Kolar: ಮಂಡ್ಯ ಆಯ್ತು ಇದೀಗ ಕೋಲಾರದಲ್ಲೂ ಭುಗಿಲೆದ್ದ ಧ್ವಜ ದಂಗಲ್

| Updated By: ಗಂಗಾಧರ​ ಬ. ಸಾಬೋಜಿ

Updated on: Jan 31, 2024 | 3:08 PM

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಪ್ರಕರಣ ಸದ್ಯ ರಾಜ್ಯದೆಲ್ಲೆಡೆ ವ್ಯಾಪಿಸಿದೆ. ಇದೀಗ ಕೋಲಾರ ನಗರದ ಕ್ಲಾಕ್ ಟವರ್ ಮೇಲೆ ಇರುವ ಅರ್ಧ ಚಂದ್ರ, ನಕ್ಷತ್ರದ ಸಿಂಬಲ್ ತೆರವುಗೊಳಿಸುವಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಒತ್ತಾಯ ಶುರುವಾಗಿದೆ. ಆ ಮೂಲಕ ಮಂಡ್ಯ ಬಳಿಕ ಕೋಲಾರದಲ್ಲೂ ಧರ್ಮ ದಂಗಲ್ ಶುರುವಾಗಿದೆ. 

Kolar: ಮಂಡ್ಯ ಆಯ್ತು ಇದೀಗ ಕೋಲಾರದಲ್ಲೂ ಭುಗಿಲೆದ್ದ ಧ್ವಜ ದಂಗಲ್
ಕೋಲಾರ ಕ್ಲಾಕ್ ಟವರ್
Follow us on

ಕೋಲಾರ, ಜನವರಿ 31: ಮಂಡ್ಯ (Mandya) ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಪ್ರಕರಣದ ಕಿಡಿ ಇದೀಗ ಕೋಲಾರದಲ್ಲಿ ಹೊತ್ತಿಕೊಂಡಿದೆ. ನಗರದ ಕ್ಲಾಕ್ ಟವರ್ ಮೇಲೆ ಇರುವ ಅರ್ಧ ಚಂದ್ರ, ನಕ್ಷತ್ರದ ಸಿಂಬಲ್ ತೆರವುಗೊಳಿಸುವಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಒತ್ತಾಯ ಮಾಡಲಾಗುತ್ತಿದೆ. ಹೀಗಾಗಿ ಕೋಲಾರದಲ್ಲೂ ವಿವಾದಿತ ಸ್ಥಳದಲ್ಲಿ ಒಂದು ಧರ್ಮದ ಚಿಹ್ನೆ ತೆರವಿಗೆ ಒತ್ತಾಯ ಶುರುವಾಗಿದೆ. ಮಂಡ್ಯ ಆಯಿತು. ಕೋಲಾರದಲ್ಲಿ ಎಂದು ತೆರವು ಮಾಡುವುದು. ಕಾನೂನು ಎಲ್ಲರಿಗೂ ಒಂದೇ ಇರಬೇಕು ಎಂದು ಕ್ಲಾಕ್ ಟವರ್ ಪೋಸ್ಟ್ ಮಾಡಲಾಗಿದೆ.

ಕೋಲಾರ ನಗರದ ವಿವಾದಿತ ಕ್ಲಾಕ್ ಟವರ್​ನಲ್ಲಿ ಮುಸ್ಲಿಂ ಧರ್ಮದ ಚಿಹ್ನೆ ಹಾಕಿರುವ ಹಿನ್ನೆಲೆ ಕಾನೂನು ಎಲ್ಲರಿಗೂ ಒಂದೆ ಇದು ಸಾರ್ವಜನಿಕ ಆಸ್ತಿ ಯಾರಪ್ಪನದು ಅಲ್ಲ ಎಂದು ಪ್ರಶ್ನೆ ಮಾಡಲಾಗಿದೆ. ಆ ಮೂಲಕ ಮಂಡ್ಯ ಬಳಿಕ ಕೋಲಾರದಲ್ಲೂ ಧರ್ಮ ದಂಗಲ್ ಶುರುವಾಗಿದೆ.

