ಕೆರಗೋಡು ಹನುಮ ಧ್ವಜಕ್ಕೆ ಅನುಮತಿ ಕೊಟ್ಟ ಗ್ರಾ.ಪಂ ನಡಾವಳಿ ಪುಸ್ತಕ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮ ಪಂಚಾಯಿತಿಯಲ್ಲಿ ಜನವರಿ 25ರಂದು ನಡೆದ ಸಭೆಯಲ್ಲಿ ಚರ್ಚೆ ಮಾಡಿ ನಡಾವಳಿ ಬರೆಯಲಾಗಿತ್ತು. ಸಭೆಯಲ್ಲಿ 18 ಸದಸ್ಯರು ಹನುಮ ಧ್ವಜ ಹಾರಿಸಲು ಅನುಮತಿ ನೀಡಿದ್ದು, ನಡಾವಳಿ ಪುಸ್ತಕದಲ್ಲಿ ಉಲ್ಲೇಖಿಸಲಾಗಿತ್ತು. ಇದೀಗ ಏಕಾಏಕಿ ಗ್ರಾಮ ಪಂಚಾಯಿತಿ ಕಚೇರಿಯಿಂದ ಪುಸ್ತಕ ನಾಪತ್ತೆ ಆಗಿದೆ ಎಂಬ ವಂದತಿ ಹರಡಿತ್ತು. ಇದಕ್ಕೆ ತಾಲೂಕು ಪಂಚಾಯಿತಿ ಇಒ ವೀಣಾ ಸ್ಪಷ್ಟನೆ ನೀಡಿದ್ದಾರೆ.

ಕೆರಗೋಡು ಹನುಮ ಧ್ವಜಕ್ಕೆ ಅನುಮತಿ ಕೊಟ್ಟ ಗ್ರಾ.ಪಂ ನಡಾವಳಿ ಪುಸ್ತಕ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ತಾ.ಪಂ ಇಒ ವೀಣಾ
Follow us
ಪ್ರಶಾಂತ್​ ಬಿ.
| Updated By: ವಿವೇಕ ಬಿರಾದಾರ

Updated on:Jan 30, 2024 | 7:57 PM

ಮಂಡ್ಯ, ಜನವರಿ 30: ಕೆರಗೋಡಿನಲ್ಲಿ ಹನುಮ ಧ್ವಜ (Hanuman Flag) ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯ (Gram Panchayat) ನಡಾವಳಿ ಪುಸ್ತಕ ನಾಪತ್ತೆಯಾಗಿದೆ ಎಂಬ ವಂದತಿ ಹರಡಿದೆ. ಇದಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ವೀಣಾ ಅವರು ಸ್ಪಷ್ಟನೆ ನೀಡಿದ್ದಾರೆ. ಕೆರಗೋಡು ಗ್ರಾಮ ಪಂಚಾಯಿತಿ ಸಭೆಯ ನಡಾವಳಿ ಪುಸ್ತಕ ನಾಪತ್ತೆಯಾಗಿಲ್ಲ. ನಮ್ಮ ಸುಪರ್ದಿಗೆ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಂಚಾಯತ್ ರಾಜ್ ಆ್ಯಕ್ಟ್ 157 ಪ್ರಕಾರ ಇಒಗೆ ಅಧಿಕಾರವಿದೆ. ಗ್ರಾಮ ಪಂಚಾಯಿತಿಯ ಯಾವುದೇ ದಾಖಲೆ, ಆಸ್ತಿ ಪತ್ರ ಹಾಗೂ ಹಣಕಾಸು ಸೇರಿ ಯಾವುದೆ ದಾಖಲೆ ಸುಪರ್ದಿಗೆ ಪಡೆಯಬಹುದು. ಹೀಗಾಗಿ ನಡಾವಳಿ ಪುಸ್ತಕ ತಾ.ಪಂ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಸುರಕ್ಷಿತವಾಗಿ ಕಾಪಾಡುವ ದೃಷ್ಟಿಯಿಂದ ವಶದಲ್ಲಿಟ್ಟುಕೊಂಡಿದ್ದೇವೆ. ಇದನ್ನು ಯಾವುದೇ ರೀತಿ ದುರುಪಯೋಗಪಡಿಸಿಕೊಳ್ಳಲು ಆಗಲ್ಲ ಎಂದರು. ನನ್ನ ಮೇಲೆ ಯಾರ ಒತ್ತಡವೂ ಇಲ್ಲ, ಒತ್ತಡಕ್ಕೆ ಒಳಗಾಗುವ ಅಗತ್ಯವಿಲ್ಲ. ಮೇಲಧಿಕಾರಿಗಳ ಗಮನಕ್ಕೆ ತಂದು ನಡಾವಳಿ ಪುಸ್ತಕವನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರು.

