ಗೋಮಯ ಹಾಗೂ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶನ ಮೂರ್ತಿ; ಗೋಫಲ ಟ್ರಸ್ಟ್​ನಿಂದ ಮಾರುಕಟ್ಟೆಗೆ ಬಿಡುಗಡೆ

| Updated By: shruti hegde

Updated on: Sep 09, 2021 | 2:16 PM

Ganesha Chaturthi 2021: ಗೋಮಯ ಹಾಗೂ ಆವೆ ಮಣ್ಣಿನಿಂದ ಮಾಡುವ ಗಣೇಶ ಮೂರ್ತಿ ತಯಾರಿಕೆಗೆ ಯಾವುದೇ ರಾಸಾಯನಿಕ, ಬಣ್ಣ, ಅಂಟು ಉಪಯೋಗಿಸುವುದಿಲ್ಲ.

ಗೋಮಯ ಹಾಗೂ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶನ ಮೂರ್ತಿ; ಗೋಫಲ ಟ್ರಸ್ಟ್​ನಿಂದ ಮಾರುಕಟ್ಟೆಗೆ ಬಿಡುಗಡೆ
ಗೋಮಯ ಹಾಗೂ ಮಣ್ಣನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿ
Follow us on

ಇತ್ತೀಚಿನ ದಿನಗಳಲ್ಲಿ ಕೊರೊನಾ ಆತಂಕದ ನಡುವೆ ಪರಿಸರದ ಮೇಲಿನ‌ ಕಾಳಜಿ ಕೂಡಾ ಜನರಿಗೆ ಹೆಚ್ಚಾಗಿದೆ ಈ ನಿಟ್ಟಿನಲ್ಲಿ ಜನರ ಮಸ್ಥಿತಿಗೆ ತಕ್ಕಂತೆ, ಪರಿಸರ ಸ್ನೇಹಿಯಾಗಿ ಹಾಗೂ ಆಧ್ಯಾತ್ಮಿಕವಾಗಿ ಹಬ್ಬ ಆಚರಣೆ ಮಾಡಲು ದೇಸೀ ಹಾಗೂ ಪರಿಸರ ಸ್ನೇಹಿ ಗಣೇಶ ಸಿದ್ದವಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಗಂಗಾಪುರದ ಶ್ರೀ ರಾಘವೇಂದ್ರ ಗೋ ಆಶ್ರಮದಲ್ಲಿ ಸುಮಾರು ಮೂರು ಸಾವಿರ ಗಣೇಶ ಮೂರ್ತಿಗಳ‌ ತಯಾರಿ ಮಾಡಲಾಗಿದೆ. ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಆರಂಭವಾದ ಗೋಫಲ ಟ್ರಸ್ಟ್ ಈ ಪರಿಸರಸ್ನೇಹಿ ಗಣೇಶನ ಮೂರ್ತಿಯನ್ನು ಯೋಜಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಗೋಮಯ (ಹಸುವಿನ ಸೆಗಣಿ) ಹಾಗೂ ಆವೆ ಮಣ್ಣಿನಿಂದ ಮಾಡುವ ಗಣೇಶ ಮೂರ್ತಿ ತಯಾರಿಕೆಗೆ ಯಾವುದೇ ರಾಸಾಯನಿಕ, ಬಣ್ಣ, ಅಂಟು ಉಪಯೋಗಿಸುವುದಿಲ್ಲ. ಇನ್ನು, ಎರಡನೇ ಬಾರಿಗೆ ಈ ರೀತಿಯ ಗಣೇಶ ಮೂರ್ತಿಯನ್ನು ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ತಯಾರು ಮಾಡಲಾಗುತ್ತಿದೆ.

ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಪೂಜೆ

ಇಲ್ಲಿ ತಯಾರು ಮಾಡುವ ಗಣೇಶ ಮಾತ್ರವಲ್ಲ, ಅದರ ಪ್ಯಾಕಿಂಗ್​ಗೆ ಉಪಯೋಗಿಸಿದ ವಸ್ತುಗಳು ಕೂಡಾ ರಾಸಾಯನಿಕ ಹಾಗೂ ಮಾಲಿನ್ಯ ರಹಿತವಾಗಿದೆ. ಜತೆಗೆ ಗಣೇಶನ ಪೂಜೆಯ ನಂತರ ಪಾತ್ರೆಯ ನೀರಿನಲ್ಲಿ ಗಣೇಶ ಮೂರ್ತಿಯನ್ನು ಮುಳುಗಿಸಬಹುದು ನಂತರ ನೀರಿನಲ್ಲಿ ಕರಗಿದ ಗಣೇಶ ಮೂರ್ತಿಯನ್ನು ಗಿಡಗಳಿಗೆ ಗೊಬ್ಬರವಾಗಿ ಬಳಕೆ‌ಮಾಡಬಹುದು.

ಗಣೇಶ ಮೂರ್ತಿಯ ಜೊತೆಗೆ ಪೂಜಾ ವಿಧಾನದ ಕೈಪಿಡಿ
ಗಣೇಶ ಮೂರ್ತಿಯ ಜೊತೆಗೆ ಭಕ್ತರು ಸುಲಭವಾಗಿ ಪೂಜೆ ಮಾಡಲು ಅನುಕೂಲವಾಗುವಂತೆ ಮಂತ್ರ ಸಹಿತ ಪೂಜಾ ವಿಧಿವಿಧಾನಗಳನ್ನು ತಿಳಿಸುವ ಕರಪತ್ರ ಅಥವಾ ಕೈಪಿಡಿಯನ್ನು ನೀಡಲಾಗುತ್ತದೆ. ಸದ್ಯ ರಿಯಾಯಿತಿ ದರದಲ್ಲಿ ಗಣೇಶ ಮೂರ್ತಿಗಳನ್ನು ಅದರ ಅಳತೆಗೆ ತಕ್ಕಂತೆ ದರ ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ.

(ವರದಿ: ರಾಜೇಂದ್ರಸಿಂಹ)

ಇದನ್ನೂ ಓದಿ:

Ganesh Chaturthi 2021: ಗಣೇಶ ಚತುರ್ಥಿಗೆ ಗಣಪತಿಯನ್ನು ಸಿಂಗರಿಸಲು ಇಲ್ಲಿದೆ ಸರಳ ಉಪಾಯ

Ganesha Chaturthi 2021: ಗಣೇಶ ಚತುರ್ಥಿ ಆಚರಣೆಯ ಪೂಜಾ ವಿಧಾನ ಮತ್ತು ಶುಭ ಮುಹೂರ್ತ

Published On - 2:10 pm, Thu, 9 September 21