AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ganesha Chaturthi 2021: ಗಣೇಶ ಚತುರ್ಥಿ ಆಚರಣೆಯ ಪೂಜಾ ವಿಧಾನ ಮತ್ತು ಶುಭ ಮುಹೂರ್ತ

ಗಣೇಶ ಚತುರ್ಥಿ 2021: ಗಣೇಶನು ಸಂತುಷ್ಟನಾದರೆ ಮನೆಯಲ್ಲಿ ಕಷ್ಟಗಳೆಲ್ಲ ಪರಿಹಾರವಾಗುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಭಕ್ತರಲ್ಲಿದೆ.

Ganesha Chaturthi 2021: ಗಣೇಶ ಚತುರ್ಥಿ ಆಚರಣೆಯ ಪೂಜಾ ವಿಧಾನ ಮತ್ತು ಶುಭ ಮುಹೂರ್ತ
ಗಣೇಶ ಚತುರ್ಥಿ
TV9 Web
| Updated By: shruti hegde|

Updated on:Sep 09, 2021 | 11:40 AM

Share

ನಾಳೆ( ಸೆಪ್ಟೆಂಬರ್ 10, ಶುಕ್ರವಾರ) ಗಣೇಶ ಚತುರ್ಥಿಯನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಸಾಂಪ್ರದಾಯಿಕವಾಗಿ ಭಾದ್ರಪದ ಮಾಸ ಶುಕ್ಲ ಪಕ್ಷದ 4ನೇ ದಿನದಂದು ಗಣೇಶನ ಜನ್ಮದಿನ ಎಂದು ಪುರಾಣದಿಂದ ತಿಳಿದು ಬಂದಿದೆ. ಮನೆ ಮನೆಗಳಲ್ಲಿ ಗಣೇಶನ ವಿಗ್ರಹ ಕೂರಿಸಿ ವಿಶೇಷ ಪೂಜೆ ಕೂಗೊಳ್ಳುವ ಮೂಲಕ ಹಿಂದೂ ಜನರು ಈ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಮುಂದಿನ ದಿನಗಳಲ್ಲಿ ಜೀವನ ತುಂಬಾ ಖುಷಿಯೇ ತುಂಬಿರಲಿ, ಸುಖ ನೆಮ್ಮದಿಯೇ ಜೀವನದಲ್ಲಿರಲಿ, ಸಂಪತ್ತು ಲಭಿಸಲಿ ಎಂದು ಗಣೇಶನನ್ನು ಈ ದಿನ ವಿಶೇಷವಾಗಿ ಆರಾಧಿಸಲಾಗುತ್ತದೆ. ಸಮಸ್ಯೆಗಳೆಲ್ಲ, ಕಷ್ಟಗಳೆಲ್ಲಾ ಬಹುಬೇಗ ಬದುಕಿನಿಂದ ದೂರವಾಗಲಿ ಎಂದು ವಿಘ್ನ ನಿವಾರಕನಲ್ಲಿ ಭಕ್ತಿಯಿಂದ ಬೇಡಿಕೊಳ್ಳುವ ದಿನವಿದು, ಈ ದಿನದಂದು 108 ದರ್ಬೆಗಳನ್ನು ಕೊಯ್ದು ಗಣೇಶನಿಗೆ ಅರ್ಪಿಸಿದರೆ ನಿಮ್ಮ ಬೇಡಿಕೆಗಳೆಲ್ಲವೂ ಪೂರೈಕೆಯಾಗುತ್ತದೆ ಎಂಬ ನಂಬಿಕೆ ಇದೆ.

ಮನೆಯಲ್ಲಿ ಗಣೇಶನ ಮಣ್ಣಿನ ವಿಗ್ರಹವನ್ನು ಕೂರಿಸಿ ವಿಶೇಷವಾಗಿ ಪೂಜೆ ಸಲ್ಲಿಸಿ, ಗಣಪತಿಗೆ ಇಷ್ಟವಾದ ಖಾದ್ಯಗಳನ್ನು ಮಾಡಿ ನೈವೇದ್ಯ ನೀಡಲಾಗುತ್ತದೆ. ಗಣಪತಿಗೆ ಪ್ರಿಯವಾದ ಮೋದಕ ಜತೆ ನಾನಾ ವಿಧದ ತಿನಿಸುಗಳು ಈ ದಿನದಂದು ವಿಶೇಷ. ಗಣೇಶನು ಸಂತುಷ್ಟನಾದರೆ ಮನೆಯಲ್ಲಿ ಕಷ್ಟಗಳೆಲ್ಲ ಪರಿಹಾರವಾಗುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಭಕ್ತರಲ್ಲಿದೆ. ಗಣೇಶನನ್ನು ಎಲ್ಲಾ ದೇವಾಲಯಗಳಲ್ಲಿ ಮೊದಲ ಆರಾಧನಕನನ್ನಾಗಿ ಪೂಜಿಸಲಾಗುತ್ತದೆ.

