ಕೋಲಾರದ ವಿಸ್ಟ್ರಾನ್​ ಕಂಪನಿಗೆ ಮರುನೇಮಕ: ಪೊಲೀಸ್ ಠಾಣೆಯಲ್ಲಿ ಅಭ್ಯರ್ಥಿಗಳ ದಂಡು!

ವಿಸ್ಟ್ರಾನ್​ ಕಂಪನಿಯಲ್ಲಿ ಮತ್ತೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈ ಹಿಂದೆ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಸಂಸ್ಥೆ ಮತ್ತೆ ಕೆಲಸಕ್ಕೆ ಕರೆದಿದ್ದು, ಪೊಲೀಸರಿಂದ ನಿರಪೇಕ್ಷಣಾ ಪತ್ರ (ಎನ್​ಒಸಿ) ತರುವುದನ್ನು ಕಡ್ಡಾಯಗೊಳಿಸಲಾಗಿದೆ.

ಕೋಲಾರದ ವಿಸ್ಟ್ರಾನ್​ ಕಂಪನಿಗೆ ಮರುನೇಮಕ: ಪೊಲೀಸ್ ಠಾಣೆಯಲ್ಲಿ ಅಭ್ಯರ್ಥಿಗಳ ದಂಡು!
ವಿಸ್ಟ್ರಾನ್​ ಸಂಸ್ಥೆ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: ಸಾಧು ಶ್ರೀನಾಥ್​

Updated on:Jan 18, 2021 | 3:45 PM

ಕೋಲಾರ: ವೇತನ ಸಮಸ್ಯೆಯಿಂದಾಗಿ ಕಾರ್ಮಿಕರು ಸಿಟ್ಟಿಗೆದ್ದು ದಾಂದಲೆ ನಡೆಸಿದ ಕಾರಣಕ್ಕೆ ದೇಶವ್ಯಾಪಿ ಸುದ್ದಿಯಾಗಿದ್ದ ವಿಸ್ಟ್ರಾನ್​ ಕಂಪನಿಯಲ್ಲಿ ಮತ್ತೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈ ಹಿಂದೆ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಸಂಸ್ಥೆ ಮತ್ತೆ ಕೆಲಸಕ್ಕೆ ಕರೆದಿದ್ದು, ಪೊಲೀಸರಿಂದ ನಿರಪೇಕ್ಷಣಾ ಪತ್ರ (ಎನ್​ಒಸಿ) ತರುವುದನ್ನು ಕಡ್ಡಾಯಗೊಳಿಸಲಾಗಿದೆ.

ಕೋಲಾರ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಅಭ್ಯರ್ಥಿಗಳ ದಂಡು ನೆರೆದಿದೆ. ಕಂಪನಿಯಿಂದ ಬಂದಿರುವ ಎಸ್​ಎಂಎಸ್ ತೋರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರ ಜೊತೆಗೆ ಆಧಾರ್​ ಕಾರ್ಡ್​, ಪಾನ್​ಕಾರ್ಡ್​ನ ಮೂಲ ಪ್ರತಿಗಳನ್ನು ತರಬೇಕು ಎಂದು ಸೂಚಿಸಲಾಗಿದೆ. ಸಿಬ್ಬಂದಿ ನೆರವಿನೊಂದಿಗೆ ಸಬ್​ ಇನ್​ಸ್ಪೆಕ್ಟರ್ ಕಿರಣ್​ ಸ್ವತಃ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

