ಪ್ರಧಾನಿ ಮೋದಿಯವರಿಂದ ಅಭಿನಂದನೆ: ತಂತಾನೆ ಬದಲಾಯಿತು ಕಸದವರು ಎಂದು ಕರೆಯುತ್ತಿದ್ದವರ ಮಾತು!

ಕೋಲಾರ ತಾಲೂಕಿನ ಬೆಗ್ಗಿಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಸಮುಕ್ತವನ್ನಾಗಿ ಮಾಡಲು ಶ್ರಮಿಸುತ್ತಿದ್ದ ಮಹಿಳೆಯರು, ಕೋಳಿ ಕೂಗುವ‌ ಮುನ್ನವೇ ಸ್ವಚ್ಚ ವಾಹನದಲ್ಲಿ ಮನೆ ಮನೆಗೆ ತೆರಳಿ‌ ಕಸ ಸಂಗ್ರಹಿಸಿ ಇಡೀ ಗ್ರಾಮವನ್ನು ಸ್ವಚ್ಚವಾಗಿಸುತ್ತಿದ್ದವರು, ಅವರ ಕರ್ತವ್ಯ ನಿಷ್ಠೆ ರಾಷ್ಟ್ರ ಮಟ್ಟದಲ್ಲಿ ಪ್ರಧಾನಿಮಂತ್ರಿ ನರೇಂದ್ರ ಮೋದಿಯವರಿಂದ ಶಬ್ಬಾಸ್ ಗಿರಿ ಗಿಟ್ಟಿಸಿಕೊಟ್ಟಿತ್ತು. 

ಪ್ರಧಾನಿ ಮೋದಿಯವರಿಂದ ಅಭಿನಂದನೆ: ತಂತಾನೆ ಬದಲಾಯಿತು ಕಸದವರು ಎಂದು ಕರೆಯುತ್ತಿದ್ದವರ ಮಾತು!
ಪ್ರಧಾನಿ ಮೋದಿಯವರಿಂದ ಅಭಿನಂದನೆ: ತಂತಾನೆ ಬದಲಾಯಿತು ಕಸದವರು ಎಂದು ಕರೆಯುತ್ತಿದ್ದವರ ಮಾತು!
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 01, 2024 | 7:31 PM

ಕೋಲಾರ, ಫೆ.01: ತಾಲೂಕಿನ ಬೆಗ್ಗಿಹೊಸಹಳ್ಳಿ(Begli Hosahalli) ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ವಾಹಿನಿಯ ಚಾಲಕಿ ಮಂಜುಳಾ ಹಾಗೂ ನಿತ್ಯ ಕಸವನ್ನು ವೈಜ್ಞಾನಿಕವಾಗಿ ವಿಂಗಡನೆ ಮಾಡುವ ಶಶಿಕಲಾ ಅವರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ವಿಶೇಷವಾಗಿ ಗಣರಾಜ್ಯೋತ್ಸವ ದಿನದಂದು ಅಭಿನಂಧಿಸಿತ್ತು. ಅಷ್ಟೇ ಅಲ್ಲದೆ ಗಣರಾಜ್ಯೋತ್ಸವ ದಿನದಂದು ಕರ್ತವ್ಯ ಪಥದಲ್ಲಿನ ಪೆರೇಡ್​ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಅವರನ್ನು ಜ.25 ರಂದು ನವದೆಹಲಿಗೆ ಕರೆಸಿಕೊಂಡು ಚಹಾಕೂಟದಲ್ಲಿ ಅವರ ಜೊತೆ ಚಹಾ ಸೇವಿಸಿ ನಂತರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ‌ ಭಾಗವಹಿಸಲು ಅನುವು ಮಾಡಿಕೊಟ್ಟಿರುವುದು ಕೋಲಾರ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

ಇನ್ನು ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳ‌ ಸಾಧಕಿಯನ್ನು ಆಯ್ಕೆ ಮಾಡಲಾಗಿತ್ತು.‌ ಆದರಲ್ಲಿ ಕೋಲಾರ ಜಿಲ್ಲೆಯ ಬೆಗ್ಲಿಹೊಸಹಳ್ಳಿಯ ಮಂಜುಳಾ ಮತ್ತು ಶಶಿಕಲಾ ಅವರನ್ನು ಆಯ್ಕೆ ಮಾಡಿದ್ದು, ಸ್ವಚ್ಛಗ್ರಹಿಗಳಲ್ಲಿ ಸಂತಸ ಮೂಡಿಸಿದೆ. ನರೇಂದ್ರ ಮೋದಿಯ ಜೊತೆ‌ ಚಹಾ ಕೂಟದಲ್ಲಿ ಭಾಗವಹಿಸಿದ ಇವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದರಿಂದ‌ ಗ್ರಾಮದಲ್ಲಿ ಮತ್ತಷ್ಟು ಕೆಲಸ ಮಾಡಲು ಉತ್ಸುಕರಾಗಿದ್ದು, ಯಾವುದೇ ಕೆಲಸವನ್ನು ಮಾಡುವಾಗ ಜವಾಬ್ದಾರಿಯಿಂದ ಮಾಡಿದರೆ ನಮ್ಮನ್ನು ಜನ ಗುರುತಿಸುತ್ತಾರೆ ಎನ್ನುವುದು ಮಂಜುಳಾ ಹಾಗೂ ಶಶಿಕಲಾ ಅವರ ಮಾತು.

