ಬೈಕ್ ಆಕ್ಸಿಡೆಂಟ್: ಬಂಗಾರಪೇಟೆ ಬಳಿ ಡಿವೈಎಸ್ಪಿ ಪುತ್ರ, ಇಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೆ ಸಾವು

ಲಾರಿಗೆ ಹಿಂಬದಿಯಿಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ (Bike accident) ಬೈಕ್​​ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಕೋಲಾರ ಜಿಲ್ಲೆ ಬಂಗಾರಪೇಟೆ (Bangarapet) ತಾಲೂಕಿನ ನೇರಳೆಕೆರೆ ಬಳಿ ಘಟನೆ ನಡೆದಿದೆ.

ಬೈಕ್ ಆಕ್ಸಿಡೆಂಟ್: ಬಂಗಾರಪೇಟೆ ಬಳಿ ಡಿವೈಎಸ್ಪಿ ಪುತ್ರ, ಇಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೆ ಸಾವು
ಅಪಘಾತ
Edited By: ಸಾಧು ಶ್ರೀನಾಥ್​

Updated on: Oct 04, 2023 | 4:27 PM

ಕೆಜಿಎಫ್, ಅಕ್ಟೋಬರ್ 4​: ಲಾರಿಗೆ ಹಿಂಬದಿಯಿಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ (Bike accident) ಬೈಕ್​​ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಕೋಲಾರ ಜಿಲ್ಲೆ ಬಂಗಾರಪೇಟೆ (Bangarapet) ತಾಲೂಕಿನ ನೇರಳೆಕೆರೆ ಬಳಿ ಘಟನೆ ನಡೆದಿದೆ. ಕೆಜಿಎಫ್​ನಲ್ಲಿ ( KGF) ಇಂಜಿನಿಯರಿಂಗ್ ಮಾಡ್ತಿದ್ದ ವಿದ್ಯಾರ್ಥಿ (engineering student) ಧೀರಜ್ (21) ಮೃತ ಪಟ್ಟ ಯುವಕ.

ಧೀರಜ್ ಚಿತ್ರದುರ್ಗದ ಡಿವೈಎಸ್​​ಪಿ ಅನಿಲ್ ಕುಮಾರ್ ಅವರ ಮಗ. ಬೈಕ್​ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಬಂಗಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ:

ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತಿಪ್ಪಶೆಟ್ಟಿಹಳ್ಳಿ ಗ್ರಾಮದ ಬಾವಿಯಲ್ಲಿ ಕೃಷ್ಣಪ್ಪ(45) ಮೃತದೇಹ ಪತ್ತೆಯಾಗಿದೆ. ಕೃಷ್ಣಪ್ಪ ಕಾಣೆಯಾಗಿದ್ದ ಬಗ್ಗೆ ಕುಟುಂಬಸ್ಥರು 2 ದಿನದ ಹಿಂದೆ ದೂರು ನೀಡಿದ್ದರು. ವೀಳ್ಯದೆಲೆ ಕೊಯ್ಯುವ ಸಲುವಾಗಿ ಗಂಗರಾಜು ತೋಟಕ್ಕೆ ಹೋಗಿದ್ದರು. ಕೊಲೆಗೈದು ಶವವನ್ನು ಬಾವಿಗೆ ಎಸೆದಿದ್ದಾರೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:20 pm, Wed, 4 October 23

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More
Loading...
Unable to load recommendations.
Follow Us