Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತಾಂತರ ನಿಷೇಧ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಮತಾಂತರ ಆಗುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದ ಹೆಚ್.ಆಂಜನೇಯ

ಸದನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಿದ್ದರಾಮಯ್ಯ, ಮತಾಂತರ ನಿಷೇಧ ವಿಧೇಯಕವನ್ನು ನಾವು ವಿರೋಧಿಸುತ್ತೇವೆ ಎಂದರು.

ಮತಾಂತರ ನಿಷೇಧ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಮತಾಂತರ ಆಗುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದ ಹೆಚ್.ಆಂಜನೇಯ
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on: Dec 12, 2021 | 2:07 PM

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮತಾಂತರ ಕಾಯ್ದೆ ಜಾರಿ ಚರ್ಚೆ ಶುರುವಾಗಿದೆ. ಡಿಸೆಂಬರ್ 13ರಂದು ನಡೆಯಲಿರುವ ಬೆಳಗಾವಿ ಅಧಿವೇಶನದಲ್ಲೇ ಕಾಯ್ದೆ ಜಾರಿಗೊಳಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿವೆ. ಇನ್ನು ಮತ್ತೊಂದೆಡೆ ಮತಾಂತರ ನಿಷೇಧ ವಿಧೇಯಕವನ್ನು ನಾವು ವಿರೋಧಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.

ಸದನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಿದ್ದರಾಮಯ್ಯ, ಮತಾಂತರ ನಿಷೇಧ ವಿಧೇಯಕವನ್ನು ನಾವು ವಿರೋಧಿಸುತ್ತೇವೆ ಎಂದರು. ಇನ್ನು ಇದೇ ವೇಳೆ ಪರಿಷತ್ ವಿಪಕ್ಷ ನಾಯಕನ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ. ಉಳಿದಿದ್ದೆಲ್ಲವನ್ನೂ ಅಧಿವೇಶನದಲ್ಲೇ ಮಾತನಾಡುತ್ತೇನೆ ಎಂದಿದ್ದಾರೆ.

ಇನ್ನು ಮತ್ತೊಂದೆಡೆ ಮತಾಂತರ ನಿಷೇಧ ಕಾಯ್ದೆ ಬಲವಂತವಾಗಿ ಜಾರಿಗೆ ತಂದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅದನ್ನ ತೆಗೆದುಹಾಕ್ತೀವಿ. ಬಿಜೆಪಿಯವರು ತಂದ ಕಾಯ್ದೆ ಸುಟ್ಟು ಜನಪರ ಕಾಯ್ದೆ ತರುತ್ತೇವೆ ಎಂದು ಬಾಗಲಕೋಟೆಯಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಎಚ್ಚರಿಕೆ ಕೊಟ್ಟಿದ್ದಾರೆ. ಮತಾಂತರ ಆಗುವುದು ಅಭಿವ್ಯಕ್ತಿ ಸ್ವಾತಂತ್ರ್ಯ. ರಾಮ ರಾಮ ಅಂತಾರೆ, ರಾಮ ಏನೂ ಅವರಪ್ಪನ ಮನೆ ಸ್ವತ್ತಲ್ಲ. ನಾನು ಹಿಂದು ಧರ್ಮದಲ್ಲಿ ಇದ್ದೇನೆ. ರಾಮನಿಗೆ ಹತ್ತಿರವಾದ ಆಂಜನೇಯ ನನ್ನ ಹೆಸರು. ಯಾವ ಧರ್ಮದಲ್ಲಿ ಇರಬೇಕು ಎನ್ನುವುದು ನನಗೆ ಬಿಟ್ಟಿದ್ದು. ಮಲ ತಿನ್ನುವ ನಾಯಿ, ಬೆಕ್ಕುಗಳನ್ನ ಮನೆಯೊಳಗೆ ಬಿಡುತ್ತಾರೆ. ಮನುಷ್ಯರಾಗಿರುವ ನಮ್ಮನ್ನ ಸೌಜನ್ಯವಾಗಿಯೂ ಕಾಣುವುದಿಲ್ಲ ಎಂದು ಗರಂ ಆಗಿದ್ದಾರೆ.

ಇನ್ನು ಮಂಗಳೂರಿನಲ್ಲಿ ಒತ್ತಾಯದ ಮತಾಂತರಕ್ಕೆ ನಾಲ್ವರ ಬಲಿ ಪ್ರಕರಣಕ್ಕೆ ಸಂಬಂಧಿಸಿ ಮಾತು ಮುಂದುವರೆಸಿದ ಮಾಜಿ ಸಚಿವ ಹೆಚ್.ಆಂಜನೇಯ, ಅವರು ಯಾವ ಕಾರಣಕ್ಕೆ ಸತ್ತು ಹೋದ್ರೋ ಯಾರಿಗೆ ಗೊತ್ತು. ತನಿಖೆ ಆಗಿ ನ್ಯಾಯಾಧೀಶರು ಹೇಳಿದರಷ್ಟೇ ನಾವು ಒಪ್ಪಬಹುದು. ನಮ್ಮ ಧರ್ಮ ಚೆನ್ನಾಗಿದೆ ಎಂದು ಹೇಳಿ ಉಳಿಸಿಕೊಳ್ಳಲಿ. ಮಂಗಳೂರಿನಲ್ಲಿ ನಾಲ್ವರ ಆತ್ಮಹತ್ಯೆಗೆ ಅವರೇ ಹೊಣೆ. ಯಾಕೆ ಸಾಯಬೇಕಿತ್ತು? ಎಲ್ಲದಕ್ಕೂ ಕಾನೂನಿದೆ. ಮತಾಂತರಕ್ಕೆ ಬಲವಂತ ಮಾಡಿದ್ರೆ ರಕ್ಷಣೆಯನ್ನು ಕೇಳಬೇಕಿತ್ತು ಎಂದರು.

ಇದನ್ನೂ ಓದಿ: ಮತ್ತೆ ಜೋರಾದ ಮತಾಂತರ ಕಾಯ್ದೆ ಜಾರಿ ಚರ್ಚೆ; ಕಾಂಗ್ರೆಸ್ ವಿರೋಧ, ಭಾರತೀಯ ಕ್ರೈಸ್ತ ಒಕ್ಕೂಟದಿಂದ ಧರಣಿಗೆ ನಿರ್ಧಾರ