Ganesh Chaturthi 2021: ಗಣೇಶ ಚತುರ್ಥಿಗೆ ಗಣಪತಿಯನ್ನು ಸಿಂಗರಿಸಲು ಇಲ್ಲಿದೆ ಸರಳ ಉಪಾಯ

Ganesh Chaturthi 2021: ವರ್ಣರಂಜಿತ ಹೂವುಗಳು ನಿಮ್ಮ ಮನೆಯನ್ನು ಸುಂದರವಾಗಿಸುತ್ತದೆ. ಸೃಜನಾತ್ಮಕವಾಗಿ ಹೂವುಗಳನ್ನು ಜೋಡಿಸಬಹುದು.  ವಿಗ್ರಹದ ಮೇಲೆ ಹೂವಿನ ತೋರಣವನ್ನು ಇಡಬಹುದು ಮತ್ತು ಉಳಿದವನ್ನು ಪಾದಗಳ ಮೇಲೆ ಬಿಡಬಹುದು.

Ganesh Chaturthi 2021: ಗಣೇಶ ಚತುರ್ಥಿಗೆ ಗಣಪತಿಯನ್ನು ಸಿಂಗರಿಸಲು ಇಲ್ಲಿದೆ ಸರಳ ಉಪಾಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shruti hegde

Updated on: Sep 09, 2021 | 9:31 AM

ಈ ಕೊರೊನಾ ಕಾಲದಲ್ಲಿ  ಗಣೇಶ ಚತುರ್ಥಿಯ (Ganesh Chaturthi )ಪೂಜೆಗೆ  ಅಲಂಕಾರ ವಸ್ತುಗಳನ್ನು ಪೇಟೆಗೆ ಹೋಗಿ ಖರೀದಿಸಬೇಕು,ಅದು ರಿಸ್ಕ್ . ಇಂಥಾ ಸಮಯದಲ್ಲಿ ಮನೆಯಲ್ಲಿರುವ ವಸ್ತುಗಳನ್ನು ಬಳಸಿ  ಅಂದವಾಗಿ ಗಣೇಶನನ್ನು ಸಿಂಗಾರ ಮಾಡಬಹುದು. ಈ ಗಣೇಶ  ಚತುರ್ಥಿ ಆಚರಣೆಯನ್ನು ಇನ್ನಷ್ಟು ವಿಶೇಷವಾಗಿಸಲು ಸುಲಭವಾದ ಉಪಾಯ ಇಲ್ಲಿವೆ.

DIY ಅಲಂಕಾರಗಳು DIY ಅಲಂಕಾರಗಳು ಮಾಡಲು ಸುಲಭ ಮತ್ತು ಪರಿಸರ ಸ್ನೇಹಿ. ಆದ್ದರಿಂದ, ಸಾಂಪ್ರದಾಯಿಕ ಫ್ರಿಲ್‌ಗಳು ಮತ್ತು ಬಲೂನ್‌ಗಳಿಂದ ಅಲಂಕರಿಸುವ ಬದಲು, ಮನೆಯಲ್ಲಿಯೇ  ಸುಂದರವಾದ ಕಲಾತ್ಮಕ ರಟ್ಟಿನ ಪೆಟ್ಟಿಗೆಯಿಂದ ಇವುಗಳನ್ನು ತಯಾರಿಸಬಹುದು.

ವರ್ಣರಂಜಿತ ಹೂವುಗಳಿಂದ ಅಲಂಕರಿಸಿ ವರ್ಣರಂಜಿತ ಹೂವುಗಳು ನಿಮ್ಮ ಮನೆಯನ್ನು ಸುಂದರವಾಗಿಸುತ್ತದೆ. ಸೃಜನಾತ್ಮಕವಾಗಿ ಹೂವುಗಳನ್ನು ಜೋಡಿಸಬಹುದು.  ವಿಗ್ರಹದ ಮೇಲೆ ಹೂವಿನ ತೋರಣವನ್ನು ಇಡಬಹುದು ಮತ್ತು ಉಳಿದವನ್ನು ಪಾದಗಳ ಮೇಲೆ ಬಿಡಬಹುದು. ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ಬೇರೆ ಬೇರೆ ಬಣ್ಣದ ಹೂವಿನ ದಳಗಳಿಂದ ರಂಗೋಲಿ ತಯಾರಿಸಬಹುದು. ಅಲಂಕರಿಸುವ ಮೇಣದ ಬತ್ತಿಗಳು, ದಿಯಾಗಳು ಮತ್ತು ದೀಪಗಳನ್ನು ಬಳಸುವ ಮೂಲಕವೂ  ಅಂದ ಹೆಚ್ಚಿಸಬಹುದು.

