ವಿದ್ಯುತ್ ಶಾಕ್ ಹೊಡೆದು ನವವಿವಾಹಿತ ಲೈನ್ ಮ್ಯಾನ್ ದುರಂತ ಸಾವು! ಪತಿಯ ಸಾವು ಕಂಡು ಅಘಾತಕ್ಕೊಳಗಾದ ಪತ್ನಿ

ಅಸಲಿಗೆ ಜಂಪ್ ಕಟ್ ಆಗಿರುವ ಸ್ಥಳ ಬೇರೊಬ್ಬ ಮಾರ್ಗದಾಳುವಿಗೆ ಸಂಬಂಧಿಸಿದ್ದು. ಆತ ಅನಾರೋಗ್ಯದಿಂದಿರುವ ಹಿನ್ನೆಲೆ ಮಾರ್ಗದಾಳು ವಿವೇಕ್ ಸಂಬಂಧಿಸಿದ ಮಾರ್ಗದ ವಿದ್ಯುತ್ ಸ್ಥಗಿತಗೊಳಿಸದೆ ಹಾಗೂ ಮುಂಜಾಗ್ರತೆ ಕೈಗೊಳ್ಳದೆ ಕರ್ತವ್ಯ ನಿರ್ವಹಣೆಗೆ ಮುಂದಾಗಿದ್ದೇ ಆತನ ಸಾವಿಗೆ ಕಾರಣ ಎನ್ನಲಾಗಿದೆ.

ವಿದ್ಯುತ್ ಶಾಕ್ ಹೊಡೆದು ನವವಿವಾಹಿತ ಲೈನ್ ಮ್ಯಾನ್ ದುರಂತ ಸಾವು! ಪತಿಯ ಸಾವು ಕಂಡು ಅಘಾತಕ್ಕೊಳಗಾದ ಪತ್ನಿ
ವಿದ್ಯುತ್ ಶಾಕ್ ಹೊಡೆದು ನವವಿವಾಹಿತೆ ಲೈನ್ ಮ್ಯಾನ್ ದುರಂತ ಸಾವು!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 03, 2023 | 6:43 PM

ಚಿಕ್ಕಬಳ್ಳಾಪುರ, ಅಕ್ಟೋಬರ್​ 3: ಬೆಸ್ಕಾಂನಲ್ಲಿ ಕರ್ತವ್ಯನಿರತ ಲೈನ್ ಮ್ಯಾನ್ ವಿದ್ಯುತ್ ಜಂಪ್ ಕಟ್ ಆಗಿರುವುನ್ನು ಸರಿಪಡಿಸಲು ಹೋಗಿ ವಿದ್ಯುತ್ ಶಾಕ್ ನಿಂದ ದುರಂತ ಸಾವು ಕಂಡಿರುವ ಘಟನೆ ನಡೆದಿದೆ. ಪತಿಯ ಸಾವು ಕಂಡ ಆತನ ಪತ್ನಿ ನವವಿವಾಹಿತೆ ಅಘಾತಕ್ಕೊಳಗಾಗಿದ್ದಾರೆ. ಆತನ ಹೆಸರು ವಿವೇಕ್ ಪಾಟೀಲ್, ಬೆಳಗಾವಿ ಜಿಲ್ಲೆ ರಾಯಬಾಗ್ ತಾಲೂಕಿನ ಉಬ್ಬರವಾಡಿ ನಿವಾಸಿ. ಚಿಕ್ಕಬಳ್ಳಾಪುರ ಜಿಲ್ಲಾ ಬೆಸ್ಕಾಂ ವಿಭಾಗದಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ಮಾಡ್ತಿದ್ದ. ನಿನ್ನೆ ನಂದಿ ವಿಭಾಗದ ಕೋಳವನಹಳ್ಳಿ ಬೊಮ್ಮನಹಳ್ಳಿ ಮಾರ್ಗದಲ್ಲಿ ತ್ರೀ ಫೇಸ್ ಮಾರ್ಗದಲ್ಲಿ ಜಂಪ್ ಕಟ್ ಆಗಿದೆ ಅಂತ ಜಂಪ್ ಹಾಕಲು ವಿದ್ಯುತ್ ಕಂಬ ಹತ್ತಿದ್ದಾನೆ. ಆಗ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿ ಮೃತಪಟ್ಟಿದ್ದಾನೆ ಎಂದು ಆನಂದಕುಮಾರ್. ಕೆ ಕಾರ್ಯಪಾಲಕ ಇಂಜಿನಿಯರ್, ಚಿಕ್ಕಬಳ್ಳಾಪುರ ಬೆಸ್ಕಾಂ ಮಾಹಿತಿ ನೀಡಿದ್ದಾರೆ.

