AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indus Waters Treaty: ಪಾಕಿಸ್ತಾನಕ್ಕೆ ಹೋಗುವ ನೀರನ್ನು ಭಾರತ ಸಂಪೂರ್ಣವಾಗಿ ತಡೆಹಿಡಿಯಲು ಸಾಧ್ಯವಿಲ್ಲ ಏಕೆ?

ಸಿಂಧೂ ನದಿ ಒಪ್ಪಂದ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನಕ್ಕೆ ಹೋಗುವ ನೀರನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಏಪ್ರಿಲ್-ಸೆಪ್ಟೆಂಬರ್​ವರೆಗೆ ನೀರಿನ ಹರಿವು ಹೆಚ್ಚಿರಲಿದ್ದು, ಹಿಮಾಲಯದಲ್ಲಿ ಇರುವ ಹಿಮವೆಲ್ಲಾ ಕರಗಿ ನೀರಾಗಿ ಹರಿಯಲಿದೆ. ಪಾಕಿಸ್ತಾನಕ್ಕೆ ಹೋಗುವ ಅಷ್ಟೂ ನೀರನ್ನು ಶೇಖರಿಸಿಡುವ ಸಾಮರ್ಥ್ಯ ಭಾರತಕ್ಕಿಲ್ಲ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿ ಬಳಿಕ ಪಾಕಿಸ್ತಾನ ಹಾಗೂ ಭಾರತದ ಸಂಬಂಧ ಮತ್ತಷ್ಟು ಹದಗೆಟ್ಟಿದೆ.

Indus Waters Treaty: ಪಾಕಿಸ್ತಾನಕ್ಕೆ ಹೋಗುವ ನೀರನ್ನು ಭಾರತ ಸಂಪೂರ್ಣವಾಗಿ ತಡೆಹಿಡಿಯಲು ಸಾಧ್ಯವಿಲ್ಲ ಏಕೆ?
ನದಿ
ನಯನಾ ರಾಜೀವ್
|

Updated on:May 01, 2025 | 10:13 AM

Share

ನವದೆಹಲಿ, ಮೇ 1: ಪಾಕಿಸ್ತಾನ(Pakistan)ಕ್ಕೆ ಹೋಗುವ ನೀರನ್ನು ಏಕಾಏಕಿ ಸಂಪೂರ್ಣವಾಗಿ ತಡೆಹಿಡಿಯಲು ಭಾರತಕ್ಕೆ ಸಾಧ್ಯವಿಲ್ಲ. ಭಾರತಕ್ಕೆ ತಕ್ಷಣದ ಮೂಲಸೌಕರ್ಯಗಳ ಕೊರತೆ ಇರುವ ಕಾರಣ ಇದು ಈಗ ಸಾಧ್ಯವಾಗದಿರಬಹುದು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿ ಬಳಿಕ ಪಾಕಿಸ್ತಾನ ಹಾಗೂ ಭಾರತದ ಸಂಬಂಧ ಮತ್ತಷ್ಟು ಹದಗೆಟ್ಟಿದೆ.

ಉಗ್ರ ದಾಳಿಯ ಹೊಣೆಯಲ್ಲಿ ಲಷ್ಕರ್-ಎ-ತೊಯ್ಬಾದ ಟಿಆರ್​ಎಫ್​ ಹೊತ್ತುಕೊಂಡಿದೆ. ಭಾರತವು ತಕ್ಷಣದ ಕ್ರಮದಲ್ಲಿ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದೆ. ಅಟ್ಟಾರಿ ಮಾರ್ಗವನ್ನು ಬಂದ್ ಮಾಡಿದೆ. ಅಷ್ಟೇ ಅಲ್ಲದೆ ತನ್ನ ವಾಯು ಪ್ರದೇಶವನ್ನು ಕೂಡ ಪಾಕಿಸ್ತಾನದ ವಿಮಾನಗಳಿಗೆ ನಿರ್ಬಂಧಿಸಿದೆ.

