COVID pandemic can’t go on forever, will end soon: Expert
Read @ANI Story | https://t.co/c11Jq41xu1#COVID19 #COVAXIN pic.twitter.com/wELlAauCJL
— ANI Digital (@ani_digital) January 15, 2022
ಕೊರೊನಾ ವೈರಸ್ಅನ್ನು ಚೆಸ್ಗೆ ಹೋಲಿಸಿದ್ದನ್ನು ಅವರು ಮತ್ತಷ್ಟು ವಿವರಿಸಿದ್ದಾರೆ. ವೈರಸ್ ರೂಪಾಂತರಗಳನ್ನು ಹೊಂದಿ ಪ್ರಸರಣವಾಗಲು ನೋಡುತ್ತದೆ. ಈ ಮೂಲಕ ಶಾಶ್ವತವಾಗಿ ಇರಲು ಅದು ಪ್ರಯತ್ನಿಸುತ್ತಿದೆ. ಆದ್ದರಿಂದ ಇದು ಮನುಷ್ಯ ಹಾಗೂ ವೈರಸ್ ನಡುವಿನ ಚೆಸ್ ಆಟದಂತೆ. ಇದರಲ್ಲಿ ಮನುಷ್ಯನ ಸಣ್ಣ ನಡೆಗಳೆಂದರೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ದೈಹಿಕ ಅಂತರ. ವೈರಸ್ ವಿರುದ್ಧ ದೊಡ್ಡ ಅಸ್ತ್ರವೆಂದರೆ ಲಸಿಕೆ, ರೋಗನಿರೋಧಕ ಪ್ರತಿಕಾಯಗಳು’’ ಎಂದಿದ್ದಾರೆ ಡಾ.ಕುತುಬ್ ಮಹಮೂದ್.
ಭಾರತವು ವರ್ಷದೊಳಗೆ ಶೇ.60 ರಷ್ಟು ಲಸಿಕೆ ನೀಡಕೆ ಪೂರ್ತಿಗೊಳಿಸಿದ್ದಕ್ಕೆ ದೇಶವನ್ನು ಡಾ.ಕುತುಬ್ ಅಭಿನಂದಿಸಿದ್ದಾರೆ. ‘‘ಇದು ದೇಶದ ಮತ್ತು ಭಾರತದಲ್ಲಿನ ಲಸಿಕೆ ತಯಾರಕರ ದೊಡ್ಡ ಸಾಧನೆಯಾಗಿದೆ. ಭಾರತೀಯ ಲಸಿಕೆಗಳನ್ನು ಜಾಗತಿಕವಾಗಿ ಬಳಸಲಾಗುತ್ತದೆ. 12 ತಿಂಗಳುಗಳಲ್ಲಿ ನಾವು ಸುಮಾರು 60 ಪ್ರತಿಶತದಷ್ಟು ವ್ಯಾಕ್ಸಿನೇಷನ್ ಅನ್ನು ಸಾಧಿಸಿದ್ದೇವೆ. ಇದು ಭಾರತ ಸರ್ಕಾರ, ಆರೋಗ್ಯ ಸಚಿವಾಲಯ ಮತ್ತು ಲಸಿಕೆ ತಯಾರಕರ ಒಂದು ದೊಡ್ಡ ಸಾಧನೆಯಾಗಿದೆ’’ ಎಂದು ವೈರಾಲಜಿಸ್ಟ್ ಆಗಿರುವ ಡಾ.ಕುತುಬ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ರೂಪಾಂತರ ಹೊಂದುವುದರಲ್ಲಿ ಆಶ್ಚರ್ಯವಿಲ್ಲ ಎಂದಿರುವ ಅವರು, ಲಸಿಕೆಯ ಮೂಲಕ ಅವನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ. ಭಾರತ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ರೂಪಾಂತರವಲ್ಲದ ಮೂಲ ಸೋಂಕೇ ಮತ್ತೆ ಹರಡುತ್ತಿರುವ ಕುರಿತು ಉತ್ತರಿಸಿರುವ ಕುತುಬ್, ‘ಕೆಲವು ಸಂದರ್ಭಗಳಲ್ಲಿ ಮರು ಸೋಂಕು ಉಂಟಾಗುತ್ತದೆ. ಅದನ್ನು ಬೂಸ್ಟರ್ ಡೋಸ್ನಿಂದ ಎದುರಿಸಬಹುದು’ ಎಂದಿದ್ದಾರೆ.
ಭಾರತ್ ಬಯೋಟೆಕ್ ತಯಾರಿಸಿರುವ ಕೊವ್ಯಾಕ್ಸಿನ್ನ ಬೂಸ್ಟರ್ ಡೋಸ್ ಒಮಿಕ್ರಾನ್ ವಿರುದ್ಧ 90 ಪ್ರತಿಶತ ಪರಿಣಾಮಕಾರಿ ಎಂದು ಡಾ.ಕುತುಬ್ ಹೇಳಿದ್ದಾರೆ. ಅಲ್ಲದೇ ಅದು ತಯಾರಿಸಿರುವ ಮಕ್ಕಳ ಲಸಿಕೆ ಎರಡು ವರ್ಷದ ಮಕ್ಕಳಲ್ಲೂ ಪರಿಣಾಮಕಾರಿ ಎಂದಿದ್ದಾರೆ. ಕೊವ್ಯಾಕ್ಸಿನ್ ಪರಿಣಾಮಕಾರಿ ಲಸಿಕೆ ತಯಾರಿಸುತ್ತಿದ್ದು, ಭಾರತದಿಂದ ಭಾರತದಲ್ಲೇ ತಯಾರಿಸಲಾಗಿದೆ ಎಂದು ಡಾ.ಕುತುಬ್ ಹೇಳಿದ್ದಾರೆ.
ಇದನ್ನೂ ಓದಿ:
ರಾಜ್ಯದಲ್ಲಿ ನೂತನ ಸ್ಟಾರ್ಟ್ ಅಪ್ ಪಾಲಿಸಿ ತಂದಿದ್ದೇವೆ: ಸಚಿವ ಡಾ.ಅಶ್ವತ್ಥ್ ನಾರಾಯಣ