ನಿಮ್ಮ ಮನೆಯನ್ನು ಬೆಳಗಿಸಲು, ಮೇಣದ ಬತ್ತಿಗಳು ದಿಯಾಗಳನ್ನು ಚೌಕಿ ಅಥವಾ  ಸುತ್ತಲೂ ಇರಿಸಬಹುದು. ಪೂಜಾ ಕೊಠಡಿಯನ್ನು ಬೆಳಕಿನ ದಾರಗಳಿಂದ (ಪುಟ್ಟ  ಬಲ್ಬ್ ) ಅಲಂಕರಿಸುವುದರಿಂದ ನಿಮ್ಮ ಅಲಂಕಾರವು ಪ್ರಕಾಶಮಾನವಾಗಿರುತ್ತದೆ. ವರ್ಣರಂಜಿತ ಬೆಳಕನ್ನು ಸೇರಿಸುವುದರಿಂದ ಕೊಠಡಿಯು ಹೆಚ್ಚು ಅಂದವಾಗಿ ಗೋಚರಿಸುತ್ತದೆ.

ಬಾಗಿಲುಗಳು ಝಗಮಗಿಸಲಿ ಗಣೇಶನ ಗುಡಿಯ ಬಾಗಿಲುಗಳನ್ನು ಬೆಳಕಿನಿಂದ ಸಿಂಗರಿಸಿ. ಇದು ಪ್ರವೇಶದ್ವಾರದಲ್ಲಿ ಅಥವಾ ಪೂಜಾ ಕೋಣೆಯ ಒಳಗೆ  ಬೆಳಕು  ಝಗಮಗಿಸಲಿ.

ಹೂವಿನ ಹಾರವನ್ನು ಅಂದವಾಗಿ ಜೋಡಿಸಿ ನೈಸರ್ಗಿಕ ನೋಟಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ. ಹೂವುಗಳು ಮತ್ತು ಎಲೆಗಳ ಹಾರ ಮಾತ್ರ ಅದನ್ನು ಉತ್ತಮವಾಗಿ ಕಾಣುವಂತೆ ಮಾಡುತ್ತದೆ. ಅನನ್ಯ ಸ್ಪರ್ಶದೊಂದಿಗೆ ತಾಜಾ ಮತ್ತು ಸುಂದರವಾದ ಹೂವುಗಳಿಂದ ಬಾಗಿಲು,ಗುಡಿಯನ್ನು ಸಿಂಗರಿಸಿ.

ಹೂವು  ಸಕಾರಾತ್ಮಕತೆಯ ಸಂಕೇತ.  ಭಾರತೀಯ ಆಚರಣೆಗಳಲ್ಲಿ ಹೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇವು  ವಾತಾವರಣ, ಬಣ್ಣ ಮತ್ತು ಹಬ್ಬಕ್ಕೆ ಕಳೆ  ತರುತ್ತದೆ. ಆದ್ದರಿಂದ, ಗಣೇಶ ಮೂರ್ತಿಯ ಬಣ್ಣ ಮತ್ತು ಪೂಜೆ ಅಲಂಕಾರಕ್ಕೆ ಪೂರಕವಾದ ಹೂವುಗಳನ್ನು ಆರಿಸಿ. ಬಣ್ಣಗಳನ್ನು ಮಿಶ್ರಣ ಮಾಡಬಹುದು, ಆದರೆ ಹೆಚ್ಚಾಗಿ ಹಳದಿ, ಕಿತ್ತಳೆ ಮತ್ತು ಕೆಂಪು ಹೂವುಗಳನ್ನು ಅಲಂಕಾರಕ್ಕೆ ಆದ್ಯತೆ ನೀಡಿ.  ಹೂವಿನ ದಳಗಳಿಂದಲೇ ರಂಗೋಲಿಯನ್ನೂ ಬಿಡಿಸಬಹುದು.

ಇದನ್ನೂ ಓದಿ: Ganesha Chaturthi 2021: ಗಣೇಶ ಮೂರ್ತಿ ತಯಾರಿಕೆ; ಕಲೆ ಮಾಸುತ್ತಿದೆ, ಎಲ್ಲವೂ ಮುಂದಿನ ಪೀಳಿಗೆಯ ಕೈಯ್ಯಲ್ಲಿದೆ ಎಂದ ವಿನಯ್ ಗುಡಿಗಾರ

(Ganesh Chaturthi Special DIY easy and creative home decoration ideas )

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್