ಇದನ್ನೂ ಓದಿ:ನರೇಂದ್ರ ಮೋದಿ ಜೀವನ ಮತ್ತು ಕೃತಿಗಳ ಕುರಿತು ಬ್ರೈಲ್ ಲಿಪಿಯಲ್ಲಿ ಬರೆಯಲಾದ ಪುಸ್ತಕ ಬಿಡುಗಡೆ

ಕೇಂದ್ರದ ಅಭಿನಂದನೆ; ನಮ್ಮನ್ನು ಕೀಳಾಗಿ ನೋಡುತ್ತಿದ್ದವರ ಮನಸ್ಥಿತಿಯನ್ನೇ ಬದಲಿಸಿತು!

ಈ ಕುರಿತು ಮಾತನಾಡಿದ ಶಶಿಕಲಾ ಅವರು ‘ಕಳೆದ ಮೂರು ವರ್ಷಗಳಿಂದ ಸ್ವಚ್ಚ ವಾಹಿನಿಯ ಚಾಲಕಿಯಾಗಿ ಮಂಜುಳಾ ಮತ್ತು ನಾನು, ಕಸ ವಿಗಂಡಣೆ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಮೊದಲು ಕಸವನ್ನು ಸಂಗ್ರಹಿಸುವುದು ಗ್ರಾಮದಲ್ಲಿ ಕಷ್ಟದ ಕೆಲಸವಾಗಿತ್ತು. ನೋಡುವವರು ಕೂಡ ಕಸದವರು ಬಂದರೂ ಎಂದು ಕರೆಯುತ್ತಿದ್ದರು. ಆಗ ಇವರಿಗೆ ನಮ್ಮನ್ನು ಕೀಳಾಗಿ ನೋಡುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತಿತ್ತಂತೆ. ಆದರೂ ಮನಸ್ಸು ಗಟ್ಟಿ ಮಾಡಿಕೊಂಡು ಕೆಲಸ ಮಾಡಿದ್ದೇವೆ.

ಕೆಲವು ವೇಳೆ ನಾವು ಜನರ ಮನೆ ಬಾಗಿಲಿಗೆ ಹೋದಾಗ ಕೆಲವು ವೇಳೆ ಮಕ್ಕಳು ಕೂಡ ಕಸದವರು ಬಂದರು ಎಂದು ಕರೆದಾಗ ಅವರ ಮನಸ್ಸಿಗೆ ನೋವಾಗುತ್ತಿತ್ತಂತೆ. ಆದರೆ, ನಂತರದ ದಿನಗಳಲ್ಲಿ ಅರಿವು ಮೂಡಿಸುವ ಹಾಗೂ ಸ್ವಚ್ಚ ಭಾರತ್​ ಅಭಿಯಾನದ ನಂತರದಲ್ಲಿ ಅದರ ಕುರಿತಾದ ಕೀಳರಿಮೆ ಜನರಲ್ಲಿ ಕಡಿಮೆಯಾಗುತ್ತಾ ಬಂದಿತ್ತು. ಆದಾದ ನಂತರ ನಮ್ಮ ಕೆಲಸವನ್ನು ಗುರುತಿಸಿ ದೆಹಲಿಯ ಗಣರಾಜ್ಯೋತ್ಸವ ದಿನದಂದು ಪೆರೇಡ್​ ವೀಕ್ಷಣೆಗೆ ಅವಕಾಶ ಮಾಡಿ ಕೊಟ್ಟಿದ್ದು, ಜೊತೆಗೆ ಮೋದಿ ಸೇರಿದಂತೆ ಗ್ರಾಮೀಣಾಭಿವೃದ್ದಿ ಸಚಿವರೊಂದಿಗೆ ತಮ್ಮ ಅನುಭವ ಹಂಚಿಕೊಂಡು ಬಂದ ನಂತರ ಗ್ರಾಮಗಳಲ್ಲಿ ನಮ್ಮನ್ನು ನೋಡುವ ರೀತಿಯೇ ಬದಲಾಗಿ ಹೋಗಿದೆ. ಎಲ್ಲರೂ ಕೂಡ ಇವರನ್ನು ಬಹಳ ಗೌರವ ಹಾಗೂ ಹೆಮ್ಮೆಯಿಂದ ನೋಡುತ್ತಿದ್ದಾರೆ ಎಂದರು.

ಇದನ್ನೂ ಓದಿ:ಸಂಸತ್ತಿನಲ್ಲಿ ಅನಗತ್ಯ ದೊಂಬಿಯೆಬ್ಬಿಸುವ ಸಂಸದರಿಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ: ಪ್ರಧಾನ ಮಂತ್ರಿ ನರೇಂದ್ರ ಮೋದಿ

‘ಸ್ವಚ್ಚಗ್ರಹಿಗಳಾದರೂ ಗ್ರಾಮ ಪಂಚಾಯ್ತಿಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ರು!

