ಕೋಲಾರ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದವರಿಗೆ ಕೊರೊನಾ; ಈವರೆಗೆ 63 ಪೊಲೀಸರಿಗೆ ಸೋಂಕು ದೃಢ

ಕೆಲ ಪೊಲೀಸರ ಕೊವಿಡ್ ಟೆಸ್ಟ್ ರಿಪೋರ್ಟ್​ ಬರಬೇಕಿದ್ದು, ಜಿಲ್ಲೆಯಲ್ಲಿ ಆತಂಕ ಎದುರಾಗಿದೆ. ನಿನ್ನೆಯವರೆಗೂ ಒಟ್ಟು 32 ಜನ ಪೊಲೀಸರಲ್ಲಿ ಸೋಂಕು ಕಾಣಿಸಿಕೊಂಡಿತ್ತು, ಇಂದು ಹೊಸದಾಗಿ 31 ಜನ ಪೊಲೀಸರಿಗೆ ಸೋಂಕು ಪತ್ತೆಯಾಗಿದೆ.

ಕೋಲಾರ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದವರಿಗೆ ಕೊರೊನಾ; ಈವರೆಗೆ 63 ಪೊಲೀಸರಿಗೆ ಸೋಂಕು ದೃಢ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on:Jan 16, 2022 | 10:25 PM

ಕೋಲಾರ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ (Mekedatu  padayatra) ಸಂದರ್ಭದಲ್ಲಿ ಕೋಲಾರ ಜಿಲ್ಲೆಯಿಂದ ಭದ್ರತೆಗಾಗಿ 160 ಪೊಲೀಸರು ರಾಮನಗರಕ್ಕೆ ತೆರಳಿದ್ದರು. ಈ ಪೈಕಿ ಈವರೆಗೆ 63 ಪೊಲೀಸರಿಗೆ (Police) ಕೊರೊನಾ ಪಾಸಿಟಿವ್ ಬಂದಿದೆ. ಇನ್ನು ಕೆಲ ಪೊಲೀಸರ ಕೊವಿಡ್ (covid 19) ಟೆಸ್ಟ್ ರಿಪೋರ್ಟ್​ ಬರಬೇಕಿದ್ದು, ಜಿಲ್ಲೆಯಲ್ಲಿ ಆತಂಕ ಎದುರಾಗಿದೆ. ನಿನ್ನೆಯವರೆಗೂ ಒಟ್ಟು 32 ಜನ ಪೊಲೀಸರಲ್ಲಿ ಸೋಂಕು ಕಾಣಿಸಿಕೊಂಡಿತ್ತು, ಇಂದು ಹೊಸದಾಗಿ 31 ಜನ ಪೊಲೀಸರಿಗೆ ಸೋಂಕು ಪತ್ತೆಯಾಗಿದೆ.

ಚಾಮರಾಜನಗರ: ಕೊಳ್ಳೇಗಾಲ ಟೌನ್​ ಠಾಣೆಯ 9 ಪೊಲೀಸರಿಗೆ ಕೊರೊನಾ

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಟೌನ್ ಪೊಲೀಸ್​ ಠಾಣೆಯ 9 ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ವಾರ ಪಿಎಸ್​ಐ, ಕಾನ್ಸ್​ಟೇಬಲ್​ಗೆ ಸೋಂಕು ತಗುಲಿತ್ತು. ಹೀಗಾಗಿ 45 ಸಿಬ್ಬಂದಿಗಳಿಗೆ ಆರ್​ಟಿಪಿಸಿಆರ್​ ಟೆಸ್ಟ್ ಮಾಡಿಸಲಾಗಿತ್ತು. ಸದ್ಯ 45 ಪೊಲೀಸರ ಪೈಕಿ 9 ಪೊಲೀಸರಿಗೆ ಕೊರೊನಾ ಪಾಸಿಟಿವ್​ ಬಂದಿದೆ. ಕೊಳ್ಳೇಗಾಲ ಟೌನ್ ಪೊಲೀಸ್ ಠಾಣೆಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

