ಮಾಜಿ ಕೇಂದ್ರ ಸಚಿವ, ಹಿರಿಯ ರಾಜಕಾರಣಿ ಆರ್​ಎಲ್​ ಜಾಲಪ್ಪ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

| Updated By: ganapathi bhat

Updated on: Dec 12, 2021 | 4:08 PM

35 ದಿನಗಳಿಂದ ಜಾಲಪ್ಪ ವೆಂಟಿಲೇಟರ್​ನಲ್ಲಿ ಇದ್ದಾರೆ. ಕಿಡ್ನಿ ವೈಫಲ್ಯ ಆಗಿದೆ, ಡಯಾಲಿಸಿಸ್ ನಲ್ಲಿ ಇದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮಾಜಿ ಕೇಂದ್ರ ಸಚಿವ, ಹಿರಿಯ ರಾಜಕಾರಣಿ ಆರ್​ಎಲ್​ ಜಾಲಪ್ಪ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Follow us on

ಕೋಲಾರ: ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ರಾಜಕಾರಣಿ ಆರ್.ಎಲ್ ಜಾಲಪ್ಪ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದ ಆಸ್ಪತ್ರೆಗೆ ಭೇಟಿ ನೀಡಿ ಜಾಲಪ್ಪ ಅವರ ಆರೋಗ್ಯ ವಿಚಾರಿಸಿದ್ದಾರೆ. 35 ದಿನಗಳಿಂದ ಜಾಲಪ್ಪ ವೆಂಟಿಲೇಟರ್​ನಲ್ಲಿ ಇದ್ದಾರೆ. ಕಿಡ್ನಿ ವೈಫಲ್ಯ ಆಗಿದೆ, ಡಯಾಲಿಸಿಸ್ ನಲ್ಲಿ ಇದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅವರ ಜೀನ್ಸ್ ಗಟ್ಟಿಯಾಗಿದೆ ಹಾಗಾಗಿ ಅವರು ಆರೋಗ್ಯವಾಗಿದ್ದಾರೆ. ಇವತ್ತು ನಾನು ಬಂದಿದ್ದೇನೆ ಎಂದು ಕೂಗಿ ಹೇಳಿದಾಗ ಕಣ್ಣು ಬಿಟ್ಟು ನೋಡಿದರು. ಅವರು ಇನ್ನೂ ಗಟ್ಟಿಯಾಗಿದ್ದಾರೆ. 98 ವರ್ಷ ವಯಸ್ಸಾದರೂ ಆರೋಗ್ಯವಾಗಿದ್ದಾರೆ. ನಾವು ಹಿಂದೆ ಅವರನ್ನು ಭೇಟಿ ಮಾಡಿದ್ದಾಗಲೂ ಅವರಿಗೆ ‘‘ಜಾಲಪ್ಪನವರೇ ನೀವು ನೂರು ವರ್ಷ ಬದುಕಬೇಕು’’ ಎಂದಿದ್ದೆ ಎಂದು ಸಿದ್ದರಾಮಯ್ಯ ನೆನಪು ಮಾಡಿಕೊಂಡಿದ್ದಾರೆ.

ಅಲ್ಲದೆ ಅವರ ಜೊತೆಗಿನ ಕೆಲವು ಹಳೆಯ ನೆನಪುಗಳನ್ನು ಸಿದ್ದರಾಮಯ್ಯ ಮೆಲುಕು ಹಾಕಿದರು. ನಾವು ಜನತಾ ಪರಿವಾರದಿಂದಲೂ ಒಟ್ಟಿಗಿದ್ದೇವೆ. ಅವರು ಸದಾ ಸಾಮಾಜಿಕ ನ್ಯಾಯ ಹಾಗೂ ಹಿಂದುಳಿದವರ ಪರವಾಗಿದ್ದರು. ಕೋಲಾರದಿಂದಲೇ ಅಹಿಂದ ಪ್ರಾರಂಭ ಆಗಿದ್ದು, ನಾನು ಉದ್ಘಾಟನೆ ಮಾಡಿದ್ದೆ. ಜಾಲಪ್ಪನವರೇ ಅಧ್ಯಕ್ಷತೆ ವಹಿಸಿದ್ರು ಎಂದು ಸ್ಮರಿಸಿದ್ದಾರೆ.

ಇದನ್ನೂ ಓದಿ: ಮತಾಂತರ ನಿಷೇಧ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಮತಾಂತರ ಆಗುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದ ಹೆಚ್.ಆಂಜನೇಯ

ಇದನ್ನೂ ಓದಿ: Congress: ಕಹಳೆ ಊದುವ ಮೂಲಕ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