*Conditions Apply ! ಏನವು? ಪ್ರತಿ ಅಭ್ಯರ್ಥಿಯೂ ತಮ್ಮ ಪರವಾಗಿ ಸಾಕ್ಷಿ ಹಾಕಲು ತಮ್ಮ ಸಂಬಂಧಿಗಳಲ್ಲದ ಇಬ್ಬರು ಸ್ವಗ್ರಾಮ ನಿವಾಸಿಗಳನ್ನು ಕರೆತರಬೇಕು ಎಂದು ತಿಳಿಸಲಾಗಿದೆ. ಅಭ್ಯರ್ಥಿಗಳ ಹಿನ್ನೆಲೆಯನ್ನು ಕೂಲಂಕಶವಾಗಿ ಪರಿಶೀಲಿಸಿದ ನಂತರವಷ್ಟೇ ನಿರಪೇಕ್ಷಣಾ ಪತ್ರ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಠಾಣೆ ಆವರಣದಲ್ಲಿ ಟಿವಿ9 ಪ್ರತಿನಿಧಿಯೊಂದಿಗೆ ಮಾತನಾಡಿದ ಅಭ್ಯರ್ಥಿ ಗೀತಾ, ‘ಕಾರ್ಖಾನೆಯಲ್ಲಿ ದಾಂದಲೆ ನಡೆಸಿ, ಆಸ್ತಿಪಾಸ್ತಿ ಹಾನಿ ಮಾಡಿದವರಿಗೆ ಕೆಲಸ ಕೊಡದಿದ್ದರೆ ಒಳ್ಳೆಯದು. ಕೋಲಾರ ಜಿಲ್ಲೆಗೆ ಒಂದು ಬಹುರಾಷ್ಟ್ರೀಯ ಕಂಪನಿ ಬಂದಿತ್ತು ಅನ್ನೋದು ಹೆಮ್ಮೆಯ ವಿಷಯವಾಗಿತ್ತು. ಹಳ್ಳಿಗಳಲ್ಲಿರುವ ಹಲವರಿಗೆ ಕೆಲಸ ಸಿಕ್ಕಿತ್ತು’ ಎಂದು ಹೇಳಿದರು.

ಮತ್ತೋರ್ವ ಅಭ್ಯರ್ಥಿ ವಿಜಯ್ ಮಾತನಾಡಿ, ‘ಗಲಾಟೆ ಆದ ಮೇಲೆ ಸಂಬಳದ ವಿಚಾರ ಇತ್ಯರ್ಥಪಡಿಸಿದ್ದಾರೆ. ನಮಗೆ ಮತ್ತೊಮ್ಮೆ ಕೆಲಸ ಕೊಡುವುದಾಗಿ ಹೇಳಿದ್ದಾರೆ. ಮತ್ತೆ ಕೆಲಸ ಶುರು ಆಗುವ ದಿನಾಂಕ ತಿಳಿಸಿಲ್ಲ. ನಮ್ಮದಲ್ಲದ ತಪ್ಪಿಗೆ ನಾವು ಮನೆಯಲ್ಲಿ ಕುಳಿತುಕೊಳ್ಳುವಂತೆ ಆಯಿತು. ಇದಕ್ಕಾಗಿ ಸಂಸ್ಥೆ ನಮಗೆ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.

ಗೀತಾ ಮತ್ತು ವಿಜಯ್

ಕೋಲಾರ ಗ್ರಾಮಾಂತರ ಠಾಣೆಯಲ್ಲಿ ದಾಖಲೆ ಪರಿಶೀಲನೆ

ಪೊಲೀಸ್ ಠಾಣೆ ಎದುರು ಅಭ್ಯರ್ಥಿಗಳ ಸಾಲು

Wistron iPhone plant violence ತಪ್ಪು ಎರಡು ಕಡೆಯಿಂದಲೂ ಆಗಿದೆ, ಆದರೆ ಯಾರದೇ ಉದ್ಯೋಗಕ್ಕೂ ಚ್ಯುತಿ ಇಲ್ಲ

ವಿಸ್ಟ್ರಾನ್​ ಸಂಸ್ಥೆ ಪುನಾರಂಭಕ್ಕೆ ಭರದ ಸಿದ್ಧತೆ.. ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಮತ್ತೆ ಕೆಲಸ ಸಿಗುವ ನಿರೀಕ್ಷೆ

ಕಾರ್ಮಿಕರ ಗಲಭೆ ಸಂಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ: ವಿಸ್ಟ್ರಾನ್​ ಸ್ಪಷ್ಟನೆ

Published On - 3:13 pm, Mon, 18 January 21