪಾಕ್ ಅಂಥಹದ್ದೇ ಕ್ಯಾತೆ ತೆಗೆದಿರುವ ಹಿನ್ನೆಲೆ ಕೋಲಾರದಿಂದ ಮಾಡಲಾಗುತ್ತಿದ್ದ ಟೊಮೆಟೊ ರಪ್ತು ಈಗ ಮತ್ತೆ ನಿಲ್ಲಿಸುತ್ತೇವೆ ಎಂದಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಣಯಕ್ಕೆ ನಾವು‌ ಬದ್ದ ಎನ್ನುತ್ತಿದ್ದಾರೆ ಕೋಲಾರದ ರೈತರು.

ಒಟ್ಟಾರೆ ಪಾಕಿಸ್ತಾನದ ಹುಟ್ಟು ಹಡಗಿಸಲು ಕೇಂದ್ರ ಸರ್ಕಾರ ನೀರು ಸೇರಿದಂತೆ ಇನ್ನಿತರ ವಸ್ತುಗಳು ಮೇಲೆ ನಿರ್ಬಂಧ ಹೇರಿರುವಾಗಲೇ ಕೋಲಾರದ ರೈತರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಟೊಮೆಟೊ, ತರಕಾರಿ ಸರಬರಾಜುಗೆ ನಿರ್ಬಂಧವೇರಿದ್ದು, ಪಾಕಿಸ್ತಾನದಲ್ಲಿ ಟೊಮೆಟೊ ಹಾಗೂ ತರಕಾರಿಗೆ ಅಲ್ಲಿನ ಜನ ಪರದಾಡುವಂತಾಗುವುದು ಕಟ್ಟಿಟ್ಟ ಬುತ್ತಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