ಶುಭ ಮುಹೂರ್ತ: 2021 ಸೆಪ್ಟೆಂಬರ್ 10ನೇ ತಾರೀಕು ಶುಕ್ರವಾರ ಗಣೇಶ ಚತುರ್ಥಿ. ಮುಂಜಾನೆ 11:03ರಿಂದ ಮಧ್ಯಾಹ್ನ 1:33ರವರೆಗೆ ಪೂಜೆಯ ಶುಭ ಮುಹೂರ್ತವಿದೆ.

ಚತುರ್ಥಿ ತಿಥಿ ಆರಂಭ: ಸೆಪ್ಟೆಂಬರ್ 10ರಂದು ಶುಕ್ರವಾರ ಮಧ್ಯಾಹ್ನ 12:18 ರಿಂದ ಆರಂಭಗೊಳ್ಳುತ್ತದೆ. ಸೆಪ್ಟೆಂಬರ್ 10 ಅದೇ ದಿನ ರಾತ್ರಿ 9:57ಕ್ಕೆ ಕೊನೆಗೊಳ್ಳುತ್ತದೆ.

ಗಣೇಶ ವಿಸರ್ಜನೆ ಸಮಯ: ಸೆಪ್ಟೆಂರ್ 19 ರಂದು ಭಾನುವಾರ ಮಾಡಲಾಗುವುದು. ಇಲ್ಲವೇ ಕೆಲವರ ಮನೆಯಲ್ಲಿ ಗಣೇಶ ಹಬ್ಬದ ರಾತ್ರಿಯೇ ವಿಸರ್ಜನೆ ಮಾಡುತ್ತಾರೆ.

ಪೂಜಾ ವಿಧಾನ ಬೆಳಿಗ್ಗಿ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಉಡುಪು ಧರಿಸಿ. ಮನೆಯನ್ನು ಗಂಗಾಜಲದಿಂದ ಶುದ್ಧಗೊಳಿಸಿ. ಬಳಿಕ ದೇವರ ಕೋಣೆಯನ್ನು ಸ್ವಚ್ಛಗೊಳಿಸಿದ ಬಳಿಕ ಮಣೆಯ ಮೇಲೆ ಕೆಂಪು ಬಟ್ಟೆಯನ್ನು ಹಾಸಿ ಅದರ ಮೇಲೆ ಗಣಪನ ಮೂರ್ತಿಯನ್ನು ಕೂರಿಸಿ. ಕೆಲವರು ಈ ದಿನದಂದು ಉಪವಾಸವನ್ನೂ ಕೈಗೊಳ್ಳುತ್ತಾರೆ. ವಿಘ್ನ ನಿವಾರಕನಿಗೆ ಇಷ್ಟವಾಗುವ ಮೋದಕ, ಲಡ್ಡುಗಳನ್ನು ನೈವೇದ್ಯಕ್ಕೆ ಇಟ್ಟು ವಿಶೇಷ ಪೂಜೆ ಕೈಗೊಳ್ಳಿ. ಗಣೇಶನ ಭಜನೆ, ಹಾಡಿನ ಜತೆಗೆ ಓಂ ಗಣಾಧಿಪತಯೇ ನಮಃ ಎಂಬ ಪಂತ್ರವನ್ನು ಪಠಿಸುತ್ತಾ ಗಣೇಶನ ಆರಾಧನೆಯಲ್ಲಿ ತೊಡಗಿಕೊಳ್ಳಲಾಗುವುದು.

ಇದನ್ನೂ ಓದಿ:

Ganesh Chaturthi 2021 Recipe: ಗಣೇಶ ಹಬ್ಬಕ್ಕೆ ಹಾಸನ ಸ್ಟೈಲ್​ ಮೋದಕ ಮಾಡಿ ರುಚಿ ಸವಿಯಿರಿ

Ganesha Chaturthi 2021: ಗಣೇಶ ಹಬ್ಬದ ದಿನ ವಿನಾಯಕನಿಗೆ ಈ ಐದು ವಸ್ತು ಸಮರ್ಪಿಸಿ, ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ

(Ganesha chaturthi 2021 know about shubhmuhurta puja vidhi vidhana and importance check in kannada)

Published On - 11:31 am, Thu, 9 September 21