ವಿಜಯಪುರ: ಜಿಲ್ಲೆಯಲ್ಲಿ ಇಂದು 102 ಜನರಿಗೆ ಕೊರೊನಾ ದೃಢ

ವಿಜಯಪುರ ಜಿಲ್ಲೆಯಲ್ಲಿಂದು 102 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಪಾಸಿಟಿವ್ ಪೀಡಿತರ ಸಂಖ್ಯೆ 436ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ 25 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಂ ಐಸೋಲೇಷನ್​ನಲ್ಲಿ 411 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ 27 ರೋಗಿಗಳು ಬಿಡುಗಡೆಯಾಗಿದ್ದಾರೆ. ಇನ್ನೂ 1,537 ಜನರ ಗಂಟಲು ದ್ರವ ಇಂದು ಸಂಗ್ರಹಿಲಾಗಿದೆ. 1,360 ಜನರ ಗಂಟಲು ದ್ರವ ವರದಿಗೆ ಕಾಯಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಆನೇಕಲ್: ಎಎಂಸಿ ಕಾಲೇಜಿನ 42 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಇಂಜಿನಿಯರ್​ ಕಾಲೇಜಿನ 23 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್​ ಆಗಿದೆ. ವಿದ್ಯಾರ್ಥಿಗಳ ಪ್ರಾಥಮಿಕ ಸಂಪರ್ಕದಲ್ಲಿರುವ 30 ಜನರಿಗೆ ಈಗಾಗಲೇ ಕೊವಿಡ್​ ಟೆಸ್ಟ್​ ಮಾಡಿಸಲಾಗಿದೆ. ಆರೋಗ್ಯ ಅಧಿಕಾರಿಗಳಿಂದ ಕಾಲೇಜಿನಲ್ಲಿ ತಪಾಸಣೆ ನಡೆಸಿದ್ದು, ಇಂದು ಸಂಜೆಯ ವೇಳೆಗೆ ಇನ್ನಷ್ಟು ಪಾಸಿಟಿವ್ ಕೇಸ್ ಪತ್ತೆ ಆಗುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಕಾಲೇಜಿನಲ್ಲಿರುವ ಹಾಸ್ಟೆಲ್​ನಲ್ಲಿಯು ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳ ಸ್ವಾಬ್ ಟೆಸ್ಟ್ ಮಾಡಲಾಗಿದೆ. ಎರಡು ಹಾಸ್ಟೆಲುಗಳನ್ನು ಕಂಟೋನ್ಮೆಂಟ್ ಮಾಡಲಾಗಿದೆ.

ಬೆಂಗಳೂರು: ಇಂದು ಒಂದೇ ದಿನ 113 ಜನ ಪೊಲೀಸರಿಗೆ ಪಾಸಿಟಿವ್

ಪೊಲೀಸ್ ಇಲಾಖೆಯಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಇಂದು ಒಂದೇ ದಿನ 113 ಜನ ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದೆ. ನಗರದಲ್ಲಿ ಈ ವರೆಗೆ 728 ಜನ ಪೊಲೀಸರಿಗೆ ಕೊರೊನಾ ಪಾಸಿಟಿವ್ ಆಗಿದೆ. ಇದುವರೆಗೆ 38 ಜನ ಸಿಬ್ಬಂದಿ ಮಾತ್ರ ಕೊವಿಡ್​ನಿಂದ ಗುಣಮುಖರಾಗಿದ್ದಾರೆ.

ಮೈಸೂರು: ಜೆಡಿಎಸ್​ ಶಾಸಕ ಜಿ.ಟಿ.ದೇವೇಗೌಡಗೆ ಕೊರೊನಾ ಪಾಸಿಟಿವ್​

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಕೊರೊನಾ ಪಾಸಿಟಿವ್​ ಆಗಿದೆ. ಟ್ವೀಟ್​ ಮೂಲಕ ಮಾಜಿ ಸಚಿವ ಜಿ.ಟಿ.ದೇವೇಗೌಡ ಈ ಕುರಿತು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಜಿಟಿಡಿ, ತಮ್ಮ ಸಂಪರ್ಕಕ್ಕೆ ಬಂದವರು ಕೊವಿಡ್​ ಟೆಸ್ಟ್​ ಮಾಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ 13 ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆ, ಆನೇಕಲ್ ಸುತ್ತಮುತ್ತ ಸೋಂಕು ಉಲ್ಬಣ

ಕೊರೊನಾ ಶಾಶ್ವತವಾಗಿ ಮುಂದುವರೆಯುವುದಿಲ್ಲ, ಅದರ ಅಂತ್ಯ ಹತ್ತಿರದಲ್ಲೇ ಇದೆ: ತಜ್ಞರ ಹೇಳಿಕೆ

Published On - 4:31 pm, Sun, 16 January 22

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