ಪತ್ರ ನೀಡದೆ ನಡಾವಳಿ ಪುಸ್ತಕ ತೆಗೆದುಕೊಂಡು ಹೋದ ಇಒ

ನಡಾವಳಿ ಪುಸ್ತಕ ತೆಗೆದುಕೊಂಡು ಹೋದ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಇಒ ವೀಣಾ ಅವರಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಇಒ ವೀಣಾ “ಈ ಬಗ್ಗೆ ಯಾರ ಬಳಿಯೂ ಕೇಳಬೇಕಿಲ್ಲ, ಪತ್ರವೂ ಕೊಡಬೇಕಿಲ್ಲ. ನಡಾವಳಿ ಪುಸ್ತಕ ತಂದಿದ್ದೇನೆ, ನಮ್ಮ ಬಳಿ ಇದೆ. ನಮಗೆ ಅಧಿಕಾರವಿರುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೆರಗೋಡು ಗ್ರಾಮದಲ್ಲಿನ ಹನುಮ ಧ್ವಜ ತೆರವು ಪ್ರಕರಣ: ಗ್ರಾಮಸ್ಥರ ವಿರುದ್ಧ ಮತ್ತೆರಡು FIR ದಾಖಲು

ಏನಿದು ನಡಾವಳಿ ಪುಸ್ತಕ

ಧ್ವಜಸ್ತಂಭ ನಿರ್ಮಾಣ ಮತ್ತು ಬಾವುಟ ಹಾರಿಸುವ ವಿಚಾರವಾಗಿ ನೀಡಲಾಗಿದ್ದ ಅನುಮತಿ ಗ್ರಾಮ ಪಂಚಾಯತಿ​ ನಡಾವಳಿ ಪುಸ್ತಕದಲ್ಲಿದೆ. ಜನವರಿ 25ರಂದು ಸಭೆಯಲ್ಲಿ ಚರ್ಚೆ ಮಾಡಿ ನಡಾವಳಿ ಬರೆಯಲಾಗಿತ್ತು. ಸಭೆಯಲ್ಲಿ 18 ಸದಸ್ಯರು ಹನುಮ ಧ್ವಜ ಹಾರಿಸಲು ಅನುಮತಿ ನೀಡಿದ್ದು, ನಡಾವಳಿ ಪುಸ್ತಕದಲ್ಲಿ ಉಲ್ಲೇಖಿಸಲಾಗಿತ್ತು. ಇದೀಗ ಏಕಾಏಕಿ ಗ್ರಾಮ ಪಂಚಾಯಿತಿ ಕಚೇರಿಯಿಂದ ಪುಸ್ತಕ ನಾಪತ್ತೆ ಆಗಿದೆ ಎಂಬ ವಂದತಿ ಹರಡಿತ್ತು. ಇದಕ್ಕೆ ತಾಲೂಕು ಪಂಚಾಯಿತಿ ಇಒ ವೀಣಾ ಸ್ಪಷ್ಟನೆ ನೀಡಿದ್ದಾರೆ.