ಗ್ರಾಮ ಪಂಚಾಯತಿ ಅಧ್ಯಕ್ಷೆ ದೀಪಿಕಾ ಲೋಕೇಶ್ ಮಾತನಾಡಿ ‘ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯನ್ನು ನಿತ್ಯ ಕಸ ಸಂಗ್ರಹಿಸುವ ಮೂಲಕ ಸ್ವಚ್ಚಗ್ರಹಿಗಳಾಗಿ ಕೆಲಸ ಮಾಡಿದರು. ಅವರ ಕೆಲಸದಲ್ಲಿನ ನಿಷ್ಠೆ ಮತ್ತು ಕರ್ತವ್ಯ ಪ್ರಜ್ನೆಯಿಂದ ಇವತ್ತು ನಮ್ಮ ಗ್ರಾಮ ಪಂಚಾಯ್ತಿಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಈ ಇಬ್ಬರು ಮಹಿಳೆಯರ ಕಾರ್ಯ ನಿಜಕ್ಕೂ ಶ್ಲಾಘನೀಯ, ಮಹಿಳೆಯರು ಯಾವ ಕ್ಷೇತ್ರದಲ್ಲೂ ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ಈ ಇಬ್ಬರು ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಮಹಿಳೆಯಾಗಿ ನಿತ್ಯ ಬೆಳಿಗಿನ ಜಾವ ಕೆಲಸಕ್ಕೆ ಬಂದು ಮಂಜುಳ ಆಟೋ ಓಡಿಸಿದರೆ, ಶಶಿಕಲಾ ಕಸವನ್ನು ಸಂಗ್ರಹಿಸಿ, ಅದನ್ನು ವೈಜ್ಞಾನಿಕವಾಗಿ ವಿಂಗಡಿಸಿ ಗ್ರಾಮಗಳನ್ನು ಸ್ವಚ್ಚವಾಗಿಡುವಲ್ಲಿ ಅವರ ಕಾರ್ಯ ಪ್ರಶಂಸನೀಯ ಎಂದರು.

ಒಟ್ಟಾರೆ ಇಬ್ಬರು ಮಹಿಳೆಯರು ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಸ್ವಚ್ಛಭಾರತ ಯೋಜನೆಯನ್ನು ಸಕಾರಗೊಳಿಸಿದ್ದು ಕೋಲಾರ ಜಿಲ್ಲೆಗೆ ಹೆಮ್ಮೆಯ ಸಂಗತಿ, ಜೊತೆಗೆ ಮಹಿಳೆಯರು ಕೂಡಾ ನಾವು ಯಾವುದಕ್ಕೂ ಕಮ್ಮಿ ಇಲ್ಲಾ ಎಂದು ಸ್ವಚ್ವ ವಾಹನದ‌ ಚಾಲಕಿಯಾಗಿ ಮತ್ತು ಕಸ‌‌ವಿಂಗಡಣೆ ಮಾಡಿ‌ ಪ್ರಧಾನಿ ಮೋದಿ ಅವರಿಂದಲೇ ಶಹಬ್ಬಾಸ್ ಗಿರಿ ಪಡೆದು, ಕೆಲಸ ಯಾವುದಾದರೇನು ನಿಷ್ಠ ಇರಬೇಕಷ್ಟೇ ಅನ್ನೋದನ್ನು ಈ ಇಬ್ಬರು ಮಹಿಳೆಯರು ಸಾಭೀತು ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:27 pm, Thu, 1 February 24

ಕಂಬಳ ಓಟವನ್ನು ಬೆರುಗಣ್ಣಿನಿಂದ ನೋಡಿದ ನಟಿ ಶಾನ್ವಿ
ಕಂಬಳ ಓಟವನ್ನು ಬೆರುಗಣ್ಣಿನಿಂದ ನೋಡಿದ ನಟಿ ಶಾನ್ವಿ
Video: ಕಾಶಿ ವಿಶ್ವನಾಥನಿಗೆ ಪ್ರಾರ್ಥನೆ ಸಲ್ಲಿಸಿದ ಲಾರೆನ್ ಪೊವೆಲ್
Video: ಕಾಶಿ ವಿಶ್ವನಾಥನಿಗೆ ಪ್ರಾರ್ಥನೆ ಸಲ್ಲಿಸಿದ ಲಾರೆನ್ ಪೊವೆಲ್
ಜಿಗಿದು, ಹಾರಿ ಅದ್ಭುತ ಕ್ಯಾಚ್ ಹಿಡಿದ ಡೆವಾಲ್ಡ್ ಬ್ರೆವಿಸ್
ಜಿಗಿದು, ಹಾರಿ ಅದ್ಭುತ ಕ್ಯಾಚ್ ಹಿಡಿದ ಡೆವಾಲ್ಡ್ ಬ್ರೆವಿಸ್
Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