ವರ್ಗಾವಣೆ ಮಾಡಿಸುವುದಾಗಿ 75 ಲಕ್ಷ ರೂ ಹಣ ಪಡೆದು ವಂಚನೆ ಆರೋಪ: ಕೋಲಾರ ನಗರಸಭೆ ಸದಸ್ಯ ವಶಕ್ಕೆ
Kolar News: ವರ್ಗಾವಣೆ ಮಾಡಿಸುವುದಾಗಿ 75 ಲಕ್ಷ ರೂ. ಹಣ ಪಡೆದು ವಂಚನೆ ಆರೋಪ ಕೇಳಿಬಂದ ಹಿನ್ನೆಲೆ ಕೋಲಾರದ ನಗರಸಭೆ ಸದಸ್ಯನನ್ನು ಗಲ್‌ಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.
ಕೋಲಾರ, ಜುಲೈ 31: ವರ್ಗಾವಣೆ ಮಾಡಿಸುವುದಾಗಿ 75 ಲಕ್ಷ ರೂ. ಹಣ ಪಡೆದು ವಂಚನೆ ಆರೋಪ ಕೇಳಿಬಂದ ಹಿನ್ನೆಲೆ ಕೋಲಾರದ ನಗರಸಭೆ ಸದಸ್ಯ (Municipal Council member) ನನ್ನು ಗಲ್‌ಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಬೆಂಗಳೂರಿನ ಆಡುಗೋಡಿಯ ಪ್ರತಾಪ್ ನೀಡಿದ ದೂರಿನ ಮೇರೆಗೆ ನಗರಸಭೆ ಸದಸ್ಯ ಮುಬಾರಕ್‌ನನ್ನು ವಶಕ್ಕೆ ಪಡೆಯಲಾಗಿದೆ.
ಸಿಎಂ ಸಿದ್ಧರಾಮಯ್ಯ ರಾಜಕೀಯ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಎಂಎಲ್‌ಸಿ ನಸೀರ್ ಅಹ್ಮದ್ ಮೂಲಕ ವರ್ಗಾವಣೆ ಮಾಡಿಸುವುದಾಗಿ ಹೇಳಿದ್ದ. ವರ್ಗಾವಣೆ ಮಾಡಿಸಲು ಒಟ್ಟು 1.5 ಕೋಟಿ ರೂಪಾಯಿ ಕೇಳಿದ್ದು, ಮುಂಗಡವಾಗಿ ಎರಡು ಕಂತಿನಲ್ಲಿ 75 ಲಕ್ಷ ರೂಪಾಯಿ ಪಡೆದುಕೊಂಡಿದ್ದ. ವರ್ಗಾವಣೆ ತಡವಾದ್ದರಿಂದ ದೂರು ನೀಡಿದ್ದು, ಹಣ ವಾಪಸ್ ಕೇಳಿದಕ್ಕೆ ಬೆದರಿಕೆ ಹಾಕಿದ್ದಾರೆಂದು ಪ್ರತಾಪ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಗದಗ: ತವರಿನಿಂದ ಕೊಟ್ಟ ಬೆಳ್ಳಿ ಉಡುಗೊರೆ ಕಳ್ಳತನ, ಕಣ್ಣೀರು ಹಾಕುತ್ತಿರುವ ತಾಯಿ ಮಗಳು
ಇ ಸ್ಟೋರೇಜ್ ಹೆಸರಿನಲ್ಲಿ ಜನರಿಗೆ ವಂಚನೆ
ದಾವಣಗೆರೆ: ಇ ಸ್ಟೋರೇಜ್ ಹೆಸರಿನಲ್ಲಿ ಹತ್ತಾರು ಜನರಿಗೆ ವಂಚನೆ ಮಾಡಿರುವಂತಹ ಘಟನೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದಿದೆ. ಈಗ ಪ್ರಾಥಮಿಕ ಮಾಹಿತಿ ಪ್ರಕಾರ ಸುಮಾರು ಎರಡು ಕೋಟಿ ವಂಚನೆ ಆಗಿರುವುದು ಬೆಳಕಿಗೆ ಬಂದಿದೆ. ಆರಂಭದಲ್ಲಿ ಕೆಲ ಜನಕ್ಕೆ ಅಂಗಡಿ ಮಾಡಿಕೊಟ್ಟು, ನಂತರ ಹಣ ಹೆಚ್ಚು ಸಂಗ್ರಹವಾದ ಬಳಿಕ ಕಂಪನಿ ಪ್ರತಿನಿಧಿಗಳು ನಾಪತ್ತೆಯಾಗಿದ್ದಾರೆ.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ 420 ಅನ್ವಯ ಕೇಸ್ ದಾಖಲಿಸಲಾಗಿದ್ದು, ಹಣ ಪಡೆದವರನ್ನ ಪತ್ತೆ ಹಚ್ಚುವ ಕೆಲಸ ಆರಂಭಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಮಾಹಿತಿ ನೀಡಿದ್ದಾರೆ.
ಹೊಲದಲ್ಲಿ ಕೆಲಸ ಮಾಡುವಾಗ ವಿದ್ಯುತ್ ಪ್ರವಹಿಸಿ ರೈತ ಸಾವು
ಮೈಸೂರು: ಹೊಲದಲ್ಲಿ ಕೆಲಸ ಮಾಡುವಾಗ ವಿದ್ಯುತ್ ಪ್ರವಹಿಸಿ ರೈತ ಸಾವಪ್ಪಿರುವಂತಹ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಭಾರತಿಪುರ ಗ್ರಾಮದಲ್ಲಿ ನಡೆದಿದೆ. ನಾಗರಾಜು(37) ಮೃತ ರೈತ. ಹೊಲದಲ್ಲಿ ಅರಿಶಿನ ಬೆಳೆಗೆ ಔಷಧಿ ಸಿಂಪಡಿಸುತ್ತಿದ್ದಾಗ ವಿದ್ಯುತ್ ಕಂಬದ ತಂತಿ ತಾಗಿ ದುರಂತ ಸಂಭವಿಸಿದೆ.
ಇದನ್ನೂ ಓದಿ: ಬೆಂಗಳೂರು: ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ಆರೋಪ: FIR ದಾಖಲು
ವಿದ್ಯುತ್ ತಂತಿ ಕೆಳಗೆ ಹಾದು ಹೋಗಿದ್ದರ ಬಗ್ಗೆ ದೂರು ನೀಡಿದ್ದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಗ್ರಾಮಸ್ಥರ ಆರೋಪಿಸಿದ್ದಾರೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:57 pm, Mon, 31 July 23