ಕೋಲಾರ: ಆಂಧ್ರ ಸಾರಿಗೆ (Andhra State Transport) ಸಂಸ್ಥೆ ಬಸ್ ಪಲ್ಟಿಯಾಗಿ ದಂಪತಿ ಸಾವನ್ನಪ್ಪಿರುವ ಘಟನೆ ಮುಳಬಾಗಿಲು ತಾಲೂಕಿನ ವಿರುಪಾಕ್ಷಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ನಡೆದಿದೆ. ವಿಜಯವಾಡದ ಷರೀಫ್, ಮೈಮುನ್ನಿಸಾ ಮೃತ ದುರ್ದೈವಿಗಳು. ಬಸ್ನಲ್ಲಿದ್ದ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಆಂಧ್ರದ ಗುಂಟೂರಿನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಅವಘಡ ಸಂಭವಿಸಿದೆ.
ಅಪಘಾತ ಬಳಿಕ ಬಸ್ ಚಾಲಕ, ಕಂಡಕ್ಟರ್ ಪರಾರಿಯಾಗಿದ್ದಾರೆ. ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಶೆಡ್ಗೆ ಲಾರಿ ಡಿಕ್ಕಿ, ಶೆಡ್ನ ಗೋಡೆ ಕುಸಿದು ಒಂದು ವರ್ಷದ ಹೆಣ್ಣು ಮಗು ಸಾವು
ರಾಮನಗರ: ಶೆಡ್ಗೆ ಲಾರಿ ಡಿಕ್ಕಿಯಾಗಿ ಶೆಡ್ನ ಗೋಡೆ ಕುಸಿದು ಒಂದು ವರ್ಷದ ಹೆಣ್ಣು ಮಗು ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣದ ಹೌಸಿಂಗ್ ಬೋರ್ಡ್ನಲ್ಲಿ ನಡೆದಿದೆ. ಒಂದು ವರ್ಷದ ಮರಿಯಮ್ಮ ಮೃತ ಮಗು. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕುಟುಂಬ ಬಳ್ಳಾರಿ ಜಿಲ್ಲೆ ಶಿರಗುಪ್ಪದಿಂದ ಕಟ್ಟದ ಕೆಲಸಕ್ಕೆಂದು ಚೆನ್ನಪಟ್ಟಣಕ್ಕೆ ಬಂದಿದ್ದರು. ತಡರಾತ್ರಿ ಮಲಗಿದ್ದ ವೇಳೆ ಗ್ರಾನೈಟ್ ತುಂಬಿಕೊಂಡು ಬಂದಿದ್ದ ಲಾರಿ ಶೆಡ್ನ ಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶೆಡ್ನ ಗೋಡೆ ಕುಸಿದದು ಮಲಗಿದ್ದ ಮಗುವಿನ ಮೇಲೆ ಬಿದ್ದಿದೆ.
ಮೈಸೂರಿನಲ್ಲಿ ಚಿರತೆ ದಾಳಿ ಕರು ಸಾವು
ಮೈಸೂರು: ಹುಣಸೂರು ತಾಲೂಕಿನ ಕಾಳೇನಹಳ್ಳಿ ಗ್ರಾಮಕ್ಕೆ ಚಿರತೆ ನುಗ್ಗಿ ರೈತ ಓರ್ವನ ಕರುವನ್ನು ಹೊತ್ತೊಯ್ದಿದೆ. ಕಳೆದ ಎರಡು ತಿಂಗಳಿನಿಂದ ಗ್ರಾಮಕ್ಕೆ ಚಿರತೆ ಬರುತ್ತಿತ್ತು. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
Published On - 8:31 am, Wed, 17 August 22