ಈಗ ಮದುವೆಗಳ ಸೀಸನ್ ಆರಂಭವಾಗಿದೆ. 3-4 ತಿಂಗಳು ಮುಗಿದರೆ ಮತ್ತೆ ಯಾರೂ ಬುಕ್ ಮಾಡಲ್ಲ. ದಯವಿಟ್ಟು ಶೇಕಡಾ 50:50 ರೂಲ್ಸ್‌ಗೆ ಅವಕಾಶ ನೀಡಿ ಎಂದು ಮ್ಯಾರೇಜ್ ಹಾಲ್ಸ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ರೆಡ್ಡಿ ರಾಜ್ಯ ಸರ್ಕಾರವನ್ನು ಕೇಳಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೋಂ ಕ್ವಾರಂಟೈನ್‌ನಲ್ಲಿ ಇರುವ ಹಿನ್ನೆಲೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ಗೆ ಮನವಿ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮುಂದಿನ ವಾರದಿಂದ ವೀಕೆಂಡ್ ಕರ್ಪ್ಯೂ ವಿಧಿಸಬಾರದು: ಕಲಬುರಗಿ ಹೋಟೆಲ್ ಮಾಲೀಕರ ಸಂಘದ ಮನವಿ
ಮುಂದಿನವಾರದಿಂದ ವೀಕೆಂಡ್ ಕರ್ಪ್ಯೂ ಪಾಲನೆ ಮಾಡಲು ಆಗಲ್ಲ. ಕನಿಷ್ಟ 50:50 ರೂಲ್ಸ್ ನಲ್ಲಿ ನಮಗೆ ಅವಕಾಶ ನೀಡಿ. ಎಲ್ಲಾ ಹೋಟೆಲ್ ಗಳಲ್ಲಿ ಪಾರ್ಸಲ್ ಹೋಗೋದಿಲ್ಲ. ಹೀಗಾಗಿ ಮುಂದಿನ ವಾರದಿಂದ ವೀಕೆಂಡ್ ಕರ್ಪ್ಯೂ ವಿಧಿಸಬಾರದು ಎಂದು ಕಲಬುರಗಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನರಸಿಂಹ್ ಮೆಂಡನ್ ಹೇಳಿಕೆ ನೀಡಿದ್ದಾರೆ. ನಾವು ಜೀವನ ನಡೆಸಲು ಸಾಕಷ್ಟು ಕಷ್ಟ ಪಡುತ್ತಿದ್ದೇವೆ. ಸರ್ಕಾರ ನಮ್ಮ ಗೋಳನ್ನು ಕೇಳಬೇಕು ಅಂತ ಆಗ್ರಹ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ: ಏಕಾಏಕಿ ಹಾಸ್ಟೆಲ್ ಕ್ಲೋಸ್; ತಮ್ಮ ಗ್ರಾಮಗಳಿಗೆ ಹೋಗಲು ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ
ಇಲ್ಲಿನ ಜಿಲ್ಲಾಡಳಿತದಿಂದ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡಂತಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚಳ ಹಿನ್ನೆಲೆ, ಕೊವಿಡ್ ಸೋಂಕಿನ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಶನಿವಾರ ಏಕಾಏಕಿ ಹಾಸ್ಟೆಲ್ ಕ್ಲೋಸ್ ಮಾಡಿಸಿತ್ತು. ವಿವಿಧ ನಿಯಮಾವಳಿಗಳನ್ನು, ಪ್ರತ್ಯೇಕ ಕೊರೊನಾ ಮಾರ್ಗಸೂಚಿ ಜಾರಿಗೊಳಿಸಲಾಗಿತ್ತು. ಇದೀಗ, ಏಕಾಏಕಿ ಹಾಸ್ಟೆಲ್ ಕ್ಲೋಸ್ ಹಿನ್ನೆಲೆ ಮಕ್ಕಳು ಬೀದಿಗೆ ಬರುವಂತಾಗಿದೆ. ಹಾಸ್ಟೆಕ್ ಕ್ಲೋಸ್ ಆದಕಾರಣ ಮಕ್ಕಳು ತಮ್ಮ ಗ್ರಾಮಗಳಿಗೆ ಹೋಗಲು ಬಸ್ ಇಲ್ಲದೆ ಪರದಾಡುವಂತಾಗಿದೆ.