ನಾಡ ಧ್ವಜ, ರಾಷ್ಟ್ರಧ್ವಜ ಹಾರಿಸುವಂತೆ ಷರತ್ತು

ಟ್ರಸ್ಟ್‌ನವರಿಗೆ ನಾಡ ಧ್ವಜ, ರಾಷ್ಟ್ರಧ್ವಜ ಮಾತ್ರ ಹಾರಿಸುವಂತೆ ಷರತ್ತು ವಿಧಿಸಿ ಧ್ವಜಸ್ತಂಬ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಕೆರೆಗೋಡು ಗ್ರಾಮಸ್ಥರು ಕೂಡ ಅರ್ಜಿ ಸಲ್ಲಿಸಿದ್ದರು. ನಿರ್ಮಾಣವಾಗುತ್ತಿರುವ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಲು ಅನುಮತಿ ಕೇಳಿದ್ದರು. ಈ ಸಭೆಯಲ್ಲಿ 22 ಸದಸ್ಯರ ಪೈಕಿ 18 ಸದಸ್ಯರು ಸಹಮತ ನೀಡಿದ್ದರು. ಆದರೆ ಇದು ಮೌಖಿಕವಾಗಿ ಚರ್ಚೆಯಾಗಿತ್ತು ವಿನಃ ಯಾವುದೇ ಅಧಿಕೃತ ಆದೇಶ ಆಗಿರಲಿಲ್ಲ. ಆದರೆ ಗ್ರಾಮಸ್ಥರು ಎಲ್ಲರು ಸೇರಿ ನೂತನ ಧ್ವಜ ಸ್ತಂಭದಲ್ಲಿ ಹನುಮ ಧ್ವಜ ಹಾರಿಸಲು ತೀರ್ಮಾನಿಸಿದ್ದರು.

ರಾಮಲಲ್ಲಾ ಪ್ರತಿಷ್ಠಾಪನೆ ದಿನ ಹನುಮ ಧ್ವಜವನ್ನ ಹಾರಿಸಲಾಗಿತ್ತು. ಹನುಮ ಧ್ವಜ ಹಾರಿಸುತ್ತಿದ್ದಂತೆ ಪಂಚಾಯಿತಿಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಆನಂತರ ಮತ್ತೆ ಸಾಮಾನ್ಯ ಸಭೆ ಕರೆದು ಗ್ರಾಮ ಪಂಚಾಯತ್​ ಅಧಿಕಾರಿಗಳು ನಡಾವಳಿ ರಚಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪಿಡಿಎ, ಗ್ರಾಮ ಪಂಚಾಯ್ತಿಗೆ ಯಾವುದೇ ಬಾವುಟ ಹಾರಾಟಕ್ಕೆ ಅನುಮತಿ ನೀಡಲು ಅಧಿಕಾರ ಇಲ್ಲ ಎಂದಿದ್ದರು.

ಇದೇ ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕು ಅಂತ ಪಿಡಿಓ ಸಲಹೆ ನೀಡಿದ್ದರು. ಗ್ರಾಮ ಪಂಚಾಯ್ತಿ ಗೌರಿಶಂಕರ ಟ್ರಸ್ಟ್‌ಗೆ ದಿನಾಂಕ 19 ಜನವರಿಯಂದು ನೀಡಿದ್ದ ಅನುಮತಿ ಬಗ್ಗೆಯೂ ಪಿಡಿಒ ತಕರಾರು ಎತ್ತಿದ್ದರು. ಟ್ರಸ್ಟ್​ನಿಂದ ಷರತ್ತು ಉಲ್ಲಂಘನೆಯಾಗಿದೆ ಎಂದು ಹೇಳಿದ್ದರು. ಇದಾದ ನಂತರವೇ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಹನುಮ ಧ್ವಜ ತೆರವುಗೊಳಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:43 pm, Tue, 30 January 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