ವಿವೇಕ್ ಪಾಟೀಲ್ ಮಾರ್ಗದಾಳಾಗಿದ್ದು ನಿನ್ನೆ ಸಂಜೆ ಜಂಪ್ ಹಾಕುವಾಗ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ಮಾರ್ಗದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿಲ್ಲ. ಆದರೂ ಜಂಪ್ ಹಾಕಲು ಮುಂದಾದಾಗ ಘಟನೆ ನಡೆದಿದೆ. ವಿವೇಕ್ ಪಾಟೀಲ್ ಇತ್ತಿಚಿಗೆ ಮದುವೆಯಾಗಿದ್ದು ಪತ್ನಿಯನ್ನು ಚಿಕ್ಕಬಳ್ಳಾಪುರದ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಮದುವೆಯಾಗಿ ವರ್ಷದೊಳಗೆ ಪತಿ ಕಳೆದುಕೊಂಡಿರುವ ವಿವೇಕ್ ಪತ್ನಿ ವರ್ಷಾ, ಗಂಡನನ್ನು ನೆನೆದು ಆಘಾತಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ಹಲ್ಲೆ, ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರ್ಟಿಐ ಕಾರ್ಯಕರ್ತೆ ಆರೋಪ- ಪೊಲೀಸ್ ಠಾಣೆ ಮೆಟ್ಟಿಲೇರಿದ ಗಲಾಟೆ ಪ್ರಕರಣ

ಅಸಲಿಗೆ ಜಂಪ್ ಕಟ್ ಆಗಿರುವ ಸ್ಥಳ ಬೇರೊಬ್ಬ ಮಾರ್ಗದಾಳುವಿಗೆ ಸಂಬಂಧಿಸಿದ್ದು. ಆತ ಅನಾರೋಗ್ಯದಿಂದಿರುವ ಹಿನ್ನೆಲೆ ಮಾರ್ಗದಾಳು ವಿವೇಕ್ ಸಂಬಂಧಿಸಿದ ಮಾರ್ಗದ ವಿದ್ಯುತ್ ಸ್ಥಗಿತಗೊಳಿಸದೆ ಹಾಗೂ ಮುಂಜಾಗ್ರತೆ ಕೈಗೊಳ್ಳದೆ ಕರ್ತವ್ಯ ನಿರ್ವಹಣೆಗೆ ಮುಂದಾಗಿದ್ದೇ ಆತನ ಸಾವಿಗೆ ಕಾರಣ ಎನ್ನಲಾಗಿದೆ. ನಂದಿಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಸ್ಕಾಂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ.

ಕೋಲಾರದ ಇಟಿಸಿಎಂ ವೃತ್ತದಲ್ಲಿ ಕತ್ತು ಕೊಯ್ದುಕೊಂಡು ವ್ಯಕ್ತಿ ಸಾವು:

ಕೋಲಾರದ ಇಟಿಸಿಎಂ ವೃತ್ತದಲ್ಲಿ ಸಾರ್ವಜನಿಕವಾಗಿ ಕತ್ತು ಕೊಯ್ದುಕೊಂಡು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ರೆಹಮತ್ ಉಲ್ಲಾ ಬೇಗ್ (35) ಕತ್ತು ಕೊಯ್ದುಕೊಂಡು ಮೃತಪಟ್ಟ ವ್ಯಕ್ತಿ. ರೆಹಮತ್, ಕೋಲಾರ ಜಿಲ್ಲೆ ಕೆಜಿಎಫ್​ ತಾಲೂಕಿನ ಬೇತಮಂಗಲ ನಿವಾಸಿಯಾಗಿದ್ದು, ಗ್ಯಾಸ್ ಸ್ಟವ್ ರಿಪೇರಿ ಕೆಲಸ ಮಾಡಿಕೊಂಡಿದ್ದ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರಿಂದ ಕತ್ತು ಕೊಯ್ದುಕೊಂಡಿದ್ದ ರೆಹಮತ್ ಉಲ್ಲಾ ಬೇಗ್ ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