ಬೆಂಗಳೂರು: ಪ್ರಧಾನಿ ಮೋದಿ ಕರ್ನಾಟಕದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸ್ಟಾರ್ಟ್ ಅಪ್ (Start up) ರಾಜಧಾನಿ ಕರ್ನಾಟಕ ಎಂದು ಪ್ರಶಂಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ (Narendra Modi) ಇಂದು ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನ ಎಂದು ಘೋಷಿಸಿದ್ದಾರೆ. ಮುಖ್ಯವಾಗಿ ಸ್ನೇಹಮಯವಾಗಿ ನಡೆಸಬೇಕಾಗಿರುವ ಇಲಾಖೆ ಐಟಿಬಿಟಿ. ರಾಜ್ಯಕ್ಕೆ 2020-21ರಲ್ಲಿ 1.60 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗಿದೆ. 46 ಸ್ಟಾರ್ಟ್ ಅಪ್‌ಗಳ ಪೈಕಿ ರಾಜ್ಯದ 13 ಕಂಪನಿಗೆ ಬಹುಮಾನ ನೀಡಲಾಗಿದೆ. 75 ಸ್ಟಾರ್ಟ್ ಅಪ್‌ಗಳಿಗೆ ಅಮೃತ ಯೋಜನೆಯಡಿ ಫಂಡ್ ನೀಡಲಾಗಿದೆ. ಈ ವರ್ಷ 200 ಸ್ಟಾರ್ಟ್ ಅಪ್ ಕಂಪನಿಗಳಿಗೆ ಸೀಡ್ ಫಂಡ್ ಕೊಟ್ಟಿದ್ದೇವೆ. 50 ಲಕ್ಷ ರೂಪಾಯಿವರೆಗೆ ಸೀಡ್ ಫಂಡ್ ಕೊಡುತ್ತೇವೆ ಎಂದು ವಿಧಾನಸೌಧದಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ (CN Ashwath Narayan) ಹೇಳಿಕೆ ನೀಡಿದ್ದಾರೆ.
ಅಮೇರಿಕಾ, ಚೈನಾ ಬಳಿಕ ಅತಿ ಹೆಚ್ಚಿನ ಸ್ಟಾರ್ಟ್ ಅಪ್ ಯುನಿಕಾರ್ನ್ ಇರೋದು ಭಾರತದಲ್ಲಿ. ರಾಜ್ಯದಲ್ಲಿ ಕೂಡ ಉತ್ತಮ ತಂತ್ರಜ್ಞಾನದ ಆವಿಷ್ಕಾರಗಳು ಆಗುತ್ತಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ರಾಜ್ಯದಲ್ಲಿ ನೂತನ ಸ್ಟಾರ್ಟ್ ಅಪ್ ಪಾಲಿಸಿ ತಂದಿದ್ದೇವೆ. ಸ್ಟಾರ್ಟ್ ಅಪ್ ಕ್ಯಾಪಿಟಲ್ ಬೆಳೆಸಲು ಪ್ರಯತ್ನ ಕೂಡ ನಡೆಯುತ್ತಿದೆ. ಇದರಿಂದ ಕರ್ನಾಟಕ ಭರವಸೆಯ ರಾಜ್ಯವಾಗಿ ಹೊರಹೊಮ್ಮಲಿದೆ. ಮುಂದಿನ ರಾಷ್ಟ್ರೀಯ ಯುವ ದಿನಾಚರಣೆ ವೇಳೆಗೆ ಮತ್ತಷ್ಟು ಅಭಿವೃದ್ಧಿ ಸಾಧ್ಯ ಎಂದು ಸಚಿವ ಡಾ.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಅತಿಥಿ ಉಪನ್ಯಾಸಕರ ಮುಂದುವರಿದ ಪ್ರತಿಭಟನೆ ವಿಚಾರ 8 ಗಂಟೆ ಮಾತ್ರ ಪಾಠ ಮಾಡುತ್ತಿದ್ದವರಿಗೆ ಇನ್ನಷ್ಟು ಅವಕಾಶ ಮಾಡಿಕೊಡುತ್ತಿದ್ದೇವೆ. 13 ಸಾವಿರ ಜನರ ಪೈಕಿ ಕೇವಲ 4.5 ಸಾವಿರ ಮಂದಿ ಮಾತ್ರ ಇದರಲ್ಲಿ ಅರ್ಹತೆ ಹೊಂದಿದ್ದಾರೆ. 