ಬಿಬಿಎಂಪಿ ಧ್ವಜಸ್ತಂಭದಲ್ಲಿ ಹಸಿರು ಬಾವುಟ

ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್‌ನಲ್ಲಿನ ಬಿಬಿಎಂಪಿ ಧ್ವಜಸ್ತಂಭದಲ್ಲಿದ್ದ ಹಸಿರು ಬಾವುಟ ಹಾರಾಡುತ್ತಿರುವುದನ್ನು ವಿಕಾಸ್ ವಿಕ್ಕಿ ಎನ್ನುವರು ಟ್ವೀಟ್‌ ಮಾಡಿದ್ದರು. ಈ ಬಾವುಟ ಯಾವ ಧರ್ಮದ್ದು ಎಂದು ‘ಕಾಂಗ್ರೆಸ್​’ ನಾಯಕರು ಉತ್ತರಿಸಬೇಕು. ಹಸಿರು ಬಾವುಟ ತೆಗೆಸುವ ತಾಕತ್ ನಿಮಗೆ ಇಲ್ಲವಾ. ಹಿಂದೂ ಗ್ರಾಮಸ್ಥರ ಮೇಲೆ ಮಾತ್ರ ನಿಮ್ಮ ಅಟ್ಟಹಾಸವೇ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ಬೆಂಗಳೂರಿನ ಮತ್ತೊಂದು ಕಡೆ ಹಸಿರು ಧ್ವಜ ಹಾರಾಟ, ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು, ಚಾಂದಿನಿ ಚೌಕ್​ನ ಬಿಬಿಎಂಪಿ ಧ್ವಜಸ್ತಂಭದಲ್ಲಿದ್ದ ಹಸಿರು ಬಾವುಟ ತೆರವು ಮಾಡಿ ತ್ರಿವರ್ಣ ಧ್ವಜ ಹಾರಿಸಿದ್ದರು.

ಹನುಮಧ್ವಜ ತೆರವು ವಿರೋಧಿಸಿ ಕೇಸರಿಧ್ವಜ ಅಭಿಯಾನ

ಕೆರಗೋಡಿನಲ್ಲಿ ಹನುಮನ ಧ್ವಜ ತೆರವು ವಿವಾದ ಪ್ರಕರಣ ಹಿನ್ನೆಲೆ ಮಂಡ್ಯದಲ್ಲಿ ಹನುಮಧ್ವಜ ತೆರವು ವಿರೋಧಿಸಿ ಫೆ.2ರಿಂದ ಹನುಮಧ್ವಜ ಅಭಿಯಾನಕ್ಕೆ ಬಿಜೆಪಿ ನಿರ್ಧಾರ ಮಾಡಿದೆ. ಸ್ವಯಂಪ್ರೇರಿತರಾಗಿ ಕೆರಗೋಡಿನ ಗ್ರಾಮದ ಜನರು ಮನೆಗಳ ಮೇಲೆ ಕೇಸರಿಧ್ವಜ ಹಾರಿಸಿದ್ದಾರೆ. ಬಿಜೆಪಿ ಅಭಿಯಾನಕ್ಕೂ ಮೊದಲೇ ಕೇಸರಿಧ್ವಜ ಹಾರಿಸಲಾಗಿದೆ.

ಗ್ರಾಪಂ ಸದಸ್ಯ ಹೇಳಿದ್ದಿಷ್ಟು 

ಕೆರಗೋಡು ಕಾಂಗ್ರೆಸ್‌ ಬೆಂಬಲಿತ ಗ್ರಾಪಂ ಸದಸ್ಯ ಶಿವಾನಂದ ಪ್ರತಿಕ್ರಿಯಿಸಿದ್ದು, ಪಂಚಾಯಿತಿಗೆ ಮೊದಲು ಮನವಿ ಬಂತು. ಸರ್ವಾನುಮತದಿಂದ ಅದಕ್ಕೆ ಒಪ್ಪಿಗೆ ಕೊಟ್ಟೆವು. ಮೂರು ಸಭೆಯಲ್ಲಿ ಯಾವುದೇ ವಿರೋಧ ಬರಲಿಲ್ಲ.

ಇದನ್ನೂ ಓದಿ: ಕೆರಗೋಡು ಹನುಮ ಧ್ವಜಕ್ಕೆ ಅನುಮತಿ ಕೊಟ್ಟ ಗ್ರಾ.ಪಂ ನಡಾವಳಿ ಪುಸ್ತಕ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಧ್ವಜ ಹಾರಿಸಿದ ನಂತರ ಇಓ ಬಂದರು. ಪಂಚಾಯಿತಿಗೆ ಅಧಿಕಾರ ಇದೆ. ನಾವು ಸಭೆಯಲ್ಲಿ ಒಪ್ಪಿಗೆ ಕೊಟ್ಟಿದ್ದೇವೆ ಅಂತ ಹೇಳಿದೆವು. ಆ ದಿನವೇ ಪಂಚಾಯಿತಿ ವಜಾ ಮಾಡಬಹುದಿತ್ತು ಆದರೆ ಮಾಡಲಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:06 pm, Wed, 31 January 24