ಸುಮಾರು 2 ಗಂಟೆಯಿಂದ ಬಸ್‌ಗಾಗಿ ಕಾಯುತ್ತಿರುವ ಮಕ್ಕಳು, ಬಳ್ಳಾರಿ ತಾಲೂಕಿನ ಯಾಳಪಿಗೆ ಹೋಗಲು ಬಸ್ ಇಲ್ಲದ ಹಿನ್ನೆಲೆ ಬಸ್ ನಿಲ್ದಾಣದಲ್ಲಿಯೇ ಪರದಾಡುವಂತಾಗಿದೆ. ಹಾಸ್ಟೆಲ್‌ಗಳಿಂದ ಲಗೇಜ್ ಸಮೇತ ಬಂದಿರುವ ವಿದ್ಯಾರ್ಥಿಗಳು, ಸೂಕ್ತ ಬಸ್ ವ್ಯವಸ್ಥೆ ಮಾಡಿಕೊಡಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಟಿವಿ9 ಮೂಲಕ ಸರ್ಕಾರಕ್ಕೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಅವಧಿ ಬದಲಾಯಿಸಿ ಶನಿವಾರ ಆದೇಶ ಹೊರಡಿಸಲಾಗಿತ್ತು. ಕೊರೊನಾ ಹೆಚ್ಚಳ ಹಿನ್ನೆಲೆ ಜನವರಿ 31ರ ವರೆಗೆ ಪ್ರತ್ಯೇಕ ಗೈಡ್ಲೈನ್ಸ್ ಜಾರಿಗೊಳಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ರಾತ್ರಿ 8 ರಿಂದ ಬೆಳಗ್ಗೆ 6ರ ವರೆಗೆ ನೈಟ್ ಕರ್ಫ್ಯೂ ಇರಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ರಾತ್ರಿ 8 ರಿಂದ ಬೆಳಗ್ಗೆ 6 ರವರೆಗೆ ಎಲ್ಲವೂ ಬಂದ್ ಆಗಿರಲಿದೆ. ದೇವಸ್ಥಾನ, ಚರ್ಚ್, ಮಸೀದಿ ಎಲ್ಲವನ್ನೂ ಬಂದ್ ಮಾಡಬೇಕು. ಯಾವುದೇ ರೀತಿಯ ಪ್ರಾರ್ಥನೆ, ಪೂಜೆ ಮಾಡಲು ಅವಕಾಶವಿಲ್ಲ ಎಂದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್ ಹೇಳಿಕೆ ನೀಡಿದ್ದರು.
ಬಳ್ಳಾರಿ ಜಿಲ್ಲೆಯಲ್ಲಿ ಜನವರಿ 31ರ ವರೆಗೆ ಚಿತ್ರಮಂದಿರ ಕ್ಲೋಸ್ ಆಗಿರಲಿದೆ. ರಂಗಮಂದಿರ ಸೇರಿದಂತೆ ಖಾಸಗಿ ಪಾರ್ಟಿಗಳಿಗೆ ಅವಕಾಶ ಇಲ್ಲ. ಮದುವೆ ಸಮಾರಂಭಗಳಿಗೆ ಕೇವಲ 50 ಜನರಿಗೆ ಅವಕಾಶ. ಬಳ್ಳಾರಿ ಗ್ರಾಮೀಣ ಭಾಗದಲ್ಲಿ 1-10ನೇ ತರಗತಿವರೆಗೆ ಬಂದ್ ಮಾಡಲಾಗಿದೆ. ಬಳ್ಳಾರಿ ನಗರದಲ್ಲಿ ಶಾಲಾ ಕಾಲೇಜು, ವಿಶ್ವವಿದ್ಯಾಲಯ ಕ್ಲೋಸ್ ಮಾಡಿನ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್ ಆದೇಶ ಹೊರಡಿಸಿದ್ದರು.
ಇದನ್ನೂ ಓದಿ: Covid 19: ದೇಶದಲ್ಲಿ ಒಂದೇ ದಿನ 2,71,202 ಕೊರೊನಾ ಪ್ರಕರಣಗಳು ದಾಖಲು; ಸೋಂಕಿನಿಂದ 314 ಜನರ ಸಾವು
ಇದನ್ನೂ ಓದಿ: ಬಳ್ಳಾರಿಗೆ ಪ್ರತ್ಯೇಕ ಕೊರೊನಾ ಮಾರ್ಗಸೂಚಿ ಜಾರಿ, ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಹಲವರಿಗೆ ಕೊವಿಡ್ ದೃಢ