ಏಪ್ರಿಲ್-ಸೆಪ್ಟೆಂಬರ್​ವರೆಗೆ ನೀರಿನ ಹರಿವು ಹೆಚ್ಚಿರಲಿದ್ದು, ಹಿಮಾಲಯದಲ್ಲಿ ಇರುವ ಹಿಮವೆಲ್ಲಾ ಕರಗಿ ನೀರಾಗಿ ಹರಿಯಲಿದೆ. ಪಾಕಿಸ್ತಾನಕ್ಕೆ ಹೋಗುವ ಅಷ್ಟೂ ನೀರನ್ನು ಶೇಖರಿಸಿಡುವ ಸಾಮರ್ಥ್ಯ ಭಾರತಕ್ಕಿಲ್ಲ. ಹೈದರಾಬಾದ್ ಮೂಲದ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ಐಎಸ್‌ಬಿ) ನ ಸಂಶೋಧನಾ ನಿರ್ದೇಶಕ ಅಂಜಲ್ ಪ್ರಕಾಶ್ ಮಾತನಾಡಿ, ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ಪಶ್ಚಿಮ ನದಿಗಳಿಂದ ನೀರನ್ನು ತಿರುಗಿಸಲು ಭಾರತಕ್ಕೆ ಮೂಲಸೌಕರ್ಯವಿಲ್ಲ. ಚಳಿಗಾಲದ ‘ಕಡಿಮೆ ಹರಿವಿನ’ ಋತುವಿನಲ್ಲಿ, ನವದೆಹಲಿಯು ಬಾಗ್ಲಿಹಾರ್ ಮತ್ತು ಕಿಶನ್‌ಗಂಗಾ ಅಣೆಕಟ್ಟಿನ ಮೂಲಸೌಕರ್ಯವನ್ನು ಬಳಸಿಕೊಂಡು ನದಿ ನೀರಿನ ಹರಿವು ಮತ್ತು ಅದರ ಸಮಯವನ್ನು ಹೇಗಾದರೂ ನಿಯಂತ್ರಿಸಬಹುದು.

ಇದನ್ನೂ ಓದಿ
Image
ಕಾಶ್ಮೀರದಲ್ಲಿ ರಕ್ತದೋಕುಳಿ; ಇಂದು ಉಗ್ರರ ದಾಳಿ ವೇಳೆ ಆಗಿದ್ದೇನು?
Image
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
Image
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
Image
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು

ಮತ್ತಷ್ಟು ಓದಿ: ಸಿಂಧೂ ಜಲ ಒಪ್ಪಂದ ರದ್ದು; ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ

ಈ ನೀರನ್ನು ಈ ಅಣೆಕಟ್ಟುಗಳು ನೀರನ್ನು ಹಿಡಿದಿಟ್ಟುಕೊಳ್ಳಲು ವಿನ್ಯಾಸಗೊಳಿಸದಿದ್ದರೂ, ಹರಿವಿನ ಸಮಯವನ್ನು ನಿಯಂತ್ರಿಸಬಹುದು, ಇದು ಪಾಕಿಸ್ತಾನದ ಚಳಿಗಾಲದ ಬೆಳೆ ಬಿತ್ತನೆ ಚಕ್ರದ ಮೇಲೆ, ಮುಖ್ಯವಾಗಿ ಗೋಧಿಯ ಮೇಲೆ, ಸ್ವಲ್ಪಮಟ್ಟಿಗೆ ಪರಿಣಾಮ ಬೀರುತ್ತದೆ.

ಪಾಕಿಸ್ತಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ಶಿಕ್ಷಿಸಲು, ಭಾರತವು ತನ್ನ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಬೇಕು ಮತ್ತು ನಿರ್ಮಾಣ ಹಂತದಲ್ಲಿರುವ ಜಲವಿದ್ಯುತ್ ಯೋಜನೆಗಳ ಕಾರ್ಯಗಳನ್ನು ವೇಗಗೊಳಿಸಬೇಕು. ನೀರನ್ನು ಬಳಸಿಕೊಳ್ಳಲು, ಭಾರತವು ಪಶ್ಚಿಮ ನದಿಗಳಲ್ಲಿ ಜಲವಿದ್ಯುತ್ ಮತ್ತು ನೀರಾವರಿ ಯೋಜನೆಗಳನ್ನು ತ್ವರಿತಗೊಳಿಸಬೇಕು, ಅದೇ ಸಮಯದಲ್ಲಿ ಪೂರ್ವ ನದಿಗಳಲ್ಲಿ ಸಂಗ್ರಹ ಮತ್ತು ತಿರುವು ಮೂಲಸೌಕರ್ಯವನ್ನು ಹೆಚ್ಚಿಸಬೇಕು.

ಭಾರತವು ಪ್ರತಿ ವರ್ಷ ಜುಲೈ 1 ರಿಂದ ಅಕ್ಟೋಬರ್ 10 ರವರೆಗಿನ ಮಾನ್ಸೂನ್ ಅವಧಿಯ ಪ್ರವಾಹ ಡೇಟಾವನ್ನು ಪಾಕಿಸ್ತಾನಕ್ಕೆ ತಿಳಿಸುತ್ತಿತ್ತು, ಇದರಿಂದಾಗಿ ನೆರೆಯ ದೇಶವು ಮುಂಚಿತವಾಗಿ ಪ್ರವಾಹ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಭಾರತ ಇನ್ನು ಮುಂದೆ ಅಂತಹ ಡೇಟಾವನ್ನು ಪಾಕಿಸ್ತಾನದೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:06 am, Thu, 1 May 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