9.5 ಸಾವಿರಕ್ಕಿಂತ ಹೆಚ್ಚು ಜನ ಅತಿಥಿ ಉಪನ್ಯಾಸಕರು ನೇಮಕ ಆಗುವ ಅವಕಾಶ ಇದೆ. ಯುಜಿಸಿ ಎಲಿಜಿಬಿಲಿಟಿ ಇಲ್ಲದವರಿಗೂ ಕೂಡ ಅವಕಾಶ ಕೊಡುತ್ತಿದ್ದೇವೆ. ಇನ್ನೂ ಎರಡರಿಂದ ಮೂರು ಪಟ್ಟು ಸಂಬಳ ಹೆಚ್ಚಾಗಿದೆ. ಇನ್ನೂ ಸಮಾಧಾನ ಇಲ್ಲ ಅಂದರೆ ಹೇಗೆ? ಸೋಮವಾರದಿಂದ ಪೋರ್ಟಲ್ ಓಪನ್ ಆಗುತ್ತಿದೆ. ಅತಿಥಿ ಉಪನ್ಯಾಸಕರು ಅರ್ಜಿ ಹಾಕಿಕೊಳ್ಳಬಹುದು. ಕೆಲವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇನ್ಯಾವುದಕ್ಕೂ ಕೂಡ ನಾವು ಮಣಿಯುವುದಿಲ್ಲ ಎಂದು ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಬಳಿಕ ಪಾದಯಾತ್ರೆ ಬಳಿಕ ಡಿಕೆಶಿಯನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಡಾ.ಅಶ್ವತ್ಥ ನಾರಾಯಣ ಅವರು ಮಾತನಾಡಿದ್ದು, ಡಿ.ಕೆ. ಶಿವಕುಮಾರ್ ಆಗಲಿ ಯಾರೇ ಆಗಲಿ ಕಾನೂನನ್ನು ಗೌರವಿಸಬೇಕು. ಮೊದಲೇ ಗುಂಡು ಹೊಡೆಯೋದು, ಏನು ಮಾಡಿದರು ಜಯಿಸಿಕೊಳ್ಳುತೀವಿ ಎನ್ನುವುದು ಸರಿ ಇಲ್ಲ. ಕಾನೂನಿನ ಅಡಿಯಲ್ಲೇ ಎಲ್ಲರೂ ಬದುಕಿ ಬಾಳಬೇಕು. ಹಲವಾರು ಸ್ಥಾನ ಅಲಂಕರಿಸಿದ ಡಿಕೆಶಿ ಇಂಥ ಬೇಜಾವ್ದಾರಿ ಹೇಳಿಕೆಗಳನ್ನು ಕೊಡಬಾರದು. ಎಲ್ಲರಿಗೂ ಕೂಡ ಒಂದೇ ಕಾನೂನು ಅನ್ವಯ ಆಗುತ್ತದೆ ಎಂದು ಹೇಳಿದ್ದಾರೆ.
ಸಾಮಾನ್ಯ ಜನರಿಗೆ ಒಂದು ಕಾನೂನು, ಡಿ.ಕೆ.ಶಿವಕುಮಾರ್ಗೆ ಒಂದು ಕಾನೂನಾ? ಡಿ.ಕೆ.ಶಿವಕುಮಾರ್ಗೆ ಪ್ರತ್ಯೇಕ ಕಾನೂನು ಮಾಡುವುದಕ್ಕೆ ಆಗುತ್ತಾ? ಅವರ ಭಾಗದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ. ಆದರೆ ಹೇಗೆ ಸಾಮಾನ್ಯ ಜನರ ದ್ವನಿ ಧ್ವಂಸ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಂಥ ಹೇಳಿಕೆಗಳು ಸೂಕ್ತವಲ್ಲ. ಡಿಕೆಶಿ ಇಂಥ ಹೇಳಿಕೆಗಳಿಂದ ಆಚೆ ಬರಬೇಕು. ಇಂಥ ಹೇಳಿಕೆ ಕೊಡುವುದನ್ನು ಡಿಕೆಶಿ ನಿಲ್ಲಿಸಬೇಕು ಎಂದು ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಇದನ್ನೂ ಓದಿ: ನವೋದ್ಯಮಗಳು ದೇಶದ ಬೆನ್ನೆಲುಬಾಗುತ್ತಿವೆ, ಜ.16ರಂದು ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನ ಆಚರಣೆ: ಪ್ರಧಾನಿ ಮೋದಿ
ಗಣರಾಜ್ಯೋತ್ಸವ ದಿನಾಚರಣೆಗೆ ಕರ್ನಾಟಕದ ಸ್ತಬ್ದಚಿತ್ರ ಆಯ್ಕೆ; ಟ್ವೀಟ್ ಮೂಲಕ ಸಂತಸ ಹಂಚಿಕೊಂಡ ಸಿಎಂ ಬೊಮ್ಮಾಯಿ