ಸಿದ್ದರಾಮಯ್ಯ ಅಹಿಂದ ನಾಯಕನೇ ಅಲ್ಲ; ದಲಿತ ಸಮಾಜ ತಕ್ಕ ಪಾಠ ಕಲಿಸುತ್ತದೆ: ವರ್ತೂರ್​ ಪ್ರಕಾಶ್

| Updated By: ವಿವೇಕ ಬಿರಾದಾರ

Updated on: Jan 09, 2023 | 7:16 PM

ಮಲ್ಲಿಕಾರ್ಜುನ ಖರ್ಗೆ, ಕೆ ಹೆಚ್ ಮುನಿಯಪ್ಪರನ್ನ ಸಿದ್ದರಾಮಯ್ಯ ಸೋಲಿಸಿದರು. ಹೀಗಾಗಿ ದಲಿತ ಸಮಾಜ ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದೆ. ಈ ಬಾರಿ ಚುನಾವಣೆಯಲ್ಲಿ ದಲಿತ ಸಮಾಜ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸುತ್ತದೆ

ಸಿದ್ದರಾಮಯ್ಯ ಅಹಿಂದ ನಾಯಕನೇ ಅಲ್ಲ; ದಲಿತ ಸಮಾಜ ತಕ್ಕ ಪಾಠ ಕಲಿಸುತ್ತದೆ: ವರ್ತೂರ್​ ಪ್ರಕಾಶ್
ವರ್ತುರ್​​ ಪ್ರಕಾಶ, ಸಿದ್ದರಾಮಯ್ಯ
Follow us on

ಕೋಲಾರ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಕೊನೆಗು ಇಂದು (ಜ.9) ವಿಪಕ್ಷ ನಾಯಕ ಸಿದ್ದಾರಾಮಯ್ಯ (siddaramaiah) ತಾವು ಸ್ಪರ್ಧಿಸುವ ಕ್ಷೇತ್ರವನ್ನು ಬಹಿರಂಗಪಡಿಸಿದ್ದಾರೆ. ನಾನು (ಸಿದ್ದರಾಮಯ್ಯ) ಕೋಲಾರದಿಂದ (Kolar) ಸ್ಪರ್ಧಿಸಲು ಇಚ್ಚಿಸಿದ್ದು, ಆದರೆ ಹೈಕಮಾಂಡ್​ ಸೂಚಿಸಿದರೆ ಮಾತ್ರ ಸ್ಪರ್ಧಿಸುತ್ತೇನೆ ಎಂದರು. ಈ ಕುರಿತು ಬಿಜೆಪಿ (BJP) ಟಿಕೆಟ್​​ ಆಕಾಂಕ್ಷಿ, ಒಂದು ಕಾಲದಲ್ಲಿ ಸಿದ್ದರಾಮಯ್ಯ ಶಿಷ್ಯ ಎಂದು ಗುರುತಿಸಿಕೊಂಡಿದ್ದ, ಮಾಜಿ ಸಚಿವ ವರ್ತೂರ್​ ಪ್ರಕಾಶ್ (Varthur Prakash) ಮಾತನಾಡಿ ಮಗನ ಮೇಲಿನ ವ್ಯಾಮೋಹದಿಂದ ಕೋಲಾರಕ್ಕೆ ಬಂದಿದ್ದಾರೆ. ನನ್ನ ಮೇಲೆ ಸ್ಪರ್ಧೆ ಮಾಡಲು ಬಂದಿರುವ ಸಿದ್ದರಾಮಯ್ಯ ಅಹಿಂದ ನಾಯಕನೇ ಅಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ವಿಚಾರ: ಕೊಂಕು ಮಾತನಾಡಿದ ಹೆಚ್​​.ಡಿ.ಕುಮಾರಸ್ವಾಮಿ

ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಒಬ್ಬ ಅಹಿಂದ ಮುಖಂಡ ನನ್ನ ವಿರುದ್ದ ಸ್ಪರ್ಧೆ ಮಾಡಲು ಬಂದಿರುವ ಸಿದ್ದರಾಮಯ್ಯಗೆ ಅಹಿಂದ ಮತದಾರರೇ ಸರಿಯಾದ ಪಾಠ ಕಲಿಸುತ್ತಾರೆ. ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರ ಮತ ಕೇಳಲು ಯಾರು ಇಲ್ಲ. ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಮಾತ್ರ ಪ್ರಬಲ, ಕೋಲಾರದಲ್ಲಲ್ಲಾ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್​​ಗೆ ಇಡೀ ರಾಜ್ಯದಲ್ಲೇ ಹಿನ್ನೆಡೆಯಾಗುತ್ತದೆ ಎಂದರು.

ಇದನ್ನೂ ಓದಿ: ನಾನು ಕೋಲಾರದಿಂದ ಸ್ಪರ್ಧಿಸಲು ಸಿದ್ಧ, ಆದರೆ ಹೈಕಮಾಂಡ್ ತೀರ್ಮಾನಿಸಬೇಕು: ಸಿದ್ಧರಾಮಯ್ಯ

7 ವರ್ಷ ಕೆಪಿಸಿಸಿ ಅಧಕ್ಷರಾಗಿದ್ದ ಡಾ. ಜಿ ಪರಮೇಶ್ವರರನ್ನು ಹುನ್ನಾರದಿಂದ ಇದೇ ಸಿದ್ದರಾಮಯ್ಯ 2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿದರು. ದಲಿತ ನಾಯಕರಾದಂತಹ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ ಹೆಚ್ ಮುನಿಯಪ್ಪರನ್ನ ಸೋಲಿಸಿದ್ರು. ಹೀಗಾಗಿ ದಲಿತ ಸಮಾಜ ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದೆ. ಈ ಬಾರಿ ಚುನಾವಣೆಯಲ್ಲಿ ದಲಿತ ಸಮಾಜ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸುತ್ತದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.